ಸಂತ ರವಿದಾಸ್ ಮಂದಿರಕ್ಕೆ ಮೋದಿ ಭೇಟಿ, ಭಜನೆ, ಕೀರ್ತನೆಗೂ ಧ್ವನಿಗೂಡಿಸಿದ ಪ್ರಧಾನಿ!

Published : Feb 16, 2022, 03:18 PM ISTUpdated : Feb 16, 2022, 05:48 PM IST
ಸಂತ ರವಿದಾಸ್ ಮಂದಿರಕ್ಕೆ ಮೋದಿ ಭೇಟಿ, ಭಜನೆ, ಕೀರ್ತನೆಗೂ ಧ್ವನಿಗೂಡಿಸಿದ ಪ್ರಧಾನಿ!

ಸಾರಾಂಶ

* ಪಂಜಾಬ್‌ನಲ್ಲಿ ರಂಗೇರಿದ ಚುನಾವಣಾ ಅಖಾಡ * ಸಂತ ರವಿದಾಸ್ ಜಯಂತಿಯ ಸಂದರ್ಭದಲ್ಲಿ ಮಂದಿರಕ್ಕೆ ಭೇಟಿ ಕೊಟ್ಟ ಪಿಎಂ ಮೋದಿ * ಪ್ರಧಾನಿ ಮೋದಿ ಮಹಿಳೆಯರೊಂದಿಗೆ ಕುಳಿತು ಭಜನೆ ಕೀರ್ತನೆ

ಚಂಡೀಗಢ(ಫೆ.16): ಸಂತ ರವಿದಾಸ್ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕರೋಲ್‌ಬಾಗ್‌ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಮ್ ಧಾಮ್ ದೇವಾಲಯಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ದೇವಸ್ಥಾನದ ಆವರಣದಲ್ಲಿದ್ದ ಮಹಿಳೆಯರೊಂದಿಗೆ ಪ್ರಧಾನಿ ಕುಳಿತು ಭಜನೆ ಕೀರ್ತನೆ ಮಾಡಿದರು. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಅವರ ಜೊತೆ ಕುಳಿತು ಕೆಲಕಾಲ ಮಾತನಾಡುತ್ತಿದ್ದರು.

ಸಂತ ರವಿದಾಸ್ ಜಯಂತಿಯ ಸಂದರ್ಭದಲ್ಲಿ ಕರೋಲ್ ಬಾಗ್‌ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಸ್ಥಾನದಲ್ಲಿ ಭಕ್ತರೊಂದಿಗೆ ಭಜನೆ ಕೀರ್ತನೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಈ ವೇಳೆ, ಪ್ರಧಾನಿ ಮೋದಿ ಭಕ್ತರೊಂದಿಗೆ ಕುಳಿತು ಮಂಜಿರಾ ನುಡಿಸುತ್ತಿರುವುದು ಕಂಡುಬಂದಿತು. ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಧಾನಿ ಮೋದಿ ದೇವಸ್ಥಾನದಲ್ಲಿ ಮಹಿಳೆಯರ ನಡುವೆ ಕುಳಿತು ಮಜಿಕಾ ಆಡುತ್ತಿರುವುದನ್ನು ನೀವು ನೋಡಬಹುದು. ಈ ಸಮಯದಲ್ಲಿ, ಮೋದಿ ಅವರೊಂದಿಗೆ ಮಾತನಾಡುತ್ತಿರುವುದನ್ನೂ ಕಂಡು ಬಂದಿದೆ. 

ನಿನ್ನೆ ಮೊನ್ನೆ ಪ್ರಧಾನಿ ಮೋದಿ ಅವರು ಸಂತ ರವಿದಾಸ್ ಅವರನ್ನು ಪೂಜಿಸುತ್ತಿದ್ದ ಅನೇಕ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು

"

ಈ ಬಗ್ಗೆ ಬರೆದುಕೊಂಡಿದ್ದ ಪ್ರಧಾನಿ ಮೋದಿ "ಇದು ಮಹಾನ್ ಸಂತ ಗುರು ರವಿದಾಸ್ ಜಿ ಅವರ ಜನ್ಮ ವಾರ್ಷಿಕೋತ್ಸವ. ಸಮಾಜದಿಂದ ಜಾತಿ, ಅಸ್ಪೃಶ್ಯತೆ ಮುಂತಾದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟ ರೀತಿ ಇಂದಿಗೂ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ, ಸಂತ ರವಿದಾಸ್ ಜಿ ಅವರ ಪವಿತ್ರ ಸ್ಥಳದ ಬಗ್ಗೆ ಕೆಲವು ವಿಷಯಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. 2016 ಮತ್ತು 2019 ರಲ್ಲಿ, ನಾನು ಇಲ್ಲಿ ಪೂಜೆ ಸಲ್ಲಿಸುವ ಮತ್ತು ಲಂಗರ್ ಮಾಡುವ ಭಾಗ್ಯವನ್ನು ಹೊಂದಿದ್ದೇನೆ. ಸಂಸದನಾಗಿ ಈ ಯಾತ್ರಾಸ್ಥಳದ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ನಿರ್ಧರಿಸಿದ್ದೆ ಎಂದು ಬರೆದಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!