ಭಾರತೀಯರು ವಾಹನ ಖರೀದಿಸಿದ ಪೂಜೆ ಮಾಡುವುದು ಸಾಮಾನ್ಯ. ಇದೀಗ ವಿದೇಶಿ ಯುವತಿಯೊಬ್ಬಳು ಸ್ಕೂಟರ್ ಖರೀದಿಸಿ ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾಳೆ
ಭಾರತದಲ್ಲಿ ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಮನುಷ್ಯನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುವ ಎಲ್ಲಾ ವಸ್ತುಗಳನ್ನು ಪೂಜಿಸಲಾಗುತ್ತದೆ. ವಾಹನಗಳನ್ನು ಖರೀದಿಸಿ ಪೂಜೆ ಮಾಡುವುದು ಸಾಮಾನ್ಯ. ಭಾರತದ ಸಂಪ್ರದಾಯದಲ್ಲಿ ಅಧುನಿಕತೆ ಸೇರಿಕೊಂಡಿದ್ದರೂ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇತ್ತೀಚೆಗೆ ವಿದೇಶಿಗರು ಭಾರತೀಯ ಸಂಪ್ರದಾಯ, ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಇದೀಗ ವಿದೇಶಿ ಯುವತಿಯೊಬ್ಬಳು ಹೊಸ ಸ್ಕೂಟರ್ ಖರೀದಿಸಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿದ ವಿಡಿಯೋ ವೈರಲ್ ಆಗಿದೆ.
ಹೊಸ ಸ್ಕೂಟರ್ ಡೆಲಿವರಿ ಪಡೆದುಕೊಂಡ ಯುವತಿ ನೇರವಾಗಿ ದೇವಸ್ಥಾನಕ್ಕೆ ತೆರಳಿದ್ದಾಳೆ. ಬಳಿಕ ವಾಹನ ಪೂಜೆ ಮಾಡಿಸಿದ್ದರೆ. ಅರ್ಚಕರು ವಾಹನಕ್ಕೆ ಪೂಜೆ ಸಲ್ಲಿಸಿದ್ದಾರೆ. ಕಾಯಿ ಒಡೆದು, ತೀರ್ಥ ನೀಡಿದ್ದಾರೆ. ಹಣ್ಣ ಹಾಗೂ ಕಾಯಿ ಸಮರ್ಪಿಸಿದ ವಿದೇಶಿ ಯುವತಿ, ಆರತಿಯೊಂದಿಗೆ ಪೂಜೆ ಸಲ್ಲಿಸಲಾಗಿದೆ.
undefined
3 ರಾಶಿಗೆ ಲಕ್ಷ್ಮೀ ನಾರಾಯಣ ಯೋಗ ದಿಂದ ಸ್ವಂತ ಮನೆ ಮತ್ತು ವಾಹನ ಭಾಗ್ಯ
ವಿದೇಶಿ ಯುವತಿಯ ಪೂಜೆ ಮುಂಬೈನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಸ್ಕೂಟರ್ ಮಹಾರಾಷ್ಟ್ರ ರಿಜಿಸ್ಟ್ರೇಶನ್ ಹೊಂದಿದೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಯುವತಿ ತಮ್ಮ ಓಡಾಟಕ್ಕೆ ಸ್ಕೂಟರ್ ಖರೀದಿಸಿ ಪೂಜೆ ಮಾಡಿಸಿರುವ ಸಾಧ್ಯತೆ ಇದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿದೇಶಿಗರು ಭಾರತೀಯ ಸಂಪ್ರದಾಯಕ್ಕೆ ಮಾರುಹೋಗುತ್ತಿರುವುದು, ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಆದರೆ ಕಳೆದ ಕೆಲ ವರ್ಷಗಳಲ್ಲಿ ಭಾರತ ಹಾಗೂ ಭಾರತೀಯ ಸಂಪ್ರದಾಯ, ಆಚರಣೆಗಳಿಗೆ ವಿಶ್ವ ಮನ್ನಣೆ ಸಿಕ್ಕಿದೆ. ವಿದೇಶಿಗರು ಭಾರತೀಯ ಸಂಪ್ರದಾಯಗಳನ್ನು ಅನುಸರಿಸುತ್ತಿರುವ ಹಲವು ವಿಡಿಯೋಗಳು ವೈರಲ್ ಆಗಿದೆ. ಇದೀಗ ಯುವತಿಯ ವಿಡಿಯೋ ಕೂಡ ವೈರಲ್ ಆಗಿದೆ. ಯುವತಿಯ ಪೂಜೆ ವಿಡಿಯೋಗೆ ಕೆಲ ಕಮೆಂಟ್‌ಗಳೂ ವ್ಯಕ್ತವಾಗಿದೆ. ಕೆಲವರು ಮೂಡನಂಬಿಕೆ ಎಂದು ಭಾರತೀಯ ಸಂಸ್ಕೃತಿಯನ್ನೇ ಹೀಯಾಳಿಸುವ ಕೆಲಸ ಮಾಡಿದ್ದಾರೆ. ಮತ್ತೆ ಕೆಲವರು ಪೂಜೆಯನ್ನೂ ಟೀಕಿಸಿದ್ದಾರೆ. ಆದರೆ ದೇಶ ವಿದೇಶಗಳಲ್ಲಿ ಭಾರತದ ಪೂಜೆ ಪುನಸ್ಕಾರಕ್ಕೆ ಅತ್ಯಂತ ಗೌರವ ಸಿಗುತ್ತಿರುವುದು ಸುಳ್ಳಲ್ಲ.
ವಿದೇಶಿ ಸಹೋದರಿ ತನ್ನ ಸ್ಕೂಟರ್ ಗೆ ಹಿಂದು ಸಾಂಪ್ರದಾಯದಂತೆ ಪೂಜೆ ಮಾಡಿಸಿರುವ ದೃಶ್ಯವನ್ನು ನೋಡಿ pic.twitter.com/GFsxcblK4R
— ನಾಗೇಶ್ ಪ್ರೀತಮ್ 🚩nagesh pretham (@nageshnt4545)
ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಭಾರತದ ಹಲವು ನಗರಗಳಲ್ಲಿ ವಿದೇಶಿಗರು ನೆಲೆಸಿದ್ದಾರೆ. ಇನ್ನು ಶಿಕ್ಷಣಕ್ಕಾಗಿ ಆಗಮಿಸಿರುವ ವಿದ್ಯಾರ್ಥಿಗಳು, ಇತರ ಕೆಲಸಗಳಿಗಾಗಿ ಭಾರತದ ನಗರದಲ್ಲಿ ಹಲವರು ಬೀಡುಬಿಟ್ಟಿದ್ದಾರೆ. ಬಹುತೇಕರು ಭಾರತದ ಸಂಸ್ಕೃತಿಗೆ ಮಾರು ಹೋಗಿ ಇಲ್ಲಿಯವರೇ ಆಗಿದ್ದಾರೆ.
ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್‌ಗೆ ಹೊಸ ನಿಯಮ, RTO ಎದುರು ಟೆಸ್ಟ್ ಮಾಡಬೇಕಿಲ್ಲ!