ಲೋಕಸಭಾ ಚುನಾವಣೆ: ಪ್ರಧಾನಿ ಮೋದಿ ವಿರುದ್ದ ಪ್ರಿಯಾಂಕಾ ಕಣಕ್ಕಿಳಿಸಲು ಯುಪಿ ಕಾಂಗ್ರೆಸ್ ಉತ್ಸುಕ!

By Ravi JanekalFirst Published Aug 27, 2023, 8:14 PM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಲು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯು  ಉತ್ಸುಕವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ವರಿಷ್ಠರಿಗೆ  ಪ್ರಸ್ತಾವನೆ ಕಳುಹಿಸಲಿದೆ ಎಂದು ಪಕ್ಷದ ನೂತನ ರಾಜ್ಯಾಧ್ಯಕ್ಷ ಅಜಯ್ ರೈ ಭಾನುವಾರ ಹೇಳಿದ್ದಾರೆ.

ವಾರಣಾಸಿ (ಆ.27): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಲು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯು  ಉತ್ಸುಕವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ವರಿಷ್ಠರಿಗೆ  ಪ್ರಸ್ತಾವನೆ ಕಳುಹಿಸಲಿದೆ ಎಂದು ಪಕ್ಷದ ನೂತನ ರಾಜ್ಯಾಧ್ಯಕ್ಷ ಅಜಯ್ ರೈ ಭಾನುವಾರ ಹೇಳಿದ್ದಾರೆ.

ರೈ ಅವರು ವಾರಣಾಸಿಯಿಂದ ಮೂರು ಲೋಕಸಭಾ ಚುನಾವಣೆ(Loksabha election 2024)ಗಳಲ್ಲಿ ಸೋತಿದ್ದಾರೆ. 2014 ಮತ್ತು 2019 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿರುದ್ಧ ಮತ್ತು  2009ರಲ್ಲಿ  ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯ ಮುರಳಿ ಮನೋಹರ್ ಜೋಶಿ ವಿರುದ್ಧ ಸೋತಿದ್ದರು. 

 

ಅಮೇಥಿಯಿಂದ ರಾಹುಲ್‌ ಗಾಂಧಿ, ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧೆ: ಯುಪಿ ಕಾಂಗ್ರೆಸ್‌ ಅಧ್ಯಕ್ಷ

ಪ್ರಿಯಾಂಕಾ ಗಾಂಧಿ(priyanka gandhi vadra) ಬಯಸಿದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಮತ್ತು ಅವರು ಗೆಲ್ಲಲು ನಾವು ಶಕ್ತಿಮೀರಿ ಶ್ರಮಿಸುತ್ತೇವೆ. ಆದರೆ ಅವರು ವಾರಣಾಸಿ(Varanasi constituency)ಯಿಂದ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ. ವಾರಣಾಸಿ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿದೆ. 2019ರಲ್ಲಿ ಸತತ ಎರಡನೇ ಬಾರಿಗೆ ವಾರಣಾಸಿಯಿಂದ ಮೋದಿ ಆಯ್ಕೆಯಾಗಿದ್ದು, 2024ರಲ್ಲಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಿದರೆ, ಮೋದಿಗೆ ಸೋಲು ಖಚಿತ: ಸಂಜಯ್‌ ರಾವುತ್‌

ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ಮೋದಿ ಅವರು ಪ್ರಿಯಾಂಕಾ ಪ್ರಬಲರಾಗಿದ್ದಾರೆ ಎಂಬ ಸಂದೇಶ ರವಾನಿಸಲಾಗುವುದು ಎಂದರು. 

ವಾರಣಾಸಿ ಲೋಕಸಭಾ ಕ್ಷೇತ್ರವು 1991 ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ, 2004 ರಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆದ್ದಿದೆ. 1991, 1996, 1998 ಮತ್ತು 1999 ರ ಲೋಕಸಭಾ ಚುನಾವಣೆಗಳು  ಮತ್ತು ಮಧ್ಯಂತರ ಚುನಾವಣೆಯಲ್ಲಿಯೂ ಇದನ್ನು ಬಿಜೆಪಿಯೇ ಉಳಿಸಿಕೊಂಡಿತ್ತು. 

click me!