ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌; ವಿಷ ಕಾರಿದ ಈ ರಾಜ್ಯದ ರಾಜಕಾರಣಿ! ರಿಯಲ್ 'ಜೈಲರ್' ಸ್ಟೋರಿ ಹೀಗಿದೆ..

Published : Aug 27, 2023, 04:34 PM ISTUpdated : Aug 27, 2023, 04:38 PM IST
ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌; ವಿಷ ಕಾರಿದ ಈ ರಾಜ್ಯದ ರಾಜಕಾರಣಿ! ರಿಯಲ್ 'ಜೈಲರ್' ಸ್ಟೋರಿ ಹೀಗಿದೆ..

ಸಾರಾಂಶ

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌!

For the comrades, by the comrades, from the comrades - ಇದು ತ್ರಿಶೂರ್ ಜಿಲ್ಲೆಯಲ್ಲಿ ಸಿಪಿಎಂ ನಡೆಸುತ್ತಿರುವ ಸಹಕಾರಿ ಬ್ಯಾಂಕ್‌ನ ಹಿಂದಿನ ಹಗರಣವನ್ನು ಅತ್ಯುತ್ತಮವಾಗಿ ಸಾರುತ್ತದೆ. ಬ್ಯಾಂಕ್ ಮತ್ತು ಅದರ ಕಾರ್ಯಾಚರಣೆಗಳ ಮೇಲೆ ಇ.ಡಿ. ಕಣ್ಣು ಬಿದ್ದಿದೆ.  ಮಾಜಿ ಸಚಿವರೊಬ್ಬರ ಮೇಲೆ ಆರೋಪ ಕೇಳುಬಂದಿದೆ. ಆದರೆ, ಪಕ್ಷವು ಎಂದಿನಂತೆ, ಸಿಪಿಎಂ ನಾಯಕರನ್ನು ಬೇಟೆಯಾಡಲು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ಛೂ ಬಿಟ್ಟಿದೆ ಎಂದು ಹೇಳಿಕೆ ನೀಡಿದೆ. 

ಆದರೆ ಈ ಪ್ರಕರಣದಲ್ಲಿ ದೂರುದಾರರು ಸ್ವತಃ ಸಿಪಿಎಂ ಮುಖಂಡರಾಗಿದ್ದರು. ಈ ಉನ್ನತ ಸಿಪಿಎಂ ನಾಯಕನ ಸಂಬಂಧಿಕರಿಗೆ ಅಸಮಾನ ಕೊಲ್ಯಾಟರಲ್‌ ಸೆಕ್ಯುರಿಟಿ ಇದ್ದರೂ ದೊಡ್ಡ ಮೊತ್ತದ ಸಾಲಗಳನ್ನು ನೀಡಲಾಗಿದೆ ಎಂಬುದನ್ನು ಅವರು ಪಟ್ಟಿ ಮಾಡಿದರು. ಹಾಗೂ,  ಕೋಟ್ಯಂತರ ರೂಪಾಯಿ ಮಾಯವಾಗಿ ಬ್ಯಾಂಕ್‌ನ ಬೊಕ್ಕಸ ಖಾಲಿಯಾಗಿದೆ. ಬ್ಯಾಂಕ್ ತನ್ನ ಬದ್ಧತೆಯನ್ನು ಪೂರೈಸಲು ವಿಫಲವಾದ ನಂತರ ಸಹಕಾರಿ ಸಂಘದ ಅನೇಕ ಬಡ ಸದಸ್ಯರು ದುಃಖದಿಂದ ಸತ್ತರು ಎಂದು ಹೇಳಲಾಗ್ತಿದೆ. 

ಇದನ್ನು ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಮಾವನ ‘ಪಾಲಿಟ್ರಿಕ್ಸ್‌’: RSS ಅಲ್ಲ, ಎಡ ಪಕ್ಷದ ಸಿದ್ಧಾಂತ ಫಾಲೋ ಮಾಡ್ತಿದ್ದ ಸಾವರ್ಕರ್‌?

ಪ್ರಾಮಾಣಿಕತೆಗೆ ಬೆಲೆ ಅಂದ್ರೆ ಇದೇನಾ?
ತಮ್ಮ ಪಕ್ಷ ಮತ್ತು ಅದರ ಮುಖ್ಯಸ್ಥರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಸಿಪಿಎಂ ಕಾಮ್ರೇಡ್‌ಗಳ ದುರಹಂಕಾರ ಮಿತಿ ಮೀರುತ್ತಿದೆ. ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿದ್ದ ಸಿಪಿಎಂ ನಾಯಕನಿಗೆ ದಂಡ ವಿಧಿಸಿದ್ದಕ್ಕಾಗಿ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಗಲಾಟೆ ಸೃಷ್ಟಿಸಿದ್ದಾರೆ. ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ತಮ್ಮ ನಾಯಕನ ಮೇಲೆ ಕೇಸ್‌ ಹಾಕಿದ್ದಕ್ಕೆ ಮೂವರು ಪೊಲೀಸರನ್ನು ವರ್ಗಾವಣೆ ಮಾಡಿದರು. ರಾಜಧಾನಿಯ ಹೃದಯಭಾಗದಲ್ಲಿ ಈ ಘಟನೆ ನಡೆದಿದ್ದರೂ, ಸಿಪಿಎಂನ ಯಾವೊಬ್ಬ ಉನ್ನತ ನಾಯಕರೂ ಮಧ್ಯಪ್ರವೇಶಿಸಲಿಲ್ಲ ಅಥವಾ ಅವರ ಕಾರ್ಯಕರ್ತರನ್ನು ತಡೆಯಲಿಲ್ಲ.

ಸಿಪಿಎಂ ಬೆಂಬಲಿತ ಪೊಲೀಸ್ ಸಂಘದ ಸದಸ್ಯರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ, ಉತ್ತನ ಪೊಲೀಸ್‌ ಇಲಾಖಾ ವಿಚಾರಣೆಯನ್ನು ಸ್ಥಾಪಿಸಿ ಮೂವರು ಪೊಲೀಸರಿಗೆ ಕ್ಲೀನ್‌ಚಿಟ್‌ ನೀಡಿದರು. ಹಾಗೂ, ಅವರನ್ನು ಅದೇ ಪೊಲೀಸ್ ಠಾಣೆಯಲ್ಲಿ ಮರುಸೇರ್ಪಡಿಸಲಾಯಿತು. ಇದಕ್ಕೆ ಆಡಳಿತ ಪಕ್ಷ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ಜೈಲರ್ ಎಂದಿಗೂ ನಿವೃತ್ತಿಯಾಗುವುದಿಲ್ಲ!
ಜೈಪುರ ಸೆಂಟ್ರಲ್ ಜೈಲಿನಿಂದ ನಿವೃತ್ತರಾದ ನಂತರ ``ನೇಮಕ’’ಗೊಂಡ ರಾಜಸ್ಥಾನದ ಅಧಿಕಾರಿಯ ನೈಜ ಕತೆ ಹೆಚ್ಚು ಆಸಕ್ತಿದಾಯಕವಾಗಿದೆ. ಇತರ ಮೂರು ಜೈಲುಗಳ ನಿರ್ವಹಣೆಯಲ್ಲಿ ಅವರಿಗೆ ಪಾತ್ರವೊಂದನ್ನು ನೀಡಲಾಗಿದೆ. ಆದರೆ ಅವರ ವಿಸ್ತರಣೆಯ ವರದಿಗಳು ಹೊರಬಂದಾಗ . 

ಆದರೆ ಅವರ ವಿಸ್ತರಣೆಯ ವರದಿಗಳು ಹೊರಬಂದಾಗ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು 15 ಲಕ್ಷ ರೂ. ಲಂಚ ನೀಡಲಾಗಿದೆ ಎಂಬ ಆರೋಪ ಕೇಳಲಾಗಿದೆ. ತನಿಖೆಗೂ ಆದೇಶಿಸಲಾಗಿದೆ. ಆದರೆ ಅಧಿಕಾರಿಗೆ ಹಿರಿಯ ರಾಜಕೀಯ ಮುಖಂಡರ ಆಶೀರ್ವಾದ ಇರುವುದರಿಂದ ಸದ್ಯಕ್ಕೆ ಏನೂ ಚಿಂತೆ ಇಲ್ಲ. ಪ್ರತಿ ಜೈಲಿನಿಂದ ``ಮಾಸಿಕ'' ವಹಿವಾಟು ಒಂದು ಕೋಟಿ ರೂಪಾಯಿಗಿಂತ ಹೆಚ್ಚಾಗಿರುತ್ತದೆ ಮತ್ತು ಇದರಲ್ಲಿ ಸಂಬಂಧಪಟ್ಟ ಎಲ್ಲರಿಗೂ ಪಾಲು ತಲುಪುತ್ತದೆ ಎಂಬುದು ರಹಸ್ಯವಲ್ಲ. ಬಹುಶಃ ಇದು ಸಮಾಜವಾದದ ಇನ್ನೊಂದು ಬ್ರ್ಯಾಂಡ್‌ ಆಗಿದೆ.

ಇದನ್ನೂ ಓದಿ: ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!

ದ್ವೇಷ ರಾಜಕೀಯ
ಮರುಭೂಮಿಯಲ್ಲಿ ವಾಸಿಸುವ ಹಾವುಗಳು ವಿಷಪೂರಿತವಾಗಿವೆ. ಅದು ಕುಟುಕಿದ್ರೂ ಸಾಕು ಆ ವ್ಯಕ್ತಿಯನ್ನು ತಕ್ಷಣವೇ ಕೊಲ್ಲುತ್ತದೆ. ಆದೇ ರೀತಿ, ರಾಜಸ್ಥಾನದ ಕೆಲವು ರಾಜಕಾರಣಿಗಳ ವಿಷಯವೂ ಆಗಿದೆ, ಅವರ ಪ್ರತೀಕಾರವು ಪ್ರಬಲರನ್ನು ಸಹ ದುರ್ಬಲಗೊಳಿಸಬಹುದು. ಸಚಿವರೊಬ್ಬರ ಮನವಿಯನ್ನು ತಿರಸ್ಕರಿಸಿದ ನಂತರ ರಾಜ್ಯದ ಮೇಯರ್‌ಗಳೊಬ್ಬರಿಗೆ ಈ ವಿಷದ ರುಚಿ ಸಿಕ್ಕಿತು. ಈ ಸಚಿವರು - ಗೆಹ್ಲೋಟ್ ಸರ್ಕಾರವನ್ನು ತೊಂದರೆಯಲ್ಲಿ ಸಿಲುಕಿಸಲು ಹೆಸರುವಾಸಿಯಾಗಿದ್ದಾರೆ. ಮೇಯರ್ ತಮ್ಮ ಹೆಸರಿನಲ್ಲಿ ಪ್ಲಾಟ್ ನೋಂದಣಿ ಮಾಡಬೇಕೆಂದು ಬಯಸಿದ್ದರು ಎಂದು ಆರೋಪಿಸಲಾಗಿದೆ.

ಆದರೆ, ಮಹಿಳಾ ಮೇಯರ್‌ ನಿರಾಕರಿಸಿದ್ದಕ್ಕೆ, ಕೆಲವೇ ದಿನಗಳಲ್ಲಿ ಅವರ ಪತಿ 2 ಲಕ್ಷ ರೂಪಾಯಿ ಲಂಚ ಪಡೆದಿದ್ದಕ್ಕಾಗಿ ಅರೆಸ್ಟ್‌ ಆದರು ಮತ್ತು ಆಕೆಯನ್ನು ಮೇಯರ್ ಹುದ್ದೆಯಿಂದ ಅಮಾನತುಗೊಳಿಸಲಾಯಿತು. ಮೇಯರ್ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯ ಪಡೆದಿದ್ದಾರೆ. ಈ ಹಿನ್ನೆಲೆ ಚುನಾವಣಾ ವರ್ಷದಲ್ಲಿ ಮುಖ ಉಳಿಸುವ ಉಪಕ್ರಮಗಳನ್ನು ಗೆಹ್ಲೋಟ್ ಸರ್ಕಾರ ಈಗ ಪ್ರಾರಂಭಿಸಬೇಕಿದೆ.

ಇದನ್ನೂ ಓದಿ: ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್