ಆಹಾರಕ್ಕಾಗಿ ಹೋರಾಟ... ಜಿಂಕೆಯನ್ನು ಕಚ್ಚಿ ಅತಿಂದಿತ್ತ ಎಳೆದಾಡಿದ ಸಿಂಹ, ಮೊಸಳೆ

By Suvarna News  |  First Published Jan 28, 2022, 9:39 AM IST
  • ನೀರಿನ ಮಧ್ಯೆ ಬೇಟೆಗಾಗಿ ಸಿಂಹ ಹಾಗೂ ಮೊಸಳೆಯ ಮಧ್ಯೆ ಹೋರಾಟ
  • ಭಯಾನಕ ವಿಡಿಯೋ ವೈರಲ್
  • ಜಿಂಕೆಯನ್ನು ಕಚ್ಚಿ ಎಳೆದಾಡುತ್ತಿರುವ ಸಿಂಹ ಹಾಗೂ ಮೊಸಳೆ

ಪ್ರಾಣಿಗಳ ಮುದ್ದಾಟ, ಕಿತ್ತಾಟ, ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಆದರೆ ಈಗ ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಮಾತ್ರ ಭಯಾನಕವಾಗಿದೆ. ಸಸ್ಯವನ್ನು ತಿಂದು ಪ್ರಾಣಿ, ಸಸ್ಯಾಹಾರಿ ಪ್ರಾಣಿಯನ್ನು ತಿಂದು ಮಾಂಸಹಾರಿ ಪ್ರಾಣಿಗಳು ಬದುಕುತ್ತವೆ ಇದು ಆಹಾರ ಸರಪಳಿಯ ಭಾಗವಾಗಿದೆ.  ಆದರೆ ಈ ವಿಡಿಯೋದಲ್ಲಿ ಒಂದು ಆಹಾರಕ್ಕಾಗಿ ಎರಡು ಪ್ರಾಣಿಗಳು ಕಿತ್ತಾಡುತ್ತಿರುವ ದೃಶ್ಯವಿದೆ. 

ಜಿಂಕೆಗಾಗಿ (deer) ಹರಿಯುವ ನೀರಿನಲ್ಲಿ ಮೊಸಳೆ ಹಾಗೂ ಸಿಂಹವೊಂದು ಕಾದಾಡುವ ಭಯಾನಕ ದೃಶ್ಯ ಇದಾಗಿದೆ. ಜಿಂಕೆಯನ್ನು ಕಚ್ಚಿ ಮೊಸಳೆ ಹಾಗೂ ಸಿಂಹ ಅತ್ತಿಂದಿತ್ತ ಎಳೆದಾಡುತ್ತಿವೆ. ಆದರೆ ಈ ಜಿಂಕೆ ನೀರಿಗೆ ಹೇಗೆ ಹೋಯಿತೆಂಬುದು ತಿಳಿಯುತ್ತಿಲ್ಲ. ಬಹುಶಃ ಜಿಂಕೆಯೊಂದು ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು. ನೀರು ಕುಡಿಯಲು ಹೋಗಿ ಈ ಕ್ರೂರ ಪ್ರಾಣಿಗಳ ಬಾಯಿಗೆ ಸಿಕ್ಕಿರಬಹುದು. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by طبیعت (@nature27_12)

 

ನೀರಿನಲ್ಲೇ ಸಿಂಹ ಹಾಗೂ ಮೊಸಳೆ ಜಿಂಕೆಗಾಗಿ ಹೋರಾಡುತ್ತಿದ್ದು, ಸಿಂಹದ(Lion) ಬಾಯಿಯಿಂದ ಜಿಂಕೆಯನ್ನು ಕಿತ್ತುಕೊಂಡ ಮೊಸಳೆ ನಂತರ ಜಿಂಕೆಯನ್ನು ಕಚ್ಚಿಕೊಂಡೆ ನೀರಿನಿಂದ ಮೇಲೆ ಬರುತ್ತದೆ. ನಂತರ ನೆಲದ ಮೇಲೆ ಕೂಡ ಸಿಂಹ ಹಾಗೂ ಮೊಸಳೆ (crocodile)ತಮ್ಮ ಪಾಲಿನ ಆಹಾರ  (Food) ಪಡೆಯಲು ಹೋರಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತಿದೆ. 

ಪ್ರಾಣದ ಹಂಗು ತೊರೆದು ಕರಡಿ ಬಾಯಿಯಿಂದ ಶ್ವಾನವನ್ನು ರಕ್ಷಿಸಿದ ವ್ಯಕ್ತಿ

ವನ್ಯಜೀವಿ ಛಾಯಾಗ್ರಾಹಕರು (Wildlife photographers) ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಒಂದು ನಿಮಿಷ ಹನ್ನೊಂದು ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ nature27_12 ಎಂಬ ಇನ್ಸ್ಟಾ ಖಾತೆಯಿಂದ ಪೋಸ್ಟ್ ಆಗಿದ್ದು, ಸಾಕಷ್ಟು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಶ್ವಾನಗಳು ಸ್ವಾಮಿನಿಷ್ಠೆಗ ಹೆಸರುವಾಸಿ ಶ್ವಾನಗಳು ಮನುಷ್ಯರನ್ನು ಅಪಾಯದಿಂದ ರಕ್ಷಿಸಿದ, ಅಲ್ಲದೇ ಆಟವಾಡುತ್ತಾ ಮನೋರಂಜನೆ ನೀಡುವ ಅನೇಕ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇಲ್ಲೊಂದು ಕಡೆ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯೊಂದನ್ನು ನಾಯಿಯೂ ರಕ್ಷಣೆ ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ... ನಿದ್ರಿಸಲು ಬಿಡದೇ ಕಾಟ.. ಮುದ್ದಾದ ವಿಡಿಯೋ ವೈರಲ್‌

ಈ ದೃಶ್ಯವನ್ನು ನಾಯಿಯ ಮಾಲೀಕರು ಚಿತ್ರೀಕರಿಸಿದ್ದು, ಕಪ್ಪು ಬಣ್ಣದ ನಾಯಿಯೊಂದು ನದಿ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಈಜುತ್ತಾ ಬಂದು ಈಚೆ ದಡವನ್ನು ಸೇರುತ್ತದೆ. ಈ ವೇಳೆ ಜಿಂಕೆ ಮರಿ ಕೂಗುತ್ತಿರುವ ಧ್ವನಿ ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಇತ್ತ ಸಾಹಸಿ ಕೆಲಸ ಮಾಡಿದ ನಾಯಿಗೆ ನಾಯಿಯ ಮಾಲೀಕ ಗುಡ್‌ಬಾಯ್‌ ಎಂದು ಹೇಳುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾಯಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಿಗಳು ಈ ವಿಶ್ವದಲ್ಲಿರುವ ಅತ್ಯಂತ ಶ್ರೇಷ್ಠ ಪ್ರಾಣಿಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಇತ್ತೀಚೆಗೆ ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಲೋರ್ಮಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿತ್ತು. ಇಲ್ಲಿ ನವಜಾತ ಹೆಣ್ಣು ಶಿಶುವನ್ನು ಜನ್ಮ ಕೊಟ್ಟ ತಾಯಿಯೇ ಬೀದಿಗೆಸೆದಿದ್ದಳು. ಆದರೆ ಕಂದನ ಕಂಡ ನಾಯಿಗಳು ಸುತ್ತಲೂ ನಿಂತು ರಕ್ಷಣೆ ನೀಡಿದ್ದವು. ಕೆಲ ಸಮಯದ ಬಳಿಕ ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ನಡುವೆ ಇದ್ದರೂ ಈ ಮುಗ್ಧ ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತವಾಗಿತ್ತು. 

click me!