
ಲಖನೌ(ಫೆ.21) ಲೋಕಸಭಾ ಚುನಾವಣೆಗೆ ಮಾಡಿಕೊಂಡ ಇಂಡಿಯಾ ಮೈತ್ರಿ ಹಳ್ಳ ಹಿಡಿಯುತ್ತಿದೆ ಅನ್ನುವಷ್ಟರಲ್ಲೇ ಉತ್ತರ ಪ್ರದೇಶದಲ್ಲಿ ಮೈತ್ರಿ ಗಟ್ಟಿಯಾಗು್ತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ನಡುವೆ ಸೀಟು ಹಂಚಿಕೆ ಅಂತ್ಯಗೊಂಡಿದೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಇನ್ನುಳಿದ ಸ್ಥಾನದಲ್ಲಿ ಅಖಿಲೇಶ್ ಯಾದವ್ ಸಮಾಜವಾದಿ ಪಾರ್ಟಿ ಸ್ಫರ್ಧಿಸಲಿದೆ. ಸಮಾಜವಾದಿ ಪಾರ್ಟಿಯ ಈ ಒಪ್ಪಂದಕ್ಕೆ ಕಾಂಗ್ರೆಸ್ ಕೂಡ ಒಕೆ ಎಂದಿದೆ. ಆದರೆ ಪ್ರಮುಖ ಕ್ಷೇತ್ರಗಳಾದ ರಾಯಬರೇಲಿ, ಅಮೇತಿ ಹಾಗೂ ವಾರಣಾಸಿ ಕ್ಷೇತ್ರಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ.
ಸೀಟು ಹಂಚಿಕೆಯಾಗದ ಕಾರಣ ಮೈತ್ರಿಯಿಂದ ಹೊರಬಂದು ಏಕಾಂಗಿ ಸ್ಪರ್ಧೆಗೆ ನಿರ್ಧರಿಸಿದ್ದ ಸಮಾಜವಾದಿ ಪಾರ್ಟಿ ನಡೆಯಿಂದ ಕಾಂಗ್ರೆಸ್ ಬೆಚ್ಚಿ ಬಿದ್ದಿತ್ತು. ಅತೀ ಹೆಚ್ಚು ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಮೈತ್ರಿ ಮುರಿದರೆ ಆಪತ್ತು ಹೆಚ್ಚು ಎಂದು ಅರಿತ ಕಾಂಗ್ರೆಸ್ 40 ಸ್ಥಾನಗಳ ಬೇಡಿಕೆ ಪಟ್ಟು ಸಡಿಲಿಸಿತು. ಬಳಿಕ ಅಖಿಲೇಶ್ ಯಾದವ್ ಸೂತ್ರವನ್ನು ಒಪ್ಪಿಕೊಂಡಿದೆ.
ಎಲ್ಲರಿಗಿಂತ ಮೊದಲು ಚುನಾವಣಾ ಅಭ್ಯರ್ಥಿ ಪಟ್ಟಿ ಘೋಷಿಸಿದ ಎಸ್‌ಪಿ, ಅಖಿಲೇಶ್ ಪತ್ನಿ ಡಿಂಪಲ್‌ಗೆ ಸ್ಥಾನ!
ರಾಯ್‌ಬರೇಲಿ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡ ಬೆನ್ನಲ್ಲೇ ಇದೀಗ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ರಾಯಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಕಣಕ್ಕಿಳಿಯುವ ಸಾಧ್ಯತೆಗಳು ಗೋಚರಿಸುತ್ತಿದೆ. ರಾಯಬರೇಲಿ ಕ್ಷೇತ್ರದ ಸಂಸದೆ ಸೋನಿಯಾ ಗಾಂಧಿ ಈಗಾಗಲೇ ರಾಜ್ಯಸಭೆಗೆ ಸ್ಪರ್ಧಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಸೋನಿಯಾ ಗಾಂಧಿ ರಾಯಬರೇಲಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದಿದ್ದರು. ಇದೀಗ ಸೋನಿಯಾ ಗಾಂಧಿ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗುತ್ದಿದೆ. ಇತ್ತ ಅಮೆತಿ ಕ್ಷೇತ್ರದಿಂದ ಈಬಾರಿ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವಯಾನಾಡು ಕ್ಷೇತ್ರದಿಂದಲೂ ರಾಹುಲ್ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ.
ಪ್ರಮುಖ ಮೂರು ಕ್ಷೇತ್ರಗಳ ಜೊತೆಗೆ ಕಾಂಗ್ರೆಸ್‌ಗೆ ಫತೇಪುರ್ ಸಿಕ್ರಿ, ಶಹರಾನ್‌ಪುರ್, ಪ್ರಯಾಗರಾಜ್, ಮಹರಾಜ್‌ಗಂಜ್, ಅಮೋರಾ, ಝಾನ್ಸಿ, ಬುಲಂದ್‌ಶಹರ್, ಘಾಜಿಯಾಬಾದ್, ಮಥುರಾ, ದಿಯೋರಿಯಾ, ಸಿತಾಪುರ್, ಬಾರಾಬಂಕಿ, ಕಾನ್ಪುರ, ಬನ್ಸಗಾಂವ್ ಇತರ ಕ್ಷೇತ್ರಗಳನ್ನು ಸಮಾಜವಾದಿ ಪಾರ್ಟಿ ನೀಡಿದೆ.
ಆಸ್ಪತ್ರೆಗೆ ದಾಖಲಾದ ಪ್ರಿಯಾಂಕಾ ಗಾಂಧಿ ವಾದ್ರಾ, ಭಾರತ್ ಜೋಡೋ ಯಾತ್ರೆಗಿಲ್ಲ ಕಾಂಗ್ರೆಸ್ ನಾಯಕಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ