PubG ಆಡ್ತಾ ಯುಪಿ ಯುವಕನೊಂದಿಗೆ ಲವ್‌, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ!

Published : Jul 03, 2023, 10:01 PM IST
PubG ಆಡ್ತಾ ಯುಪಿ ಯುವಕನೊಂದಿಗೆ ಲವ್‌, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ!

ಸಾರಾಂಶ

ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು. ಮಹಿಳೆ ಪಾಕಿಸ್ತಾನದವಳು ಎಂಬುದು ಮನೆಯ ಮಾಲೀಕರಿಗೆ ತಿಳಿದಿರಲಿಲ್ಲ.  

ನವದೆಹಲಿ (ಜು.3):  ಪಬ್‌ಜೀ ಕ್ರೇಜ್ ನಿಮಗೆಲ್ಲರಿಗೂ ಗೊತ್ತು. ಮಕ್ಕಳು ಮತ್ತು ಯುವಕರಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಆಟವು ಈಗ ಹೃದಯಗಳನ್ನೂ ಒಂದುಗೂಡಿಸುವ ಕೆಲಸವನ್ನು ಪ್ರಾರಂಭಿಸಿದೆ. ಪಬ್‌ಜೀ ಮೂಲಕ ಇಬ್ಬರು ವ್ಯಕ್ತಿಗಳು ಒಂದಾಗಿರುವ ಆಗಿರುವ ಅನೇಕ ಸುದ್ದಿಗಳನ್ನು ನೀವು ಓದಿರಬಹುದು. ಆದರೆ, ಇತ್ತೀಚೆಗೆ ಇದೇ ರೀತಿಯ ಒಂದು ಸುದ್ದಿ ವೈರಲ್‌ ಆಗಿದ್ದು, ಇದು ಬರೀ ಹುಡುಗ-ಹುಡುಗಿ ಪ್ರೀತಿ ಮಾತ್ರವಲ್ಲ, ಎರಡು ದೇಶಗಳ ನಡುವಿನ ಪ್ರೇಮಿಗಳನ್ನು ಒಂದು ಮಾಡಿದೆ. ಪಬ್‌ಜೀ ಆಡುತ್ತಲೇ ಭಾರತದ ಉತ್ತರ ಪ್ರದೇಶದ ಮೂಲದ ಯುವಕ ಪ್ರೀತಿಗೆ ಬಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಗುಲಾಮ್‌ ಹೈದರ್‌ ಈಗ ಎಲ್ಲವನ್ನೂ ತೊರೆದು ನೇಪಾಳ ಮಾರ್ಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಬಾಡಿಗೆಮನೆಯನ್ನೂ ಪಡೆದುಕೊಂಡು ಇಬ್ಬರೂ ಒಂದಾಗಿ ಬಾಳುತ್ತಿದ್ದರು ಎನ್ನುವ ವಿಚಾರವೂ ಬಹಿರಂಗವಾಗಿದೆ. ಪಾಕಿಸ್ತಾನಿ ಮಹಿಳೆ ಸೀಮಾಗೆ ನಾಲ್ವರು ಮಕ್ಕಳಿದ್ದಾರೆ. ಪಬ್‌ಜೀ ಮೂಲಕ ಪರಿಚಯವಾದ ಯುವಕನ ಜೊತೆಗಿನ ಪ್ರೀತಿ ಎಷ್ಟು ಗಾಢವಾಗಿತ್ತು ಎಂದರೆ, ಆಕೆ ತನ್ನ ನಾಲ್ವರೂ ಮಕ್ಕಳನ್ನೂ ಕರೆದುಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಮಹಿಳೆ ಸೀಮಾ ನೇಪಾಳದ ಮೂಲಕ ತನ್ನ ಮಕ್ಕಳೊಂದಿಗೆ ರುಬಪುರಕ್ಕೆ ಆಗಮಿಸಿದ್ದು, ತನ್ನ ಪ್ರೇಮಿ ಸಚಿನ್‌ ಜೊತೆ ಮುಂದಿನ ಜೀವನವನ್ನು ಕಳೆಯಬೇಕು ಎಂದು ನಿರ್ಧಾರ ಮಾಡಿದ್ದಾಳೆ.

ನೇಪಾಳ ಮೂಲಕ ಭಾರತಕ್ಕೆ: ಮಹಿಳೆ ಕೂಡ ಕಳೆದ 1 ತಿಂಗಳಿನಿಂದ ರಬುಪುರದ ಅಂಬೇಡ್ಕರ್ ನಗರದಲ್ಲಿ ಸಚಿನ್ ಜೊತೆ ವಾಸಿಸುತ್ತಿದ್ದಳು. ಭಾರತೀಯ ಪೌರತ್ವ ಪಡೆಯಲು ಸಚಿನ್ ಅವರನ್ನು ಮದುವೆಯಾಗಲು ಬಯಸಿದ್ದರು. ಅಷ್ಟರಲ್ಲಿ ಪೊಲೀಸರಿಗೆ ಈ ವಿಷಯ ತಿಳಿದಿದೆ. ಪೊಲೀಸರು ತನಿಖೆ ಆರಂಭಿಸಿದ ಮಾಹಿತಿ ಸಿಕ್ಕ ಬೆನ್ನಲ್ಲಿಯೇ ಮಹಿಳೆ ತನ್ನ ನಾಲ್ವರು ಮಕ್ಕಳು ಹಾಗೂ ಸಚಿನ್‌ ಜೊತೆ ಓಡಿಹೋಗಿದ್ದರು. ಇದು ಪ್ರೇಮ ಪ್ರಕರಣವೇ ಅಥವಾ ಹನಿ ಟ್ರ್ಯಾಪ್ ಮೂಲಕ ನಡೆದ ಪಿತೂರಿಯೇ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಮಹಿಳೆಗಾಗಿ ಭರ್ಜರಿ ಶೋಧ ಕಾರ್ಯ: ಮಾಹಿತಿಯ ಪ್ರಕಾರ, ಮಹಿಳೆಯು ಪಬ್‌ಜೀ ಆಡುವಾಗ ಸಚಿನ್‌ನೊಂದಿಗೆ ಸ್ನೇಹ ಬೆಳೆಸಿದ್ದಳು. ಈ ಸ್ನೇಹದಿಂದಾಗಿ ಇಬ್ಬರೂ ಪರಸ್ಪರ ಆಪ್ತವಾಗಿ ಮಾತನಾಡಲು ಆರಂಭ ಮಾಡಿದ್ದರು. ಮೊಬೈಲ್‌ ಸಂಖ್ಯೆಗಳನ್ನು ಪರಸ್ಪರ ಹಂಚಿಕೊಂಡು ದಿನಪೂರ್ತಿ ಚಾಟಿಂಗ್‌ ನಡೆಸುತ್ತಿದ್ದರು ಎನ್ನಲಾಗಿದೆ. ಅದಲ್ಲದೆ, ಪಾಕಿಸ್ತಾನಿ ಮಹಿಳೆ ಸಚಿನ್‌ ಜೊತೆ ವಿಡಿಯೋ ಕಾಲ್‌ನಲ್ಲಿಯೂ ಮಾತನಾಡಲು ಆರಂಭಿಸಿದ್ದರು. ಇದು ಬಳಿಕ ಪ್ರೀತಿಗೆ ತಿರುಗಿತ್ತು. ಸಚಿನ್‌ ಜೊತೆ ಬಾಳುವ ಸಲುವಾಗಿ ಪಾಕಿಸ್ತಾನಿ ಮಹಿಳೆ ನೇಪಾಳದ ವೀಸಾ ಪಡೆದು, ನೇಪಾಳ ಮೂಲಕವಾಗಿ ಉತ್ತರ ಪ್ರದೇಶದ ರಬುಪುರಕ್ಕೆ ಪ್ರೇಮಿ ಸಚಿನ್‌ ಜೊತೆ ವಾಸ ಮಾಡಲು ಬಂದಿದ್ದಳು. ಮದುವೆಯಾಗುವ ನಿಟ್ಟಿನಲ್ಲಿ ಇಬ್ಬರೂ ಕಾನೂನು ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದರು. ಅಷ್ಟರಲ್ಲಿ ಗೌತಮ್ ಬುದ್ಧನಗರ ಪೊಲೀಸರಿಗೆ ಈ ವಿಷಯ ತಿಳಿಯಿತು. ಮಹಿಳೆಯನ್ನು ಗೂಢಚಾರಣಿ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಪತ್ತೆಯಾಗಿರುವ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪ್ರಿಯಕರನ ಬಂಧನ ಮಾಡಿದ್ದಾರೆ. 

ಹರಟೆ ಹೊಡೆಯುವಾಗ ಬಂದ ಐಡಿಯಾ.. 80 ರೂ.ನಲ್ಲಿ ಶುರುವಾದ ಬ್ಯುಸಿನೆಸ್ ಈಗ ವಿಶ್ವವ್ಯಾಪಿ

ಇವರಿಬ್ಬರೂ ವಾಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನ ಮಾಲೀಕ ಬ್ರಿಜೇಶ್‌ ಮಾತನಾಡಿದ್ದು, 'ಮೇ ತಿಂಗಳಲ್ಲಿ ಇವರು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಇಬ್ಬರೂ ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದು, ತಮಗೆ ನಾಲ್ವರು ಮಕ್ಕಳಿದೆ ಎಂದಿದ್ದರು' ಎಂದು ಮಾಹಿತಿ ನೀಡಿದ್ದಾರೆ. ಆಕೆ ಎಂದಿಗೂ ನನಗೆ ಪಾಕಿಸ್ತಾನದವಳ ರೀತಿ ಕಂಡಿರಲಿಲ್ಲ. ಸಲ್ವಾರ್‌ ಹಾಗೂ ಸೀರೆಯನ್ನು ಧರಿಸಿಯೇ ಇರುತ್ತಿದ್ದರು ಎಂದು ಮನೆಯ ಮಾಲೀಕ ತಿಳಿಸಿದ್ದಾರೆ. ಸಚಿನ್‌ ಹಾಗೂ ಸೀಮಾರನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಸ್ಮೃತಿ ಇರಾನಿ ಮತ್ತು ಏಕ್ತಾ ಕಪೂರ್ ನಂಟಿನ ಬಗ್ಗೆ ಸತ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ