ಕರ್ನಾಟಕ, ಪಂಜಾಬ್ ಬಳಿಕ ಇದೀಗ ಹರ್ಯಾಣ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!

By Suvarna NewsFirst Published Jul 5, 2021, 9:28 PM IST
Highlights
  • ಕಾಂಗ್ರೆಸ್ ಹೈಕಮಾಂಡ್‌ಗೆ ದೇಶದ ಬದಲು ಪಕ್ಷ ನಿರ್ವಹಿಸುವುದೇ ದೊಡ್ಡ ಸವಾಲು
  • ಕರ್ನಾಟಕ, ಪಂಜಾಬ್ ಕಾಂಗ್ರೆಸ್ ಜಗಳ ನಡುವೆ ತಾರಕಕ್ಕೇರಿದ ಹರ್ಯಾಣ ಜಟಾಪಟಿ
  • ಮಾಜಿ ಸಿಎಂ, ಪಕ್ಷದ ಅಧ್ಯಕ್ಷರ ಭಿನ್ನಮತ ಸ್ಫೋಟ

ಹರ್ಯಾಣ(ಜು.05):  ಕಾಂಗ್ರೆಸ್ ಹೈಕಮಾಂಡ್‌ಗೆ ಇದೀಗ ಮತ್ತೊಂದು ರಾಜ್ಯದ ತಲೆನೋವು ಹೆಚ್ಚಾಗಿದೆ. ಕರ್ನಾಟಕ ಕಾಂಗ್ರೆಸ್, ಪಂಜಾಬ್ ಕಾಂಗ್ರೆಸ್ ಪಕ್ಷದಲ್ಲಿನ ಜಟಾಪಟಿ ತಾರಕಕ್ಕೇರಿರುವ ಬೆನ್ನಲ್ಲೇ ಇದೀಗ ಹರ್ಯಾಣ ಕಾಂಗ್ರೆಸ್‌ನಲ್ಲಿ ಭಿನ್ನಮತ ಬಹಿರಂವಾಗಿ ಸ್ಫೋಟಗೊಂಡಿದೆ. 

ಕುರ್ಚಿಗಾಗಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಮಧ್ಯೆ ಬಿಗ್‌ ಫೈಟ್‌..!.

ಕಾಂಗ್ರೆಸ್ ಹಿರಿಯ ನಾಯಕ ಭೂಪಿಂದರ್ ಹೂಡ ಹಾಗೂ ಸದ್ಯ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜಾ ನಡುವಿನ ಜಟಾಪಟಿ ತೀವ್ರಗೊಂಡಿದೆ. ಸೆಲ್ಜಾ ಕುಮಾರಿಯನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ. ಎರಡು ಬಣಗಳ ಜಗಳ ಇದೀಗ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಕಾಂಗ್ರೆಸ್‌ನಿಂದ ಒಂದು ಕಾಲು ಹೊರಕ್ಕೆ; AAP ಪಕ್ಷದ ಪಂಜಾಬ್ ಸಿಎಂ ಅಭ್ಯರ್ಥಿಯಾಗ್ತಾರ ಸಿಧು?.

ಭೂಪಿಂದರ್ ಹೂಡ ಬಣದ 19 ಶಾಸಕರು ಕಾಂಗ್ರೆಸ್ ಜನರಲ್ ಸೆಕ್ರೆಟರಿ ಕೆಸಿ ವೇಣುಗೋಪಾಲ್ ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ಮುಂಬರುವ ಚುನಾವಣೆ ಹಾಗೂ ಕಾಂಗ್ರೆಸ್ ಪಕ್ಷದ ಬೇರು ಬಲಪಡಿಸಲು ಭೂಪಿಂದರ್ ಹೂಡ ನಾಯಕತ್ವದ ಅಗತ್ಯವಿದೆ. ಹೀಗಾಗಿ ಕುಮಾರಿ ಸೆಲ್ಜಾ ಅವರನ್ನು ತಕ್ಷಣವೇ ಅಧ್ಯಕ್ಷೆ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಹಾಗೂ ಕರ್ನಾಟಕ ಕಾಂಗ್ರೆಸ್‌ನಲ್ಲಿ ಇದೇ ನಾಯಕತ್ವದ ವಿಚಾರವೇ ಜಟಾಪಟಿಗೆ ಕಾರಣವಾಗಿದೆ. ಪಂಜಾಬ್‌ನಲ್ಲಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಧು ನಡುವೆ ಸಮರ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ನಡವೆ ಜಟಾಪಟಿ ನಡೆಯುತ್ತಿದೆ.

click me!