
ನವದೆಹಲಿ (ನ.27): ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ 'ದೀಪತೂನ್' (Deepathoon) ಮೇಲೆ ಶನಿವಾರ ಕಾರ್ತಿಕ ದೀಪದ ದೀಪ ಬೆಳಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಭಗವಾನ್ ಮುರುಗನ್ ಅವರನ್ನು ಸ್ಮರಿಸುವ ಭಕ್ತಿ ಘೋಷಣೆಯನ್ನು ಹಂಚಿಕೊಂಡಿದ್ದಾರೆ: ಅದಕ್ಕೂ ಮುನ್ನ ನವೆಂಬರ್ 24ರಂದು ಸಾಂಪ್ರದಾಯಿಕ ಉಚ್ಚಿಪಿಳ್ಳೈಯಾರ್ ಮಂಟಪಂನಲ್ಲಿ ಮಾತ್ರ ದೀಪ ಬೆಳಗಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (DGP) ಹಾಗೂ ಇತರ 13 ಮಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.
ಶನಿವಾರ (ನವೆಂಬರ್ 28) ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ 'ದೀಪತೂಣ್' ಸ್ಥಳದಲ್ಲಿ ಕಾರ್ತಿಕ ದೀಪಂ ದೀಪವನ್ನು ಬೆಳಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭಗವಾನ್ ಮುರುಗನ್ ಅವರನ್ನು ಸ್ಮರಿಸುವ ಭಕ್ತಿ ಘೋಷಣೆಯನ್ನು ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಒಟ್ಟು ಮೂರು ಬಾರಿ ತಮಿಳು ಭಾಷೆಯಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದು, ಮೂರೂ ಭಾಷೆಯಲ್ಲಿ 'ಭಗವಾನ್ ಮುರುಗನ್‌ಗೆ ಗೆಲುವು' ಎನ್ನುವ ಅರ್ಥದ ಸಾಲು ಹಂಚಿಕೊಂಡಿದ್ದಾರೆ. "ವೆಟ್ರಿವೇಲ್ ಮುರುಗನುಕ್ಕು ಅರೋಗರ! (ಭಗವಾನ್ ಮುರುಗನ್ ಅವರಿಗೆ ಜಯವಾಗಲಿ)" ಎಂದು ಬರೆದಿದ್ದಾರೆ. ಇದರ ಜೊತೆಗೆ ಅವರು ಹಿಂದಿ ಮತ್ತು ಇಂಗ್ಲಿಷ್‌ನಲ್ಲೂ ಈ ಘೋಷಣೆಯನ್ನು ಹಂಚಿಕೊಂಡಿದ್ದು, ಇಂಗ್ಲಿಷ್ ಆವೃತ್ತಿಯಲ್ಲಿ "Victory to Lord Muruga" ಎಂದು ಉಲ್ಲೇಖಿಸಲಾಗಿದೆ. ಮೋದಿ ಅವರ ಈ ಪೋಸ್ಟ್ ನ್ಯಾಯಾಲಯದ ಆದೇಶವನ್ನು ನೇರವಾಗಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.
ನವೆಂಬರ್ 24ರಂದು ಸಾಂಪ್ರದಾಯಿಕ ಉಚ್ಚಿಪಿಳ್ಳೈಯಾರ್ ಮಂಟಪಂನಲ್ಲಿ (Uchippillayar mandapam) ಮಾತ್ರ ದೀಪ ಬೆಳಗಿದ ಹಿನ್ನೆಲೆಯಲ್ಲಿ, ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಇತರ 13 ಮಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು. ಬೆಟ್ಟದ ಇನ್ನೂ ಮೇಲಿನ ಭಾಗದಲ್ಲಿರುವ ಕಲ್ಲಿನ ಕಂಬವಾದ 'ದೀಪತೂನ್' ಬಳಿ ದೀಪ ಬೆಳಗಲು ವಿಫಲವಾಗಿರುವುದು, ತನ್ನ ನವೆಂಬರ್ 20ರ ಆದೇಶದ ಉದ್ದೇಶಪೂರ್ವಕ ಅಗೌರವದಂತೆ (Wilful disobedience) ಕಂಡುಬರುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
Vetrivel Muruganukku Arogara!
வெற்றிவேல் முருகனுக்கு அரோகரா!
वेट्रिवेल मुरुगनुक्कु अरोगरा!
— Narendra Modi (@narendramodi) November 27, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ