ಗಲಭೆಕೋರರು ನರಕದಲ್ಲಿ ಇದ್ದರೂ ಬಿಡಲ್ಲ: ಗೃಹ ಸಚಿವ ಗುಡುಗು

Kannadaprabha News   | Asianet News
Published : Mar 13, 2020, 08:46 AM IST
ಗಲಭೆಕೋರರು ನರಕದಲ್ಲಿ ಇದ್ದರೂ ಬಿಡಲ್ಲ: ಗೃಹ ಸಚಿವ ಗುಡುಗು

ಸಾರಾಂಶ

ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ ವೇಳೆ ಜನರು ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ. ಯಾರನ್ನೂ ‘ಸಂದೇಹಾಸ್ಪದ ವ್ಯಕ್ತಿಗಳು’ ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಮಾ. 13): ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ ವೇಳೆ ಜನರು ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ. ಯಾರನ್ನೂ ‘ಸಂದೇಹಾಸ್ಪದ ವ್ಯಕ್ತಿಗಳು’ ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವೈರಸ್ ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ; ಪ್ರಧಾನಿ ಮೋದಿ ಮನವಿ!

ರಾಜ್ಯಸಭೆಯಲ್ಲಿ ದಿಲ್ಲಿ ಹಿಂಸಾಚಾರದ ಚರ್ಚೆಗೆ ಉತ್ತರಿಸಿ ಗುರುವಾರ ಮಾತನಾಡಿದ ಅವರು, ‘ಎನ್‌ಪಿಆರ್‌ ಗಣತಿ ವೇಳೆ ಯಾರೂ ದಾಖಲೆ ನೀಡಬೇಕಿಲ್ಲ. ಗಣತಿದಾರರು ಬಂದಾಗ ತಮಗೆ ಇಷ್ಟವಾದ ಮಾಹಿತಿ ಒದಗಿಸಬಹುದು. ರಾಜ್ಯಸಭೆಯಲ್ಲಿ ಇದನ್ನು ನಾನು ಹೇಳುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲ ಗಣತಿಯಲ್ಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲೇಬೇಕು ಎಂದೇನಿಲ್ಲ ಎಂದು ಅವರು ಪರೋಕ್ಷವಾಗಿ ನುಡಿದರು.

ನರಕದಿಂದಲೂ ಹೊರಗೆಳೀತೇವೆ:

ದಿಲ್ಲಿ ಗಲಾಟೆಕೋರರು ನರಕದ ಆಳದಲ್ಲಿ ಅವಿತಿದ್ದರೂ ಸರಿ. ಅವರನ್ನು ಹೊರತೆಗೆಯಲಾಗುವುದು. ಗಲಭೆಕೋರರಲ್ಲಿ ಕೆಲವರಿಗೆ ಐಸಿಸ್‌ ಉಗ್ರರ ನಂಟು ಪತ್ತೆಯಾಗಿದೆ ಎಂದು ಶಾ ಹೇಳಿದರು. ದುಷ್ಕರ್ಮಿಗಳ ಪತ್ತೆಗೆ ಡಿಎಲ್‌ ಹಾಗೂ ವೋಟರ್‌ ಐಡಿ ಬಳಸಲಾಗುತ್ತಿದೆ. ಆದರೆ ಆಧಾರ್‌ ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!