ವಿಪಕ್ಷಗಳ ಭಾರಿ ಗದ್ದಲ, ಅಡ್ಡಿ ನಡುವೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಭಾರಿ ಸಂಚಲನ ಸೃಷ್ಟಿಸಿದೆ. 2014ರ ಮೊದಲು ಭಾರತದ ಸ್ಥಿತಿ ಹಾಗೂ ಸದ್ಯ ಭಾರತದ ಎಲ್ಲಿದೆ ಅನ್ನೋದನ್ನು ಮೋದಿ ವಿವರಿಸಿದ್ದಾರೆ. ಇದೇ ವೇಳೆ ವಿಪಕ್ಷಗಳ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ ಉಲ್ಲೇಖಿಸಿದ್ದಾರೆ
ನವದೆಹಲಿ(ಜು.02) ಒಂದು ಕಾಲದಲ್ಲಿ ಭಾರತ ಭ್ರಷ್ಟಾಚಾರದಲ್ಲಿ ಮುಳುಗಿತ್ತು. 1 ರೂಪಾಯಿಯಲ್ಲಿ 85 ಪೈಸಿ ಭ್ರಷ್ಟಾಚಾರದಲ್ಲಿ ಕಳೆದು ಹೋಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಜನತೆ ನಮಗೆ ಅಧಿಕಾರ ನೀಡಿ ಇದೀಗ ಅಭಿವೃದ್ಧಿಯ ಭಾರತ ನೋಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿ ವಂದನಾ ನಿರ್ಣಯ ಮೇಲೆ ಭಾಷಣ ಮಾಡಿದ ಮೋದಿ, ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕಳೆದ 10 ವರ್ಷದ ಸಾಧನೆ, ಯುಪಿಎ ಆಡಳಿತದ ಭ್ರಷ್ಟಾಚಾರವನ್ನು ಉಲ್ಲೇಖಿಸುತ್ತಾ ಅಡ್ಡಿಪಡಿಸುತ್ತಿದ್ದ ವಿಪಕ್ಷಗಳಿಗೆ ಗುದ್ದು ನೀಡಿದ್ದಾರೆ.
2014ರ ವೇಳೆ ದೇಶದ ಜನತೆ ನಿರಾಸೆಯಲ್ಲಿ ಮುಳುಗಿದ್ದರು. ಜನರ ಆತ್ಮವಿಶ್ವಾಸ ಕುಗ್ಗಿತ್ತು. ಈ ದೇಶದಿಂದ ಏನೂ ಸಾಧ್ಯವಿಲ್ಲ ಅನ್ನೋ ಮಾತುಗಳೇ ಕೇಳಿಬರುತ್ತಿತ್ತು. ಒಂದು ಕಡತ ತೆಗೆದರೆ ಸಾಕು ಭ್ರಷ್ಟಾಚಾರದಿಂದ ಮುಳುಗಿ ಹೋಗಿತ್ತು. ಪ್ರತಿ ದಿನ ಭ್ರಷ್ಟಾಚಾರ.ದೆಹಲಿಯಿಂದ 1 ರೂಪಾಯಿ ಕಳುಹಿಸಿದರೆ ಫಲಾನುಭವಿಗೆ 15 ಪೈಸಿ ಮಾತ್ರ ಸಿಗುತ್ತಿತ್ತು ಎಂದು ಅವರೇ ಹೇಳಿದ್ದಾರೆ. 1 ರೂಪಾಯಿಯಲ್ಲೂ 85 ಪೈಸಿ ಭ್ರಷ್ಟಾಚಾರ ಮಾಡಿದ ಸರ್ಕಾರ ಅಂದು ಆಡಳಿತ ಮಾಡುತ್ತಿತ್ತು. ಗ್ಯಾಸ್ ಸಂಪರ್ಕ ಪಡೆಯಲು ಲಂಚ ನೀಡಬೇಕಿತ್ತು. ಜನರಿಗೆ ರೇಶನ್ ಸಿಗಬೇಕಾದರೂ ಲಂಚ ನೀಡಬೇಕಿತ್ತು. ಇದರಿಂದ ರೋಸಿ ಹೋಗಿದ್ದ ಜನತೆ ನಮಗೆ ಅಧಿಕಾರ ನೀಡಿದರು. ಅಲ್ಲಿಂದ ಭಾರತದಲ್ಲಿ ಮಹತ್ತರ ಬದಲಾವಣೆ ಆರಂಭಗೊಂಡಿತು ಎಂದು ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮೋದಿ ಮಾತು ಆರಂಭಿಸಿದ ಬೆನ್ನಲ್ಲೇ ವಿಪಕ್ಷಗಳ ಅಡ್ಡಿ, ಕೆರಳಿದ ಸ್ಪೀಕರ್ ಓಂ ಬಿರ್ಲಾ!
ಈ ಬದಲಾವಣೆಯಲ್ಲಿ ಅತೀ ಮುಖ್ಯವಾದ, ನಿರಾಶಾವದಿಂದ ಭಾರತ ಹೊರಬಂದು ಆಶಾವಾದವಾಯಿತು. ಭಾರತದಿಂದ ಸಾಧ್ಯ ಅನ್ನೋ ಮನೋಭಾವನೆ ಬೆಳೆಯಿತು. ಕಲ್ಲಿದ್ದಲು ಭ್ರಷ್ಟಾಚಾರದಲ್ಲಿ ಮುಳುಗಿ ಕೈಚೆಲ್ಲಿತ್ತು. ಆದರೆ ಇಂದು ಭಾರತದ ಅತೀ ಹೆಚ್ಚು ಕಲ್ಲಿದಲ್ಲು ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಬ್ಯಾಂಕ್ ಖಜಾನೆಯನ್ನು ಲೂಟಿ ಮಾಡಲಾಗಿತ್ತು. 2014ರ ಬಳಿಕ ನೀತಿಯಲ್ಲಿ ಬದಲಾವಣ ತರಲಾಯಿತು. ಇದರ ಪರಿಣಾಮ ಇಂದು ವಿಶ್ವದ ಅತ್ಯುತ್ತಮ ಬ್ಯಾಂಕ್ ಪೈಕಿ ಭಾರತ ಕೂಡ ಸ್ಥಾನ ಪಡೆದಿದೆ ಎಂದು ಮೋದಿ ಹೇಳಿದ್ದಾರೆ.
2014ರ ಮೊದಲು, ಉಗ್ರರು ದಾಳಿ ನಡೆಸಿ ಎಲ್ಲಿ ಬೇಕಾದರು ದಾಳಿ ನಡೆಸುತ್ತಿದ್ದರು. 2014ರ ಬಳಿಕ ಹಿಂದುಸ್ಥಾನ ಅವರ ಮನೆಗೆ ನುಗ್ಗಿ ಹೊಡೆಯುತ್ತಿದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡುವ ಶಕ್ತಿ ಭಾರತಕ್ಕಿದೆ. ಉಗ್ರರಿಗೆ ಅವರದ್ದೆ ಭಾಷೆಯಲ್ಲಿ ಉತ್ತರ ಕೊಡುತ್ತಿದೆ. ದೇಶದ ಪ್ರತಿಯೊಬ್ಬ ನಾಗರೀಕನ ಸುರಕ್ಷತೆಗಾಗಿ ಭಾರತ ಸರ್ಕಾರ ಏನು ಬೇಕಾದರು ಮಾಡಬಲ್ಲದು ಎಂದು ಮನಗಂಡಿದ್ದಾರೆ.
ಜಮ್ಮು ಕಾಶ್ಮೀರ 370 ವಿಧಿಯಲ್ಲಿರುವಾಗ ಭಾರತೀಯ ಸೇನೆ ಮೇಲೆ ಕಲ್ಲು ತೂರಾಟ ನಡೆಯುತ್ತಿತ್ತು. ಸರ್ಕಾರ, ನಾಯಕರು ಕೈಕಟ್ಟಿ ನೋಡುತ್ತಿದ್ದರು. ಆದರೆ 370ನೇ ವಿಧಿ ತೆಗೆದು ಹಾಕಿದ ಬಳಿಕ ಕಲ್ಲುತೂರಾಟ ಸಂಪೂರ್ಣ ನಿಂತಿದೆ. ಇಂದು ಜಮ್ಮು ಕಾಶ್ಮೀರ ಅಭಿವೃದ್ಧಿಯತ್ತ ನಡೆಯುತ್ತಿದೆ. ಅತೀಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಿದ್ದಾರೆ.
ಸ್ಫೀಕರ್ ಓಂ ಬಿರ್ಲಾಗೆ ಪತ್ರ; ಮತ್ತೆ ಸಿಡಿದೆದ್ದ ರಾಹುಲ್ ಗಾಂಧಿ