ಮುಂಬೈನಲ್ಲಿ ತೀವ್ರ ಕಟ್ಟೆಚ್ಚರ, ರೈಲು ನಿಲ್ದಾಣದ ಹೊರಭಾಗದಲ್ಲಿ 54 ಸ್ಫೋಟಕ ಪತ್ತೆ!

By Suvarna NewsFirst Published Feb 21, 2024, 6:47 PM IST
Highlights

ಮುಂಬೈನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಲ್ಯಾಣ್ ರೈಲು ನಿಲ್ದಾಣದ ಹೊರಭಾಗದಲ್ಲಿ ಬರೋಬ್ಬರಿ 54 ಸ್ಫೋಟಕಗಳು ಪತ್ತೆಯಾಗಿದೆ. ಬಾಂಬ್ ನಿಷ್ಕ್ರೀಯ ದಳ, ರೈಲ್ವೇ ಪೊಲೀಸರು ಸಂಪೂರ್ಣ ಪ್ರದೇಶ ಸುತ್ತುವರಿದಿದ್ದಾರೆ.
 

ಮುಂಬೈ(ಫೆ.21) ವಾಣಿಜ್ಯನಗರಿ ಮುಂಬೈನಲ್ಲಿ ಕಟ್ಟೆಚರ ವಹಿಸಲಾಗಿದೆ. ಮುಂಬೈನ ಕಲ್ಯಾಣ್ ರೈಲು ನಿಲ್ದಾಣದ ಹೊರಭಾಗದಲ್ಲಿ ಬರೋಬ್ಬರಿ 54 ಸ್ಫೋಟಕಗಳು ಪತ್ತೆಯಾಗಿದೆ. ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆಯಲ್ಲಿ ತೊಡಗಿದೆ. ಇತ್ತ ರೈಲ್ವೇ ಪೊಲೀಸರು ಸಂಪೂರ್ಣ ಪ್ರದೇಶ ಸುತ್ತುವರಿದಿದ್ದರೆ, ಮುಂಬೈ ಪೊಲೀಸರು ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. 

ರೈಲು ನಿಲ್ದಾಣದ ಹೊರಭಾಗದಲ್ಲಿ ಈ ಸ್ಫೋಟಕ ಪತ್ತೆಯಾಗಿದೆ. ಇದು ಎಲೆಕ್ಟ್ರಾನಿಕ್ ಸ್ಪೋಟಕಗಳಾಗಿದ್ದು, ಪರ್ವತ, ಬಂಡೆಗಳನ್ನು ಒಡೆಯಲು ಬಳಸಲಾಗುತ್ತದೆ. ಈ ಸ್ಫೋಟಕ ರೈಲು ನಿಲ್ದಾಣದ ಹೊರಭಾಗಕ್ಕೆ ಹೇಗೆ ತಲುಪಿತು? ಇದನ್ನು ಉದ್ದೇಶಪೂರ್ಕವಾಗಿ ಇಲ್ಲಿ ಇಡಲಾಗಿದೆಯೋ ಅಥವಾ ಇಲ್ಲಿ ಮರೆತಿದ್ದಾರೋ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.ರೈಲ್ವೇ ಪೊಲೀಸರು ಹಾಗೂ ಮುಂಬೈ ಪೊಲೀಸರು ನಿಲ್ದಾಣದ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ. 

ಚೆನ್ನೈನ 13 ಶಾಲೆಗಳಿಗೆ ಬಾಂಬ್‌ ಕರೆ, 'ಹುಸಿ ಬಾಂಬ್‌ ಬೆದರಿಕೆ' ಎಂದ ಪೊಲೀಸ್‌!

ಸುಮಾರು 50 ಸ್ಫೋಟಗಳಿದ್ದ ಬಾಕ್ಸ್ ಒಂದು ಕಲ್ಯಾಣ ರೈಲು ನಿಲ್ದಾಣದಿಂದ ಕೆಲ ದೂರದಲ್ಲಿನ ಪ್ಲಾಟ್‌ಫಾರ್ಮ್‌ನಲ್ಲಿ ಪತ್ತೆಯಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಬಾಕ್ಸ್ ಗಮನಿಸಿದ ರೈಲ್ವೇ ಪೊಲೀಸರು ತಕ್ಷಣವೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸನೆ ನಡೆಸಿದ್ದಾರೆ. ಸ್ಫೋಟಕಗಳು ಪತ್ತೆಯಾಗುತ್ತಿದ್ದಂತೆ ರೈಲು ನಿಲ್ದಾಣದಲ್ಲಿ ಅಲರ್ಟ್ ಘೋಷಿಸಲಾಯಿತು. ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸಲಾಗಿತ್ತು. ಇದೇ ವೇಳೆ ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಧಾವಿಸಿ ಸ್ಫೋಟಕಗಳ ಪರಿಶೀಲನೆ ನಡೆಸಿತು.

ಎರಡು ಬಾಕ್ಸ್ ಪತ್ತೆಯಾದ ಬೆನ್ನಲ್ಲೇ ರೈಲ್ವೇ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 4 ಸ್ಫೋಟಗಳು ಪತ್ತೆಯಾಗಿದೆ. ಪತ್ತೆಯಾಗಿರುವ 54 ಸ್ಫೋಟಗಳ ಪೈಕಿ ಕೆಲ ಸ್ಫೋಟಗಳು ನೀರಿನಲ್ಲಿ ಮೀನುಗಳ ಹಿಡಿಯಲು ಬಳಸುವ ಸ್ಫೋಟಕಗಳಾವಿಗೆ ಎಂದು ಬಾಂಬ್ ನಿಷ್ಕ್ರೀಯ ತಂಡ ಹೇಳಿದೆ. 

ಈ ಸ್ಫೋಟಕಗಳು ಯಾರ ಕಣ್ಣಿಗೆ ಬೀಳದ ಇಲ್ಲೀವರೆಗೆ ಸಾಗಿ ಬಂದದ್ದು ಹೇಗೆ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ವಂಸಕ ಕೃತ್ಯಕ್ಕೆ ತಯಾರಿ ನಡೆದಿತ್ತಾ? ಅಥವಾ ಯಾರಾದರೂ ಪರ್ವತ ಒಡೆಯಲು ಬಳಸುವ ಸ್ಫೋಟಗಳನ್ನು ಇಲ್ಲೆ ಬಿಟ್ಟು ತೆರಳಿದ್ದಾರೋ ಸೇರಿದಂತೆ ಹಲವು ಅನುಮಾನಗಳು ಪೊಲೀಸರನ್ನು ಕಾಡುತ್ತಿದೆ.

ಗಾಜಾ ವಿಶ್ವವಿದ್ಯಾಲಯ ಕ್ಯಾಂಪಸ್‌ ಮೇಲೆ ಬಾಂಬ್ ದಾಳಿ ಮಾಡಿದ ಇಸ್ರೇಲ್? ಸ್ಪಷ್ಟೀಕರಣ ಕೇಳಿದ ಅಮೆರಿಕ

ಮುಂಬೈನ ಕಲ್ಯಾಣ್ ರೈಲು ನಿಲ್ದಾಣ ಇತರ ನಿಲ್ದಾಣಗಳಂತೆ ತೀವ್ರ ಜನಜಂಗುಳಿಯಿಂದ ಕೂಡಿದ ರೈಲು ನಿಲ್ದಾಣವಾಗಿದೆ. ಇದು ನಗರ ರೈಲಿನ ಜೊತೆಗೆ ಸಬ್ ಅರ್ಬನ್ ಹಾಗೂ ಇತರ ದೂರ ಪ್ರಯಾಣದ ರೈಲುಗಳಿಗೆ ಸಂಪರ್ಕ ಕಲ್ಪಿಸುತ್ತದೆ. 

click me!