Breaking: ಬಿಜೆಪಿ ಮೂರನೇ ಪಟ್ಟಿ ಪ್ರಕಟ, ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ

Published : Mar 21, 2024, 06:17 PM ISTUpdated : Mar 21, 2024, 07:43 PM IST
Breaking: ಬಿಜೆಪಿ ಮೂರನೇ ಪಟ್ಟಿ ಪ್ರಕಟ, ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ

ಸಾರಾಂಶ

ಲೋಕಸಭಾ ಚುನಾವಣೆಗೆ ಬಿಜೆಪಿಯ ಮೂರನೇ ಪಟ್ಟಿ ಪ್ರಕಟವಾಗಿದ್ದು, ತಮಿಳುನಾಡಿನ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಅಣ್ಣಾಮಲೈಗೆ ಕೊಯಮತ್ತೂರಿನ ಟಿಕೆಟ್‌ ನೀಡಲಾಗಿದೆ.  

ನವದೆಹಲಿ (ಮಾ.21): ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆಯೇ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೊಯಮತ್ತೂರಿನಿಂದ ಸ್ಪರ್ಧೆ ಮಾಡಲಿದ್ದಾರೆ.ಬಿಜೆಪಿಯ ಮೂರನೇ ಪಟ್ಟಿಯಲ್ಲಿ ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್‌ ಮಾಡಲಾಗಿದೆ. ಚೆನೈ ದಕ್ಷಿಣದಿಂದ ಡಾ. ತಮಿಳ್ ಸಾಯಿ ಸೌಂದರ್ಯರಾಜನ್ ಗೆ ಟಿಕೆಟ್ ನೀಡಲಾಗಿದೆ. ತಮಿಳ್‌ ಸಾಯಿ ಸೌಂದರ್ಯರಾಜನ್‌, ಈ ಹಿಂದೆ ತೆಲಂಗಾಣದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶದಿಂದಾಗಿಯೇ ಅವರು ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಲ್ . ಮುರುಗನ್ ನೀಲಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದರೆ.  ಕನ್ಯಾಕುಮಾರಿಯಿಂದ ಪೊನ್ನು ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ.

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಏಪ್ರಿಲ್‌ 19 ರಂದು ನಡೆಯಲಿದೆ. ಇದರ ಬೆನ್ನಲ್ಲಿಯೇ ತಮಿಳುನಾಡಿನ 9 ಕ್ಷೇತ್ರಗಳಿಗೆ ಬಿಜೆಪಿ ಹೆಸರನ್ನು ಅಂತಿಮ ಮಾಡಿದೆ. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದ್ದು, ಈಗ 9 ಹೆಸರನ್ನು ಘೋಷಣೆ ಮಾಡಿದೆ.

Loksabha: ರಣಕಲಿಗಳ ಹುಡುಕಾಟದಲ್ಲಿ ಘಟಾನುಘಟಿ ಪಕ್ಷಗಳು..! ಯಾವ ಕ್ಷೇತ್ರ ಯಾರ ಪಾಲು..ಟೆನ್ಷನ್‌ಗೆ ಕಾರಣವೇನು..?

ನನ್ನ ಮೇಲೆ ನಂಬಿಕೆ ಇಟ್ಟು 2024ರ ಸಂಸತ್ ಚುನಾವಣೆಯಲ್ಲಿ ಕೊಯಮತ್ತೂರಿನಿಂದ ಸ್ಪರ್ಧಿಸಲು ಆಯ್ಕೆ ಮಾಡಿದ ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ತಮಿಳುನಾಡನ್ನು ಅಭಿವೃದ್ಧಿಯ ಗಮ್ಯದತ್ತ ಕೊಂಡೊಯ್ಯುವ ರಾಜಕೀಯ ಬದಲಾವಣೆಗಾಗಿ ಇಲ್ಲಿನ ಜನರು ಕಾಯುತ್ತಿರುವ ಸಮಯದಲ್ಲಿ ಇದು ಬಂದಿದೆ. ನಮ್ಮ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು. ಇವರುಗಳು ನನ್ನ ಮೇಲೆ ಇಟ್ಟ ನಂಬಿಕೆಯಿಂದಾಗಿ ತಮಿಳುನಾಡು ರಾಜ್ಯದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬಂದಿದೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಎನ್‌ಡಿಎ 400+ ಸ್ಥಾನಗಳನ್ನು ಸಾಧಿಸಲು ತಮಿಳುನಾಡು ಬಿಜೆಪಿ ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಅಣ್ಣಾ ಮಲೈ ಟ್ವೀಟ್‌ ಮಾಡಿದ್ದಾರೆ.

Annamalai: ಅಣ್ಣಾಮಲೈ ಮೋಡಿಗೆ ಒಲಿಯುತ್ತಾ ಗೆಲುವು? ಕನ್ನಡದ ಸಿಂಗಂ ಮೇಲೆ ಮೋದಿಗೆಷ್ಟು ನಂಬಿಕೆ..?


ತಮಿಳುನಾಡಿನ 9 ಕ್ಷೇತ್ರದ ಅಭ್ಯರ್ಥಿಗಳು
ಚೆನ್ನೈ ದಕ್ಷಿಣ- ತಮಿಳ್‌ಸಾಯಿ  ಸೌಂದರ್ಯರಾಜನ್‌
ಚೆನ್ನೈ ಕೇಂದ್ರ - ವಿನೋಜ್ ಪಿ. ಸೆಲ್ವಂ
ವೆಲ್ಲೂರು- ಡಾ.ಎ.ಸಿ.‍ಷಣ್ಮುಗಂ
ಕೃಷ್ಣಗಿರಿ- ಸಿ. ನರಸಿಂಹನ್
ನೀಲಗಿರೀಸ್ (ಎಸ್‌ಸಿ)- ಡಾ. ಎಲ್. ಮುರುಗನ್
ಕೊಯಮತ್ತೂರು - ಕೆ. ಅಣ್ಣಾಮಲೈ
ಪೆರಂಬದೂರು- ಟಿ.ಆರ್. ಪಾರಿವೆಂದರ್
ತೂತುಕುಡಿ- ನೈನಾರ್ ನಾಗೇಂದ್ರನ್
ಕನ್ಯಾಕುಮಾರಿ- ರಾಧಾಕೃಷ್ಣನ್

​​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!