
ಚೆನ್ನೈ (ಜು.3): ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಸೋಮವಾರ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೋಮವಾರ ರಾತ್ರಿ ಎಂಡೋಸ್ಕೋಪಿಗೆ ಒಳಗಾಗಲಿದ್ದು, ಮಂಗಳವಾರ ಬೆಳಗ್ಗೆ ಸಿಎಂ ಸ್ಟಾಲಿನ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆ ಪ್ರಕಟಿಸಿದ ಹೆಲ್ತ್ ಬುಲೆಟಿನ್‌ನಲ್ಲಿ ಎಂದಿನ ಹೆಲ್ತ್ ಚೆಕ್‌ಅಪ್‌ಗಾಗಿ ಸ್ಟ್ಯಾಲಿನ್ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಡಿಸ್ಕಾರ್ಚ್ ಆಗಲಿದೆ ಎಂದಷ್ಟೇ ಮಾಹಿತಿ ನೀಡಿದೆ. ಇದಕ್ಕೂ ಮುನ್ನ ಸಿಎಂ ಸ್ಟಾಲಿನ್ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದು, ಪವಾರ್ ಅವರ ಸೋದರಳಿಯ ಅಜಿತ್ ಬಂಡಾಯದ ಹಿನ್ನೆಲೆಯಲ್ಲಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ. ಶರದ್ ಪವಾರ್ ಅವರಿಗೆ ಡಿಎಂಕೆ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಭಾನುವಾರ ರಾಜಭವನಕ್ಕೆ ಆಗಮಿಸಿದ ಅಜಿತ್ ಪವಾರ್ ಮಹಾ ವಿಕಾಸ್ ಅಘಾಡಿಯಲ್ಲಿ ಅಚ್ಚರಿ ಮೂಡಿಸಿದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಸೋದರಳಿಯನ ಯೋಜನೆಯ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಕೆಲವು ಶಾಸಕರು ಎನ್‌ಸಿಪಿ ತೊರೆಯಬಹುದು ಎಂದು ಹೇಳಿದ್ದರು.ಪಕ್ಷದ 53 ಶಾಸಕರಲ್ಲಿ 40 ಮತ್ತು ಒಂಬತ್ತು ಎಂಎಲ್‌ಸಿಗಳ ಪೈಕಿ ಆರು ಮಂದಿಯ ಬೆಂಬಲವನ್ನು ಹೊಂದಿರುವುದರಿಂದ ಈಗ ನಿಜವಾದ ಎನ್‌ಸಿಪಿ ನಾಯಕನಾಗಿದ್ದೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಬಂಡಾಯದ ನಂತರ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು "ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿದ್ದಕ್ಕಾಗಿ ಸಂಸದರಾದ ಸುನೀಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಸೋಮವಾರ ಪಕ್ಷದಿಂದ ತೆಗೆದುಹಾಕಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಇತರ ಎನ್‌ಸಿಪಿ ನಾಯಕರೆಂದರೆ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಧನಂಜಯ್ ಮುಂಡೆ, ಅದಿತಿ ತಟ್ಕರೆ, ಸಂಜಯ್ ಬಾಬುರಾವ್ ಬನ್ಸೋಡೆ, ಅನಿಲ್ ಭೈದಾಸ್ ಪಾಟೀಲ್ ಮತ್ತು ಧರ್ಮರಾವ್ ಅತ್ರಮ್.
ತಮಿಳುನಾಡು ಸಿಎಂ ಇದೀಗ ತಮ್ಮ ಸಹೋದ್ಯೋಗಿಗೆ ಒಗ್ಗೂಡಿ ವಿರೋಧ ಪಕ್ಷದ ವೇದಿಕೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೇ ತಿಂಗಳಲ್ಲಿ ಎನ್‌ಸಿಪಿ ಮುಖ್ಯಸ್ಥ ರಾಜೀನಾಮೆ ನೀಡುವ ಇಚ್ಛೆಯನ್ನು ಪ್ರಕಟಿಸಿದಾಗ ಪವಾರ್ ಅವರನ್ನು ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ ಮೊದಲ ವಿರೋಧ ಪಕ್ಷದ ನಾಯಕರಲ್ಲಿ ಸಿಎಂ ಸ್ಟಾಲಿನ್ ಒಬ್ಬರಾಗಿದ್ದರು.
ಕಾವೇರಿ ವಿಚಾರದಲ್ಲಿ ತಮಿಳುನಾಡು ಜತೆ ಜಗಳ ಆಡಲ್ಲ: ಸಚಿವ ಡಿಕೆಶಿ
ಭಾನುವಾರ, ಸಿಎಂ ಸ್ಟಾಲಿನ್ ಫೆಡರೇಶನ್ ಆಫ್ ತಮಿಳು ಸಂಗಮ್ಸ್ ಆಫ್ ನಾರ್ತ್ ಅಮೆರಿಕ (ಫೆಟಿಎನ್‌ಎ) ಮತ್ತು ಸ್ಯಾಕ್ರಮೆಂಟೊ ತಮಿಳು ಮಂಡ್ರಂ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವಿಶ್ವಾದ್ಯಂತ ತಮಿಳು ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ವೈಭವವನ್ನು ಪ್ರಚಾರ ಮಾಡಲು ತಮ್ಮ ಸರ್ಕಾರ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಅವರು ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ: ಡಿಕೆಶಿ ಸ್ಪಷ್ಟನೆ; ಪ್ರಾಧಿಕಾರ ರಚನೆಗೆ ಸುಪ್ರೀಂ ಡೆಡ್‌ಲೈನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ