ಕೃಷಿ ಕಾಯಿದೆ ವಿರುದ್ಧವಾಗಿ ಮತ ಹಾಕಿದ ಬಿಜೆಪಿ ಶಾಸಕ.. ರಾಷ್ಟ್ರಮಟ್ಟದಲ್ಲಿ ಮುಜುಗರ!

By Suvarna NewsFirst Published Dec 31, 2020, 8:39 PM IST
Highlights

ಬಿಜೆಪಿಗೆ ಕೇರಳದಲ್ಲಿ ಇರಿಸು ಮುರಿಸು/ ಕೃಷಿ ಕಾಯಿದೆ ವಿರೋಧಿಸಿ  ಕೇರಳ ಸರ್ಕಾರ ಮಂಡಿಸಿದ ನಿರ್ಣಕಯಕ್ಕೆ ಮತ ಹಾಕಿದ ಬಿಜೆಪಿ ಶಾಸಕ/ ಯಾಕೆ ಹೀಗೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದ  ರಾಜ್ಯ ಬಿಜೆಪಿ ಅಧ್ಯಕ್ಷ

ಕೊಚ್ಚಿ (ಡಿ.​ 31) ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧ ಕೇರಳ ಸರ್ಕಾರ  ನಿರ್ಣಯ ಮಂಡಿಸಿದೆ. ಇಷ್ಟೆ ಅಲ್ಲ ಇನ್ನೊಂದು ವಿಚಾರವೂ ಇದೆ.

ಈ ನಿರ್ಣಯಕ್ಕೆ ಬಿಜೆಪಿಯ  ಎಂಎಲ್‌ಎ ಆಗಿರುವ ನೆಮೋಮ್ ಕ್ಷೇತ್ರದ ಬಿಜೆಪಿ ಶಾಸಕ ಓ ರಾಜಗೋಪಾಲ್   ಮಸೂದೆ ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರೂ ಅಂತಿಮವಾಗಿ ವಿರೋಧವಾಗಿಯೇ ಮತ ಚಲಾಯಿಸಿದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಬಿಜೆಪಿಗೆ ಇರಿಸು ಮುರಿಸು ತಂದಿತು. ಸ್ಪೀಕರ್ ಪಿ ಶ್ರೀರಾಮಕರಷ್ಣನ್ ನಿರ್ಣಯದ ಮಸೂದೆ ಅಂಗೀಕಾರವಾಗಿದೆ ಎಂದು ತಿಳಿಸಿದರು.

ಐಐಟಿಯಿಂದ ಹೊಲದವರೆಗೆ... ಕೃಷಿ ಕಾಯಿದೆ ಲಾಭಗಳನ್ನು ತೆರೆದಿಟ್ಟ ಸೂರ್ಯ

ಕೇರಳ ವಿಧಾನಸಭೆ ಕಲಾಪದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ಶಾಸಕ ಓ. ರಾಜಗೋಪಾಲ್, ನಾನು ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯದ ಪರವಾಗಿ ಮತ ಹಾಕಿದ್ದೇನೆ. ನಾನು ಪ್ರಜಾಪ್ರಭುತ್ವದ ಭಾಗವಾಗಿ ವಿಧಾನಸಭೆಯ ಒಮ್ಮತವನ್ನು ಒಪ್ಪುತ್ತೇನೆ. ನಿರ್ಣಯದ ಕೆಲವು ಭಾಗಗಳೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿವೆ. ಅದನ್ನು ನಾನು ವಿಧಾನಸಭೆಯಲ್ಲಿ ಸೂಚಿಸಿದ್ದೇನೆ ಎಂದರು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಬಿಜೆಪಿ ರಾಜ್ಯ ಅಧ್ಯಕ್ಷ, ರಾಜಗೋಪಾಲ್ ಏನು ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ.   ಹಿರಿಯ ನಾಯಕರಾದ ರಾಜಗೋಪಾಲ್ ದೇಶದ ಒಳಿತನ್ನು ಬಿಟ್ಟು ಇದು ಹೇಗೆ ಯೋಚನೆ ಮಾಡಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದಾರೆ.

click me!