ಲೋಕಸಭೆ, ವಿಧಾನಸಭೆ ಸೀಟು 50% ಹೆಚ್ಚಿಸಿ ಮಹಿಳಾ ಮೀಸಲು: ಕರ್ನಾಟಕದಲ್ಲಿ ವಿಧಾನಸಭೆ 336, ಲೋಕಸಭೆ ಸ್ಥಾನ 42ಕ್ಕೆ ಏರಿಕೆ!

Published : Nov 28, 2026, 07:50 AM IST
women reservation bill 50 percent seat increase delimitation 2026 up assembly 650 seats

ಸಾರಾಂಶ

ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲು ಜಾರಿ ಸಂಬಂಧ ಮಸೂದೆಗಳನ್ನು ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ (ನ.27): ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಸಾಕಾರಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆ ಸ್ಥಾನಗಳನ್ನು ಈಗ ಇರುವುದಕ್ಕಿಂತ ಶೇ.50ರಷ್ಟು ಹೆಚ್ಚಳ ಮಾಡಲು ಐತಿಹಾಸಿಕ ನಿರ್ಧಾರ ಮಾಡಿದೆ.

ನ.30ರಿಂದ ಡಿ.3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಸಂಯೋಜಿತ ಮಹಿಳಾ ಮೀಸಲು ಜಾರಿ ಸಂಬಂಧ ಮೂರು ಮಸೂದೆಗಳನ್ನು ಮಂಡನೆ ಮಾಡಲು ಉದ್ದೇಶಿಸಿದ್ದು, ಅದಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ.

2029ರ ಲೋಕಸಭೆ ಚುನಾವಣೆಗೂ ಮುನ್ನವೇ ಶೇ.50ರಷ್ಟು ಕ್ಷೇತ್ರಗಳ ಹೆಚ್ಚಳದೊಂದಿಗೆ ಮಹಿಳಾ ಮೀಸಲು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ವಿಧೇಯಕದಲ್ಲಿ ಉಲ್ಲೇಖಿಸಿದೆ.

1971ರ ಜನಗಣತಿಯ ಆಧಾರದಲ್ಲಿ ಲೋಕಸಭೆ, ವಿಧಾನಸಭೆ ಕ್ಷೇತ್ರಗಳನ್ನು ಶೇ.50ರಷ್ಟು ಹೆಚ್ಚಳ ಮಾಡಲಾಗುತ್ತದೆ. ಕ್ಷೇತ್ರಗಳ ಗಡಿ ನಿಗದಿಗೆ 2011ರ ಗಣತಿಯನ್ನು ಬಳಕೆ ಮಾಡಲಾಗುತ್ತದೆ ಎಂದು ಮಸೂದೆ ಹೇಳುತ್ತದೆ.

ಲೋಕಸಭೆಯ ಬಲ 543 ಇದ್ದು, ಅದನ್ನು ಗರಿಷ್ಠ 850ಕ್ಕೆ ಹೆಚ್ಚಳ ಮಾಡುವುದು ಕೇಂದ್ರ ಸರ್ಕಾರ ಉದ್ದೇಶ. ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ ಎಲ್ಲ ರಾಜ್ಯಗಳ ಲೋಕಸಭೆ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಳ ಮಾಡಿದರೆ ಲೋಕಸಭೆಯ ಬಲ 815ಕ್ಕೆ ಏರಿಕೆಯಾಗಲಿದೆ. ಉಳಿದ 35 ಸ್ಥಾನವನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಲಕ್ಷದ್ವೀಪ, ಅಂಡಮಾನ್‌ ನಿಕೋಬಾರ್‌ನತಹ ಸಣ್ಣ ದ್ವೀಪಗಳಿಗೆ 50% ಹೆಚ್ಚಳ ಅನ್ವಯವಾಗುವುದಿಲ್ಲ.

ವಿಧಾನಸಭೆ ಕ್ಷೇತ್ರಗಳಿಗೆ 650 ಮಿತಿ

ಲೋಕಸಭೆಯ ಜತೆಗೆ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನೂ ಶೇ.50ರಷ್ಟು ಹೆಚ್ಚಳ ಮಾಡುವ ಅಂಶ ಮಸೂದೆಯಲ್ಲಿದೆ. ಯಾವುದೇ ರಾಜ್ಯದ ವಿಧಾನಸಭೆಯ ಬಲ 500ರ ಮಿತಿಯನ್ನು ಮೀರಕೂಡದು ಎಂಬ ನಿರ್ಬಂಧ ಹಾಲಿ ಜಾರಿಯಲ್ಲಿದೆ. ಅದಕ್ಕೆ ತಿದ್ದುಪಡಿ ಮಾಡಿ, ‘650ರ ಮಿತಿಯನ್ನು ಮೀರಬಾರದು’ ಎಂಬ ಬದಲಾವಣೆಯನ್ನು ಮಸೂದೆಯ ಮೂಲಕ ಮಾಡಲಾಗುತ್ತಿದೆ. ಇದರಿಂದಾಗಿ ಕರ್ನಾಟಕ ವಿಧಾನಸಭೆಯ ಬಲ 224ರಿಂದ 316ಕ್ಕೆ, ದೇಶದ ಅತಿದೊಡ್ಡ ವಿಧಾನಸಭೆಯಾಗಿರುವ ಉತ್ತರಪ್ರದೇಶದ ಬಲ 605ಕ್ಕೆ ಏರುವ ನಿರೀಕ್ಷೆ ಇದೆ. ಕರ್ನಾಟಕದ ಲೋಕಸಭೆ ಸ್ಥಾನಗಳು 42ಕ್ಕೇರಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗನ ಕೈಯಲ್ಲಿ ಸಿಕ್ಕ ಹೂಮಾಲೆ, ಸ್ಟ್ಯಾಂಡ್-ಅಪ್ ಕಾಮಿಡಿಯನ್: ಕಾರ್ತಿಕ ದೀಪಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಸಿಎಂ ವಿಜಯ್‌ ಮೇಲೆ ಕಿಡಿಕಾರಿದ MK Stalin
ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ದೀಪ ಹಚ್ಚಲು ಸುಪ್ರೀಂ ಅನುಮತಿ, ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ