ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರ ಪರಿಣಾಮ ಕೆಲ ರೈಲು ಸೇವೆ ರದ್ದು ಮಾಡಲಾಗಿದೆ. 8ಕ್ಕೂ ಹೆಚ್ಚು ರೈಲುಗಳನ್ನು ಬೇರೆ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದೆ. ರದ್ದಾಗಿರುವ ರೈಲು ವಿವರ ಇಲ್ಲಿದೆ.
ಬೆಂಗಳೂರು(ಆ.22) ಭಾರತದಲ್ಲಿ ರೈಲು ಸೇವೆಯನ್ನು ನೆಚ್ಚಿಕೊಂಡಿರುವವರ ಸಂಖ್ಯೆ ಹೆಚ್ಚು. ಪ್ರತಿ ದಿನ ಕೋಟ್ಯಾಂತರ ಮಂದಿ ರೈಲು ಪ್ರಯಾಣ ಮಾಡುತ್ತಾರೆ. ಇತ್ತೀಚೆಗೆ ರೈಲಿನಲ್ಲಿ ಕಿಕ್ಕಿರಿದ ಪ್ರಯಾಣಿಕರಿಂದಾಗಿ ಸೀಟು ಸಮಸ್ಯೆ, ಬುಕಿಂಗ್ ಮಾಡಿದರೂ ಸೀಟು ಸಿಗುತ್ತಿಲ್ಲ ಅನ್ನೋ ಆರೋಪಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ಕೆಲ ರೈಲು ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಯಶವಂಪುತರದ ರೈಲು ನಿಲ್ದಾಣದಲ್ಲಿನ ಕಾಮಗಾರಿಯಿಂದ ಕೆಲ ರೈಲು ಸೇವೆಗಳು ಸಂಪೂರ್ಣವಾಗಿ ಬಂದ್ ಆಗಿದ್ದರೆ, ಮತ್ತೆ ಕೆಲ ರೈಲುಗಳು ಭಾಗಶಃ ರದ್ದಾಗಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರ ವರೆಗೆ ಈ ವ್ಯತ್ಯಯ ಇರಲಿದೆ.
ಯಶವಂತಪುರ ರೈಲು ನಿಲ್ದಾಣದ 2, 3, 4 ಹಾಗೂ 5ನೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಈ ಪ್ಲಾಟ್‌ಫಾರ್ಮ್ ಬಂದ್ ಮಾಡಲಾಗಿದೆ. ಇದರ ಪರಿಣಾಮ ಈ ಪ್ಲಾಟ್‌ಫಾರ್ಮ್‌ನಿಂದ ಹೊರಡುವ ಹಾಗೂ ಆಗಮಿಸುವ ಹಲವು ರೈಲು ಸೇವೆಗಳು ರದ್ದಾಗಿದೆ.
ಭಾರತೀಯ ರೈಲ್ವೆಯಲ್ಲಿ 12 ಸಾವಿರ TTE ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಇಲಾಖೆ!
ರದ್ದಾಗಿರುವ ರೈಲು ವಿವರ
ಆಗಸ್ಟ್ 21 ರಿಂದ 31 ಹಾಗೂ ಸೆಪ್ಟೆಂಬರ್ 1 ರಿಂದ 19: ತುಮಕೂರು -ಕೆಎಸ್ಆರ್ ಬೆಂಗಳೂರು ರೈಲು ಸಂಖ್ಯೆ 06576 ಹಾಗೂ ಕೆಎಸ್ಆರ್ ಬೆಂಗಳೂರು- ತುಮಕೂರು ರೈಲು ಸಂಖ್ಯೆ 06575
ಆಗಸ್ಟ್ 21, 23, 25, 28, 30, ಸೆಪ್ಟೆಂಬರ್ 1, 4,6,8,11, 13,15 ಹಾಗೂ 18
ಸಿಕಂದರಾಬಾದ್-ಯಶವಂತಪರು ರೈಲು ಸಂಖ್ಯೆ 12735
ಆಗಸ್ಟ್ 22,24,26,29,31 ಹಾಗೂ ಸೆಪ್ಟೆಂಬರ್ 2,5,7,9, 12,14,16, 19
ಯಶವಂತಪುರ- ಸಿಕಂದರಾಬಾದ್ 12736
ಆಗಸ್ಟ್ 22,25,27,29 ಹಾಗೂ ಸೆಪ್ಟೆಂಬರ್ 1,3,5,8,10, 12,15,17
ಯಶವಂತಪುರ-ಕೊಚುವೇಲಿ ರೈಲು ಸಂಖ್ಯೆ 12257
ಆಗಸ್ಟ್ 21, 23,26,28,30 ಹಾಗೂ ಸೆಪ್ಟೆಂಬರ್ 2,4,6,9,11, 13,16,18
ಕೊಚುವೇಲಿ-ಯಶವಂತಪುರ ರೈಲು ಸಂಖ್ಯೆ 12258
ಯಶವಂತಪುರ ರೈಲು ನಿಲ್ದಾಣದ ಕಾಮಗಾರಿಯಿಂದ ಕೆಲ ರೈಲು ಸೇವೆ ರದ್ದು ಮಾತ್ರವಲ್ಲ, 24 ರೈಲುಗಳು ಭಾಗಶಃ ರದ್ದಾಗಿದೆ. ಇನ್ನು 8 ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. ಬೆಂಗಳೂರು ರೈಲು ನಿಲ್ದಾಣದಿಂದ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಯಶವಂತಪುರದ ಕೆಲ ರೈಲು ಪ್ಲಾಟ್‌ಫಾರ್ಮ್ ಕಾಮಗಾರಿಯಿಂದ ಈ ಅಡಚಣೆಯಾಗಿದೆ ಎಂದು ರೈಲು ಅಧಿಕಾರಿಗಳು ಹೇಳಿದ್ದಾರೆ. ಸೆಪ್ಟೆಂಬರ್ 19ರೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಎಂದಿನಂತೆ ರೈಲುಗಳು ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
ಚಲಿಸುವ ರೈಲಲ್ಲೇ ಹೃದಯಾಘಾತ : 1 ಗಂಟೆ ತಡವಾಗಿ ಬಂದ ಆಂಬುಲೆನ್ಸ್: ಮಹಿಳೆ ಸಾವು