ನನ್ನದೇ ತಪ್ಪು, ಖಾಸಗಿ ವಿಡಿಯೋ ವೈರಲ್ ಬೆನ್ನಲ್ಲೇ ಕ್ಷಮೆ ಕೇಳಿದ ಪಂಜಾಬ್ ಇನ್‌ಫ್ಲುಯೆನ್ಸರ್!

Published : Jul 27, 2024, 03:10 PM IST
ನನ್ನದೇ ತಪ್ಪು, ಖಾಸಗಿ ವಿಡಿಯೋ ವೈರಲ್ ಬೆನ್ನಲ್ಲೇ ಕ್ಷಮೆ ಕೇಳಿದ ಪಂಜಾಬ್ ಇನ್‌ಫ್ಲುಯೆನ್ಸರ್!

ಸಾರಾಂಶ

ಪಂಜಾಬ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಖಾಸಗಿ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಯುವಕನ ಜೊತೆ ಅಸಭ್ಯ ಭಂಗಿಯಲ್ಲಿ ಕಾಣಿಸಿಕೊಂಡಿರುವ ಇನ್‌ಫ್ಲುಯೆನ್ಸರ್ ಇದೀಗ ಇನ್‌ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿ ನನ್ನದೇ ತಪ್ಪು ಎಂದು ಕ್ಷಮೆ ಕೇಳಿದ್ದಾರೆ. 

ಚಂಡೀಘಡ(ಜು.27)  ಖಾಸಗಿ ವಿಡಿಯೋ ಹರಿದಾಡಿ ಈಗಾಗಲೇ ಹಲವರ ಕರಿಯರ್ ನಿರ್ನಾಮಗೊಂಡ ಉದಾಹರಣೆಗಳಿವೆ. ಇದೀಗ ಪಂಜಾಬ್‌ನ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಧಲ್ಲಿ ಹರಿದಾಡುತ್ತಿದೆ. ಯುವಕನೊಬ್ಬನ ಜೊತೆ ಅಸಭ್ಯ ಭಂಗಿಯಲ್ಲಿ, ಅಶ್ಲೀಲ ರೀತಿಯಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಬೆನ್ನಲ್ಲೇ ಇನ್‌ಫ್ಲುಯೆನ್ಸರ್ ಇನ್‌ಸ್ಟಾಗ್ರಾಂ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾಳೆ. ನನ್ನಿಂದ ತಪ್ಪಾಗಿದೆ. ಆದರೆ ಈ ರೀತಿ ನನ್ನ ಜೀವನಕ್ಕೆ ಸಮಸ್ಯೆ ಎದುರಾಗಲಿದೆ ಎಂದುಕೊಂಡಿರಲಿಲ್ಲ. ನಂಬಿದವರೇ ಮೋಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಹುಡುಗನ ಜೊತೆ ನಾನು ಸಮಯ ಕಳೆದಿದ್ದೇನೆ. ಆಪ್ತ ಸಮಯದಲ್ಲಿ ಮೈಮರೆತಿದ್ದೆ. ಆದರೆ ಈ ವೇಳೆ ಆತ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಇದಕ್ಕೆ ನಾನು ಅವಕಾಶ ಮಾಡಿಕೊಟ್ಟಿದ್ದೆ ತಪ್ಪು. ಆತನ ಮೇಲೆ ನಂಬಿಕೆ ಇಟ್ಟಿದ್ದೆ. ಆದರೆ ಆತನೇ ಈ ವಿಡಿಯೋ ಬಹಿರಂಗ ಮಾಡಿದ್ದಾನೆ ಎಂದು ಇನ್‌ಫ್ಲುಯೆನ್ಸರ್ ಆಕ್ರೋಶ ಹೊರಹಾಕಿದ್ದಾರೆ. 

ಹಳ್ಳಿ ಹುಡುಗಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಪೊಲೀಸ್!

ನಾನು ಆತನ ಮೇಲೆ ನಂಬಿಕೆ ಇಟ್ಟಿದ್ದೆ. ಅದು ನಾನು ಮಾಡಿದ ಮೊದಲ ತಪ್ಪು. ತಮಾಷೆ, ನಂಬಿಕೆ, ಮನಸ್ಸು ಎಲ್ಲವೂ ಅಂದು ಚೆನ್ನಾಗಿತ್ತು. ಆತನ ಜೊತೆಗೆ ಸಲುಗೆಯಿಂದ ನಾನಿದ್ದೆ. ನಂಬಿಕೆದೆ ದ್ರೋಹ ಮಾಡಿದ ಆತ ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಈಗ ನಾನು ಮೋಸಹೋಗಿದ್ದೇನೆ. ಸವಾಲು ಎದುರಿಸಬೇಕಿದೆ ಎಂದು ಇನ್‌ಫ್ಲುಯೆನ್ಸರ್ ಹೇಳಿಕೊಂಡಿದ್ದಾಳೆ.

ಇದೇ ವೇಳೆ ಇನ್‌ಪ್ಲುಯೆನ್ಸರ್ ಎಲ್ಲಾ ಹೆಣ್ಣುಮಕ್ಕಳಿಗೆ ವಿಶೇಷ ಮನವಿ ಮಾಡಿದ್ದಾರೆ. ನೀವು ಹುಡುಗರನ್ನು ಸಂಪೂರ್ಣವಾಗಿ ನಂಬಬೇಡಿ. ಸಣ್ಣ ಮನಸ್ತಾಪಗಳು ಬಂದರೆ ನಿಮ್ಮ ವಿಡಿಯೋಗಳು ಈ ರೀತಿ ಹರಿದಾಡಲಿದೆ. ಹೀಗಾಗಿ ಯಾವುದೇ ಸಂಬಂಧದಲ್ಲಿ ಕೆಲ ನಿರ್ಬಂಧಗಳು ಇರಬೇಕು ಎಂದು ಮನವಿ ಮಾಡಿದ್ದಾಳೆ. ಇದೇ ವೇಳೆ ಈ ವೈರಲ್ ಆಗಿರುವ ವಿಡಿಯೋಗಳು 2022ರ ಘಟನೆ. ಆದರೆ ನಾನು ನಂಬಿದ್ದ ಯುವಕ ಮೋಸ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಇದೇ ವೇಳೆ ಹುಡುಗರೇ ಈ ರೀತಿ ಮಾಡಬೇಡಿ. ನೀವು ಹರಿಬಿಡುವ ಒಂದೊಂದು ವಿಡಿಯೋಗಳಿಂದ ಮತ್ತೊಬ್ಬರ ಜೀವನ ಬರ್ಬಾದ್ ಆಗಲಿದೆ. ಕೆಲವೇ ಕೆಲವು ಮಂದಿ ಈ ರೀತಿ ಸವಾಲು ಎದುರಿಸಲು ಸಾಧ್ಯ. ಬಹುತೇಕರು ಬದುಕು ಅಂತ್ಯಗೊಳಿಸುತ್ತಾರೆ. ಮನಸ್ತಾಪ, ಆಕ್ರೋಶ ಏನೇ ಇರಬಹುದು, ಆದರೆ ಅದನ್ನು ರೀತಿ ತೀರಿಸಿಕೊಳ್ಳುವುದು ಉತ್ತಮವಲ್ಲ ಎಂದು ಮನವಿ ಮಾಡಿದ್ದಾಳೆ.

ಶಿವ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲೇ ಜೋಡಿಯ ರೊಮ್ಯಾನ್ಸ್ ದೃಶ್ಯ ಸೆರೆ, ಭಕ್ತರ ಆಕ್ರೋಶ!

ಈ ಘಟನೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಇನ್‌ಫ್ಲುಯೆನ್ಸರ್ ತನ್ನ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾಳೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ