ದೆಹಲಿ, ಹರ್ಯಾಣ ಭಾಗದಲ್ಲಿ ಕಂಪಿಸಿದ ಭೂಮಿ; ಮನೆಯಿಂದ ಹೊರಬಂದ ಜನ!

By Suvarna News  |  First Published Jul 5, 2021, 11:17 PM IST
  • ಅನ್‌ಲಾಕ್‌ನಿಂದ ಸಹಜಸ್ಥಿತಿಗೆ ಮರಳುತ್ತಿದ್ದ ಬೆನ್ನಲ್ಲೇ ಭೂಕಂಪನ ಶಾಕ್
  • ಹರ್ಯಾಣ, ರಾಷ್ಟ್ರ ರಾಜಧಾನಿ ವಲಯದಲ್ಲಿ ಕಂಪಿಸಿದ ಭೂಮಿ
  • ಭೂಕಂಪನಕ್ಕೆ ಮನೆ, ಕಟ್ಟಟದಿಂದ ಹೊರಬಂದ ಜನ

ನವದೆಹಲಿ(ಜು.05): ಕೊರೋನಾ ಅನ್‌ಲಾಕ್‌ನಿಂದ ಜನಜೀವನ ಸಹಸ ಸ್ಥಿತಿಗೆ ಮರಳುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿ, ಹರ್ಯಾಣ ಭಾಗದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.7 ರಷ್ಟು ತೀವ್ರತೆಯ ಲಘು ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ಕೋಣೆ ಕಂಪಿಸುತ್ತಿದೆ, ಇದು ಭೂಕಂಪನ; ಲೈವ್‌ನಲ್ಲಿ ರಾಹುಲ್ ಗಾಂಧಿ ಹೇಳಿದ ಮಾತು ವೈರಲ್!.

Tap to resize

Latest Videos

ರಾತ್ರಿ 10.40ರ ವೇಳೆ ದೆಹಲಿಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಲಘು ಭೂಕಂಪದ ಮೂಲ ಕೇಂದ್ರ ಹರ್ಯಾಣದ ಝಜ್ಜಾರ್ ಎಂದು ಮಾಪನ ಕೇಂದ್ರ ಹೇಳಿದೆ. ಸುಮಾರು ರಾತ್ರಿ 10.36ರ ವೇಳೆ ಝಜ್ಜಾರ್‌ನಲ್ಲಿ ಮೊದಲು ಲಘು ಭೂಮಿ ಕಂಪಿಸಿದೆ. 

ಹಿಮಾಲಯ ಸಂಕಟ, ಉತ್ತರ ಭಾರತಕ್ಕೆ ಕಾದಿದ್ಯಾ ಕಂಟಕ?

ಈ ಕಂಪನದ ಪ್ರಭಾವ ರಾಷ್ಟ್ರ ರಾಜಧಾನಿ ವಲಯಕ್ಕೂ ಹರಡಿದೆ. ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಲಘು ಭೂಕಂಪನವಾಗಿತ್ತು. ತಜಕಿಸ್ತಾನದಲ್ಲಿ 6.3 ರಷ್ಟು ತೀವ್ರತೆ ಭೂಕಂಪನ ಸಂಭವಿಸಿತ್ತು. ಇದರಿಂದ ದೆಹಲಿ ವಲಯದಲ್ಲೂ ಭೂಮಿ ಲಘುವಾಗಿ ಕಂಪಿಸಿತ್ತು.

click me!