ಥಾಣೆ (ಫೆ16): ಪ್ಲಾಸ್ಟಿಕ್ ಡಬ್ಬಿಯೊಳಗೆ ತಲೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿಯೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಭಾನುವಾರ ರಾತ್ರಿ ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದ ಬಳಿ ದಾರಿಹೋಕರೊಬ್ಬರು ಪ್ಲಾಸ್ಟಿಕ್ ನೀರಿನ ಕ್ಯಾನ್‌ನಲ್ಲಿ ತಲೆ ಸಿಲುಕಿಕೊಂಡಿದ್ದ ಚಿರತೆಯನ್ನು ಮೊದಲು ನೋಡಿದ್ದಾರೆ.
ಬಳಿಕ ಅರಣ್ಯಾಧಿಕಾರಿಗಳು, ಸ್ವಯಂಸೇವಕರು ಮತ್ತು ಗ್ರಾಮಸ್ಥರನ್ನು ಒಳಗೊಂಡ ತಂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸುಮಾರು 48 ಗಂಟೆಗಳ ನಂತರ ಚಿರತೆ ಮರಿಯನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಬಾಟಲಿಯಿಂದ ಅದಕ್ಕೆ ಮುಕ್ತಿ ನೀಡಲಾಗಿದೆ. ಈ ಬಾಟಲ್ ತಲೆಯಲ್ಲಿ ಸಿಲುಕಿಕೊಂಡ ಪರಿಣಾಮ ಈ ಚಿರತೆ ಮರಿಗೆ ಸುಮಾರು ಎರಡು ದಿನಗಳವರೆಗೆ ಸರಿಯಾಗಿ ಉಸಿರಾಡಲು ಅಥವಾ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದ ಕಾರಣ ತೀವ್ರವಾಗಿ ದಣಿದಿತ್ತು.
Irresponsible behaviour of tourist and people venturing into forest to party is posing a grave threat to the wild animals. A Leopard with its head stuck inside a plastic jar was spotted near Badlapur in Thane district. has begun the search operation. pic.twitter.com/2O0CIYcSYT
— Ranjeet Jadhav (@ranjeetnature)ಥಾಣೆ(Thane) ಜಿಲ್ಲೆಯ ಬದ್ಲಾಪುರ್ (Badlapur) ಗ್ರಾಮದ ಬಳಿ ಭಾನುವಾರ ರಾತ್ರಿ ಪ್ಲಾಸ್ಟಿಕ್ ನೀರಿನ ಕ್ಯಾನ್‌ನಲ್ಲಿ ತಲೆ ಸಿಲುಕಿಕೊಂಡಿದ್ದ ಚಿರತೆಯೊಂದು ಮೊದಲು ದಾರಿಹೋಕರಿಗೆ ಕಾಣಿಸಿಕೊಂಡಿತ್ತು. ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ತನ್ನ ಕಾರಿನಿಂದಲೇ ಚಿರತೆಯ ಬಾಟಲಿಯಲ್ಲಿ ತಲೆ ಸಿಲುಕಿಸಿಕೊಂಡಿರುವ ದೃಶ್ಯವನ್ನು ಸೆರೆ ಹಿಡಿದಿದ್ದು, ಚಿರತೆಮರಿ ಈ ಬಾಟಲಿಯಿಂದ ತಲೆಯನ್ನು ಬಿಡಿಸಲು ಹತಾಶವಾಗಿ ಪ್ರಯತ್ನಿಸುತ್ತಿರುವುದನ್ನು ತೋರಿಸಿತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಚಿರತೆ ಕಾಡಿಗೆ ತೆರಳಿತ್ತು.
Watch Terrifying video: ಗೇಟ್ ಹಾರಿ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ..
ಕೂಡಲೇ, ಅರಣ್ಯ ಇಲಾಖೆ ಅಧಿಕಾರಿಗಳು, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park) (ಎಸ್‌ಜಿಎನ್‌ಪಿ), ರೆಸ್ಕಿಂಕ್ ಅಸೋಸಿಯೇಷನ್ ಫಾರ್ ವೈಲ್ಡ್‌ಲೈಫ್ ವೆಲ್‌ಫೇರ್ (RAWW) ಸದಸ್ಯರು ಮತ್ತು ಕೆಲವು ಗ್ರಾಮಸ್ಥರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ರಕ್ಷಣಾ ತಂಡ ಹಾಗೂ ಸ್ವಯಂಸೇವಕರು, ಚಿರತೆ ಕಂಡುಬಂದರೆ ಅಧಿಕಾರಿಗಳಿಗೆ ತಿಳಿಸುವಂತೆ ಗ್ರಾಮಸ್ತರಿಗೆ ತಿಳಿಸಲಾಯಿತು ಎಂದು 30 ಜನರು ಭಾಗವಹಿಸಿದ್ದ ರಕ್ಷಣಾ ಕಾರ್ಯಾಚರಣೆಯ ತಂಡದ ಸದಸ್ಯರೊಬ್ಬರು ಹೇಳಿದರು.
Cheeta Lucknow Trip: ಲಖ್ನೋದ ಬೀದಿಗಳಲ್ಲಿ ಸುತ್ತುತ್ತಿದ್ದ ಚಿರತೆ ಕೊನೆಗೂ ಅಂದರ್
ಚಿರತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ವಿಶಾಲ ಪ್ರದೇಶದಲ್ಲಿ ಸಂಚರಿಸುತ್ತಿದ್ದು,ಚಿರತೆಯನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿರುವುದರಿಂದ ಚಿರತೆ ಜನವಸತಿ ಪ್ರದೇಶಕ್ಕೆ ಪ್ರವೇಶಿಸಬಹುದು ಎಂಬ ಆತಂಕವಿತ್ತು. ಇದಾದ ಬಳಿಕ ಮಂಗಳವಾರ ರಾತ್ರಿ ಬದ್ಲಾಪುರ ಗ್ರಾಮದ ಬಳಿ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಕರೆ ಬಂದಿದ್ದು ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಲಾಯಿತು ಎಂದು ತಿಳಿದು ಬಂದಿದೆ.
ಚಿರತೆಗಳು ಜನವಸತಿ ಪ್ರದೇಶಗಳಲ್ಲಿ ಓಡಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆ ಚಿರತೆಯೊಂದು ಗೇಟ್ ಹಾರಿ ಬಂದು ಗೇಟ್ ಒಳಗಿದ್ದ ಸಾಕುನಾಯಿಯನ್ನು ಹೊತ್ತೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದು ನೋಡುಗರಲ್ಲಿ ಭೀತಿ ಹುಟ್ಟಿಸುತ್ತಿದೆ.ವಿಡಿಯೋದಲ್ಲಿ ಮನೆಯ ಗೇಟ್‌ನ ಒಳಭಾಗದಲ್ಲಿ ನಾಯಿಯೊಂದು ನಿಂತುಕೊಂಡು ಗೇಟ್‌ನತ್ತ ನೋಡಿ ಬೊಗಳುವುದು ಕಾಣಿಸುತ್ತಿದೆ. ಕೂಡಲೇ ಯಾವುದೋ ಪ್ರಾಣಿ ಇರುವುದನ್ನು ಗಮನಿಸಿದ ನಾಯಿ ಭಯದಿಂದ ಸೀದಾ ಮನೆಯತ್ತ ಓಡಿ ಬರುತ್ತದೆ. ಅಷ್ಟರಲ್ಲೇ ಗೇಟ್ ಹಾರಿ ಮನೆಯ ಆವರಣಕ್ಕೆ ಬಂದ ಚಿರತೆ ಕ್ಷಣದಲ್ಲೇ ನಾಯಿಯನ್ನು ಹೊತ್ತೊಯ್ದು ಗೇಟ್ ಹಾರಿ ಹೊರ ಹೋಗುತ್ತದೆ.