ವಿಕ್ಕಿ ಕೌಶಾಲ್ ತೌಬಾ ತೌಬಾ ಡ್ಯಾನ್ಸ್ ಭಾರಿ ವೈರಲ್ ಆಗಿದೆ. ಈಗಾಗಲೇ ಹಲವರು ಈ ಡ್ಯಾನ್ಸ್ ರಿಕ್ರಿಯೆಟ್ ಮಾಡಿದ್ದಾರೆ. ಇದೀಗ ಪುಟ್ಟ ಹುಡುಗಿ ತೌಬಾ ತೌಬಾ ಡ್ಯಾನ್ಸ್ ಮೂಲಕ ಹೃದಯ ಗೆದ್ದಿದ್ದಾರೆ. ಈಕೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಮುಂಬೈ(ಜು.27) ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬ್ಯಾಡ್ ನ್ಯೂಜ್ ಬಾಲಿವುಡ್ ಚಿತ್ರ ಸಿನಿ ರಸಿಕರಿಗೆ ಹೊಸ ಔತಣ ನೀಡಿದೆ. ಈ ಚಿತ್ರದ ತೌಬಾ ತೌಬಾ ಹಾಡು ಭಾರಿ ಸದ್ದು ಮಾಡಿದೆ. ಹಾಡು, ಹಾಡಿನಲ್ಲಿನ ಡ್ಯಾನ್ಸ್ ಸ್ಪೆಪ್ಸ್‌ಗೆ ದಿಗ್ಗಜರೇ ಮಾರು ಹೋಗಿದ್ದಾರೆ. ಈ ತೌಬಾ ತೌಬಾ ಸಿಗ್ನೇಚರ್ ಸ್ಟೆಪ್ಸ್ ರಿಕ್ರಿಯೇಟ್ ಮಾಡಿ ಹಲವರು ವೈರಲ್ ಆಗಿದ್ದಾರೆ. ಅಜ್ಜಿಯರು, ವಯಸ್ಕರು, ಹಳ್ಳಿಯ ಮಹಿಳೆಯರು, ಮಕ್ಕಳು ಸೇರಿದಂತೆ ಬಹುತೇಕರು ಈ ವೈರಲ್ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಪುಟ್ಟ ಹುಡುಗಿ ಈ ತೌಬಾ ತೌಬಾ ಡ್ಯಾನ್ಸ್ ಹೆಜ್ಜೆ ಹಾಕಿ ಎಲ್ಲರ ಹೃದಯ ಗೆದ್ದಿದ್ದಾರೆ.
ಅಡೋರೇಬಲ್ ಅನನ್ಯ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಪುಟ್ಟ ಹುಡುಗಿ ಮುಖದಲ್ಲಿ ಎಕ್ಸ್‌ಪ್ರೆಶನ್ ನೀಡುತ್ತಾ, ಹಾಡಿನ ಸಾಲುಗಳನ್ನು ಗುನುಗುತ್ತಾ ಹೆಜ್ಜೆ ಹಾಕಿದ್ದಾಳೆ. ವಿಕ್ಕಿಯ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಮನಗೆದ್ದಿದ್ದಾಳೆ. ಡ್ಯಾನ್ಸ್ ನಡುವೆ ಕಣ್ಣು ಹೊಡೆದು ನೋಡುಗರನ್ನು ಮತ್ತಷ್ಟು ಆಕರ್ಷಿಸಿದ್ದಾಳೆ.
ಮಹಿಳೆಯ ತೌಬಾ ತೌಬಾ ಡ್ಯಾನ್ಸ್‌ಗೆ ದಂಗಾದ ಬಾಲಿವುಡ್, ಖುದ್ದು ವಿಕ್ಕಿ ಹೇಳಿದ್ರು ವಾವ್!
ಬ್ಲಾಕ್ ಅಂಡ್ ವೈಟ್ ಶೈನಿಂಗ್ ಸ್ಕರ್ಟ್ ಹಾಕಿರುವ ಈ ಕಂದಮ್ಮ, ಅಷ್ಟೇ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಪೋಷಕರು ಈ ವಿಡಿಯೋ ಚಿತ್ರೀಕರಿಸಿರುವ ಸಾಧ್ಯತೆ ಇದೆ. ಇದೀಗ ಈ ಪಟ್ಟು ಹುಡುಗಿ ಭಾರಿ ವೈರಲ್ ಆಗಿದ್ದಾಳೆ. ಈಕೆಯ ಡ್ಯಾನ್ಸ್ ನೋಡಿದ ನೆಟ್ಟಿಗರು ಭರ್ಜರಿ ಕಮೆಂಟ್ ನೀಡಿದ್ದಾರೆ. ಕ್ಯೂಟ್ ಗರ್ಲ್ ಎಂಬ ಬಿರುದನ್ನು ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿಗೆ ಟ್ಯಾಗ್ ಮಾಡಿದ್ದಾರೆ.
ಹಲವರು ವಿಕ್ಕಿ ಕೌಶಾಲ್ ತೌಬಾ ತೌಬಾ ಡ್ಯಾನ್ಸ್ ಮಾಡಿದ್ದಾರೆ. ಸಿಗ್ನೇಚರ್ ಸ್ಟೆಪ್ಸ್ ಮಾಡಿ ಗಮನಸೆಳೆದಿದ್ದಾರೆ. ಈ ಡ್ಯಾನ್ಸ್ ವಿಡಿಯೋಗಳಿಗೆ ಸ್ವತಃ ವಿಕ್ಕಿ ಕೌಶಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ವಿಡಿಯೋಗಳಿಗೆ ಲೈಕ್ಸ್ ಹಾಗೂ ಕಮೆಂಟ್ ನೀಡಿರುವ ವಿಕ್ಕಿ ಕೌಶಾಲ್ ಇದೀಗ ಈ ವಿಡಿಯೋಗೂ ಅದ್ಬುತ ಕಮೆಂಟ್ಸ್ ನೀಡುವ ಸಾಧ್ಯತೆ ಇದೆ.
ವಿಕ್ಕಿ ಕೌಶಾಲ್ ತೌಬಾ ತೌಬಾ ಹಾಡಿಗೆ ಕರ್ನಾಟಕದ ವೃದ್ಧಾಶ್ರಮದ ತಾಯಂದಿರ ಸ್ಟೆಪ್ಸ್ ವೈರಲ್!
ಇತ್ತೀಚೆಗೆ ಕರ್ನಾಟಕದ ಬೆಳಗಾವಿಯ ವದ್ಧಾಶ್ರಮದ ಸದಸ್ಯರು ತೌಬಾ ತೌಬಾ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದರು. ಆಶ್ರಮದ ತಾಯಂದಿರು ಒಂದೇ ರೀತಿ ಸೀರೆ ಧರಿಸಿ ಅದ್ಭುತವಾಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಬಾರಿ ವೈರಲ್ ಆಗಿತ್ತು. ಇನ್ನು ಹಳ್ಳಿಯ ಮಹಿಳೆಯ ತನ್ನ ಇಬ್ಬರು ಮಕ್ಕಳೊಂದಿಗೆ ವಿಕ್ಕಿ ಕೌಶಾಲ್ ಸ್ಟೆಪ್ಸ್ ಹಾಕಿದ್ದರು. ಅದ್ಭುತವಾಗಿ ಸ್ಟೆಪ್ಸ್ ಹಾಕಿದ್ದ ಈ ಮಹಿಳೆಯ ವಿಡಿಯೋಗೆ ವಿಕ್ಕಿ ಕೌಶಾಲ್ ಕೂಡ ವಾವ್ ಎಂದು ಕಮೆಂಟ್ ಮಾಡಿದ್ದರು.