ಮತಗಟ್ಟೆ ಸಮೀಕ್ಷೆ ಬಿಜೆಪಿ ಪರವಾಗಿರಬಹುದು. ಆದರೆ ಜನರ ತೀರ್ಪು ಕಾಂಗ್ರೆಸ್ ಪರವಾಗಿದೆ. ಕಾಯುತ್ತಿರಿ, ನಿಮ್ಮ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಲಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ನವದೆಹಲಿ(ಜೂ.03) ಲೋಕಸಭಾ ಚುನಾವಣೆ ಫಲಿತಾಂಶ ಜೂನ್ 4 ರಂದು ಪ್ರಕಟಗೊಳ್ಳಲಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಗೆ ಸ್ಪಷ್ಟ ಬಹುಮತ ಎಂದಿದೆ. ಇತ್ತ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಸಮೀಕ್ಷಾ ವರದಿಗಳು ಅಸಮಾಧಾನ ತಂದಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ತೀರ್ಪಿನ ಕುರಿತು ಕೆಲ ಸೂಚನೆ ನೀಡಿದ್ದಾರೆ. ನೀವು ಕಾಯುತ್ತಿರಿ, ಫಲಿತಾಂಶ ಉಲ್ಟಾ ಆಗಲಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಮತಗಟ್ಟೆ ನೀಡಿದ್ದು ಸಮೀಕ್ಷಾ ವರದಿ, ನಮಗೆ ಜನರ ನೀಡುವ ತೀರ್ಪು ಮುಖ್ಯ. ಈ ಬಾರಿ ಕಾಂಗ್ರೆಸ್ ಪರ ಜನ ಮತಹಾಕಿದ್ದಾರೆ. ಜೂನ್ 4 ರಂದು ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಆಗಲಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ಬಾರಿಯ ಫಲಿತಾಂಶ ಎಲ್ಲಾ ಸಮೀಕ್ಷೆಯನ್ನು ಬುಡಮೇಲು ಮಾಡಲಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
undefined
ಎಕ್ಸಿಟ್ ಪೋಲ್ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ
7ನೇ ಹಾಗೂ ಕೊನೆಯ ಹಂತದ ಮತದಾನ ದಿನ ಇಂಡಿಯಾ ಒಕ್ಕೂಟ ಮಹತ್ವದ ಸಭೆ ನಡೆಸಿತ್ತು. ಈ ಸಭೆಗೆ ಕಾಂಗ್ರೆಸೆ್ ನಾಯಕರು ಸೇರಿದಂತೆ ಇಂಡಿಯಾ ಒಕ್ಕೂಟದ ಬಹುತೇಕ ನಾಯಕರು ಪಾಲ್ಗೊಂಡಿದ್ದರು. ಈ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಾರಿ ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ. ಸರ್ಕಾರ ರಚಿಸಲಿದ್ದೇವೆ ಎಂದಿದ್ದರು. ಈ ಸಭೆ ಬಳಿಕ ಬಹುತೇಕ ಇಂಡಿಯಾ ಒಕ್ಕೂಟ ನಾಯಕರು ಇದೇ ಮಾತು ಪುನರುಚ್ಚರಿಸಿದ್ದರು.
ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭವಿಷ್ಯ ನುಡಿದಿದ್ದರು. ಮತಗಟ್ಟೆ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಈ ಮತಗಟ್ಟೆ ಸಮೀಕ್ಷಾ ವರದಿಗಳು ಮೋದಿ ವರದಿ. ಮೋದಿ ನೀಡಿದ ವರದಿಯನ್ನು ಮಾಧ್ಯಮಗಳು ಬಿತ್ತರಿಸುತ್ತಿದೆ ಎಂದಿದ್ದರು. ಹಾಗಾದರೆ ಇಂಡಿಯಾ ಒಕ್ಕೂಟ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನೀವು ಸಿಧೂ ಮೂಸೆವಾಲ 295 ಹಾಡು ಕೇಳಿದ್ದೀರಾ ಎಂದು ಉತ್ತರಿಸಿದ್ದರು. ಈ ಮೂಲಕ ರಾಹುಲ್ ಗಾಂಧಿ 295 ಸ್ಥಾನ ಗೆಲ್ಲಲಿದೆ ಎಂದು ಪರೋಕ್ಷವಾಗಿ ಉತ್ತರಿಸಿದ್ದರು.
ಜೂನ್ 4 ರಂದು ಮತಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆ ವರದಿ, ಜನರ ತೀರ್ಪಿನ ನಡುವೆ ಎಷ್ಟು ವ್ಯತ್ಯಾಸವಿದೆ ಅನ್ನೋದು ಮತ ಎಣಿಕೆ ದಿನ ಬಹಿರಂಗವಾಗಲಿದೆ.
'ಕೈ' ಶಾಸಕರಿಗೆ ಸಮೀಕ್ಷೆ ತಳಮಳ: ಎಕ್ಸಿಟ್ ಪೋಲ್ ನೋಡಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದ ಸಿಎಂ