
ಲಕ್ನೋ: ಯುವಕನೋರ್ವ ವೃದ್ಧನ ಕಪಾಳಕ್ಕೆ ಹೊಡೆದಿರುವ ಸಿಸಿಟಿವಿ ದೃಶ್ಯಗಳು ಉತ್ತರ ಪ್ರದೇಶದ ಬಿಜನೌರ್ ಭಾಗದಲ್ಲಿ ವೈರಲ್ ಆಗುತ್ತಿವೆ. ವೃದ್ಧನ ಮೇಲೆ ಹಲ್ಲೆಗೈದ ಯುವಕನನ್ನು ಸ್ಥಳೀಯ ಬಿಜೆಪಿ ನಾಯಕರಾದ ಬೀರ್‌ಬಲ್ ಸಿಂಗ್ ಅವರ ಪುತ್ರ ಅಭಿನವ್ ಸಿಂಗ್ ಎಂದು ಗುರುತಿಸಲಾಗಿದೆ. 70 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ಮೇಲೆ ಅಭಿನವ್ ಹಲ್ಲೆ ನಡೆಸಿದ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಜುಲೈ 23ರಂದು ಈ ಘಟನೆ ನಡೆದಿದೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಗಳಲ್ಲಿ ಅಭಿನವ್ ಸಿಂಗ್ ಮತ್ತು ವೃದ್ಧನ ನಡುವೆ ಕೆಲ ಸಮಯ ಮಾತುಕತೆ ನಡೆಯುತ್ತದೆ. ಅಭಿನವ್ ಸಿಂಗ್ ಕೋಪದಲ್ಲಿಯೇ ಎಚ್ಚರಿಕೆ ನೀಡುತ್ತಿರೋದು ವಿಡಿಯೋದಲ್ಲಿ ಕಾಣಿಸುತ್ತದೆ. ದಿಢೀರ್ ಅಂತ ವೃದ್ಧನ ಕಪಾಳಕ್ಕೆ ಅಭಿನವ್ ಹೊಡೆಯುತ್ತಾನೆ. ಅಭಿನವ್ ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆ ಮನೆಯೊಳಗಿಂದ ವೃದ್ಧೆ ಬಂದು ತಡೆಯಲು ಪ್ರಯತ್ನಿಸುತ್ತಾರೆ. ಅಭಿನವ್ ವೃದ್ಧೆಯನ್ನು ಪಕ್ಕಕ್ಕೆ ಜೋರಾಗಿ ತಳ್ಳಿ ಮತ್ತೊಮ್ಮೆ ಹೊಡೆಯುತ್ತಾನೆ, ಸ್ವಲ್ಪ ಸಮಯದ ನಂತರ ವಾರ್ನ್ ಮಾಡಿ ಅಲ್ಲಿಂದ ಅಭಿನವ್ ಸಿಂಗ್ ತೆರಳುತ್ತಾನೆ. ಅಭಿನವ್ ಯಾಕೆ ಹಲ್ಲೆ ನಡೆಸಿದ್ದು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ನಸುಳುವಿಕೆ ಹೇಗೆ? ವಿಡಿಯೋ ಮೂಲಕ ತೋರಿಸಿದ ಯೂಟ್ಯೂಬರ್!
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು, ಈ ಸಂಬಂಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಡಿಯೋವನ್ನು ರಾಜಸ್ಥಾನ ಹಾಗೂ ಸ್ಥಳೀಯ ಪೊಲೀಸರ ಖಾತೆಗೂ ಟ್ಯಾಗ್ ಮಾಡಲಾಗಿದೆ. ಕೆಲ ಬಳಕೆದಾರರು ಸಿಎಂ ಯೋಗಿ ಆದಿತ್ಯನಾಥ್ ಅವರ ಖಾತೆಗೂ ಟ್ಯಾಂಗ್ ಮಾಡಿ, ತನಿಖೆಗೆ ಆಗ್ರಹಿಸಿದ್ದಾರೆ. ಈ ವಿಡಿಯೋ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, ವೃದ್ಧನ ಮೇಲೆ ಹಲ್ಲೆಯ ಕುರಿತು ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಆರೋಪಿ ಪ್ರಭಾವಶಾಲಿಯಾಗಿದ್ದು, ಬಿಜೆಪಿ ನಾಯಕರೊಬ್ಬರ ಪುತ್ರನಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಅಭಿನವ್ ಸಿಂಗ್ ಸೇನೆಯಲ್ಲಿ ಡಾಕ್ಟರ್ ಆಗಿದ್ದು, ಬಿಜೆಪಿ ಸಂಸದೆ ಕಂಗನಾ ರಣಾವತ್ ಜೊತೆ ಸಭೆಯೊಂದರಲ್ಲಿ ಭಾಗವಹಿಸಿದ್ದನು. ಕಂಗನಾ ರಣಾವತ್ ಜೊತೆಗಿನ ಅಭಿನವ್ ಸಿಂಗ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬ್ಲೂಫಿಲಂ ನೋಡಿ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿ ಬಾಯಿ ಮುಚ್ಚಿ 13ರ ಅಣ್ಣನಿಂದ ರೇಪ್; ಮಗನಿಗೆ ತಾಯಿ ಸಾಥ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ