
ನವದೆಹಲಿ(ಆ.29): ಕೊರೋನಾ ವೈರಸ್ ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಆದಾಯ ಕುಸಿತವಾಗಿದ್ದು, ಅದನ್ನು ತುಂಬಿಕೊಳ್ಳಲು ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದಲ್ಲಿ ಸಾಲದ ಮೊರೆ ಹೋಗಿವೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಸಾಲ ಮಾಡುವುದರಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದ್ದು, ಆಂಧ್ರ 2ನೇ ಹಾಗೂ ಕರ್ನಾಟಕ 3ನೇ ಸ್ಥಾನದಲ್ಲಿದೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು ಸರ್ಕಾರ ಅತಿ ಹೆಚ್ಚು ಅಂದರೆ 44,750 ಕೋಟಿ ರು. ಸಾಲ ಮಾಡಿದ್ದರೆ, ಆಂಧ್ರಪ್ರದೇಶ ಸರ್ಕಾರ 24250 ಕೋಟಿ ರು. ಹಾಗೂ ಕರ್ನಾಟಕ 19 ಸಾವಿರ ಕೋಟಿ ರು. ಸಾಲ ಮಾಡಿವೆ. ತೆಲಂಗಾಣ 18461 ಕೋಟಿ ರು. ಹಾಗೂ ಕೇರಳ 13390 ಕೋಟಿ ರು. ಸಾಲ ಸಂಗ್ರಹಿಸಿವೆ.
ತೆರಿಗೆ ಆದಾಯ ಕುಸಿತವಾಗಿರುವುದರಿಂದ ರಾಜ್ಯ ಸರ್ಕಾರದ ಖರ್ಚುಗಳನ್ನು ಭರಿಸಲು, ವಿಶೇಷವಾಗಿ ಆರೋಗ್ಯ ಕ್ಷೇತ್ರದ ಖರ್ಚುಗಳನ್ನು ಭರಿಸಲು ರಾಜ್ಯ ಸರ್ಕಾರಗಳು ಈ ಸಾಲ ಮಾಡಿವೆ. ಮಾರುಕಟ್ಟೆಯಲ್ಲೀಗ ಬಡ್ಡಿ ದರ ಕಡಿಮೆ ಇರುವುದರಿಂದ 30-35 ವರ್ಷಗಳ ದೀರ್ಘಾವಧಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ (ಸುಮಾರು ಶೇ.6) ರಾಜ್ಯಗಳಿಗೆ ಸಾಲ ದೊರೆತಿದೆ. ಈ ಸಾಲದ ಹೆಚ್ಚಳವು ರಾಜ್ಯಗಳಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯಡಿ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳಲು ಇರುವ ಅನುಮತಿಯ ಮಿತಿಯಲ್ಲೇ ಇದೆ ಎಂದು ಆರ್‌ಬಿಐ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ