ಆಧಾರ್‌ ಜತೆ ವೋಟರ್‌ ಐಡಿ ಜೋಡಣೆ ಪರಿಶೀಲನೆಯಲ್ಲಿದೆ

Published : Mar 13, 2020, 10:41 AM IST
ಆಧಾರ್‌ ಜತೆ ವೋಟರ್‌ ಐಡಿ  ಜೋಡಣೆ ಪರಿಶೀಲನೆಯಲ್ಲಿದೆ

ಸಾರಾಂಶ

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಾಗೂ ಒಬ್ಬನೆ ವ್ಯಕ್ತಿ ಹಲವೆಡೆ ಹೆಸರು ನೋಂದಾಯಿಸಿರುವುದನ್ನು ಪತ್ತೆ ಹಚ್ಚಲು ಮತದಾರರ ವಿವರವನ್ನು ಆಧಾರ್‌ ವ್ಯವಸ್ಥೆ ಜತೆ ಜೋಡಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

ನವದೆಹಲಿ (ಮಾ. 13): ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಾಗೂ ಒಬ್ಬನೆ ವ್ಯಕ್ತಿ ಹಲವೆಡೆ ಹೆಸರು ನೋಂದಾಯಿಸಿರುವುದನ್ನು ಪತ್ತೆ ಹಚ್ಚಲು ಮತದಾರರ ವಿವರವನ್ನು ಆಧಾರ್‌ ವ್ಯವಸ್ಥೆ ಜತೆ ಜೋಡಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

ಎಸ್‌ಬಿಐ ಗ್ರಾಹಕರಿಗೆ ಗುಡ್‌ ನ್ಯೂಸ್: ಕನಿಷ್ಠ ಬ್ಯಾಲೆನ್ಸ್‌ ನಿಯಮ ರದ್ದು!

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಅವರು, ಆಧಾರ್‌ ಜತೆಗೆ ಮತದಾರರ ಮಾಹಿತಿಯನ್ನು ಜೋಡಿಸುವ ಸಂಬಂಧ ಪ್ರಜಾಪ್ರತಿನಿಧಿ ಕಾಯ್ದೆ 1951ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ಶಾಶನ ಇಲಾಖೆಯಿಂದ ಸ್ವೀಕರಿಸಲಾಗಿದೆ.

ಪೆಟ್ರೋಲ್‌ ಡೀಸೆಲ್‌ ಬೆಲೆ ಶೀಘ್ರದಲ್ಲೇ 6 ರೂ ಇಳಿಕೆ?

ಅದು ಸರ್ಕಾರದ ಪರಿಶೀಲನೆಯಲ್ಲಿದೆ. ಇದರಿಂದ ದೋಷಮುಕ್ತ ಮತದಾರರ ಪಟ್ಟಿತಯಾರಿಸಲು ಸಾಧ್ಯವಿದೆ. ಅಲ್ಲದೆ ಒಬ್ಬನೇ ವ್ಯಕ್ತಿ ಹೆಸರು ಹಲವೆಡೆ ನಮೂದಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಇದೇ ವೇಳೆ, ‘ಒಂದು ದೇಶ ಒಂದೇ ಗುರುತಿನ ಚೀಟಿ’ ಜಾರಿಗೆ ತರುವ ಪ್ರಸ್ತಾಪವಿದೆಯೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಪ್ರಸಾದ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!