ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ

By Anusha Kb  |  First Published Jul 10, 2022, 10:12 AM IST

 ಹಿಂದೂಗಳ ದೇವತೆ ಕಾಳಿ ಕೈಯಲ್ಲಿ ಸಿಗರೇಟ್ ಹಿಡಿದು ಸೇದುವಂತಹ ಪೋಸ್ಟರ್‌ ನಿರ್ಮಿಸಿ ವಿವಾದಕ್ಕೀಡಾದ ಅನಿವಾಸಿ ಭಾರತೀಯ ನಿರ್ದೇಶಕಿ ಲೀನಾ ಮಣಿಮೇಕಲೈ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ.


ನವದೆಹಲಿ: ಹಿಂದೂಗಳ ದೇವತೆ ಕಾಳಿ ಕೈಯಲ್ಲಿ ಸಿಗರೇಟ್ ಹಿಡಿದು ಸೇದುವಂತಹ ಪೋಸ್ಟರ್‌ ನಿರ್ಮಿಸಿ ವಿವಾದಕ್ಕೀಡಾದ ಅನಿವಾಸಿ ಭಾರತೀಯ ನಿರ್ದೇಶಕಿ ಲೀನಾ ಮಣಿಮೇಕಲೈ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ನನ್ನ ಕಾಳಿ ವಿಚಿತ್ರವಾಗಿದ್ದಾಳೆ. ಅವಳು ಪಿತೃ ಅಥವಾ ಪುರುಷ ಪ್ರಧಾನ ಸಮಾಜದ ಮೇಲೆ ಉಗುಳುತ್ತಾಳೆ ಜೊತೆಗೆ ಆಕೆ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ ಎಂದು ಹೇಳಿಕೆ ನೀಡಿದ್ದಾಳೆ.

ತನ್ನ ಸಾಕ್ಷ್ಯಚಿತ್ರ 'ಕಾಳಿ'ಯ ಪೋಸ್ಟರ್‌ಗೆ  ತೀವ್ರ ಟೀಕೆಗಳನ್ನು ಎದುರಿಸುತ್ತಿರುವುದರ ನಡುವೆಯೂ ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ, ಕಾಳಿಯಾಗಿ ನನ್ನನ್ನೇ ನಾನು ಆ ಸಿನಿಮಾದಲ್ಲಿ ನೋಡಿರುವುದಾಗಿ ಹೇಳಿದ್ದಾರೆ. ಅಮೆರಿಕದ ವೆಬ್‌ ಪೋರ್ಟಲ್‌ ವಾಯ್ಸ್ ಆಫ್ ಅಮೆರಿಕಾದೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಲೀನಾ, 'ನನ್ನ ಕಾಳಿ ವಿಚಿತ್ರವಾಗಿದ್ದಾಳೆ. ಅವಳು ಸ್ವತಂತ್ರ ಚೇತನ. ಪಿತೃಪ್ರಭುತ್ವದ ಮೇಲೆ ಆಕೆ ಉಗುಳುತ್ತಾಳೆ. ಅವಳು ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ. ಅವಳು ಬಂಡವಾಳಶಾಹಿಯನ್ನು ನಾಶ ಮಾಡುತ್ತಾಳೆ. ಅವಳು ತನ್ನ ಸಾವಿರ ಕೈಗಳಿಂದ ಎಲ್ಲರನ್ನೂ ಅಪ್ಪಿಕೊಳ್ಳುತ್ತಾಳೆ ಎಂದು ಹೇಳಿದ್ದಾಳೆ. 

Tap to resize

Latest Videos

ಬ್ರಾಹ್ಮಣ ದೃಷ್ಟಿಕೋನದ ಬಿಜೆಪಿ ಭಾರತದಲ್ಲಿರಲು ಬಯಸುವುದಿಲ್ಲ, ಮೊಯಿತ್ರಾ ಮತ್ತೊಂದು ವಿವಾದ!

ಕಾಳಿ ದೇವಿಯ ವೇಷ ಧರಿಸಿದ ಮಹಿಳೆಯೊಬ್ಬರು ಸಿಗರೇಟ್ ಸೇದುತ್ತಿರುವುದನ್ನು ಒಳಗೊಂಡ ತನ್ನ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ನಂತರ ವಿವಾದಕ್ಕೀಡಾಗಿರುವ ಲೀನಾ ವಿರುದ್ಧ ದೇಶದ ಲವೆಡೆ ಎಫ್‌ಐಆರ್‌ ದಾಖಲಿಸಲಾಗಿದೆ. ತನ್ನನ್ನು ದ್ವಿಲಿಂಗಿ ಮತ್ತು ನಾಸ್ತಿಕಳು ಎಂದು ಗುರುತಿಸಿಕೊಳ್ಳುವ ಲೀನಾ ಮಣಿಮೇಕಲೈ ತನ್ನ ಚಿತ್ರದಲ್ಲಿ ಕಾಳಿ ದೇವಿಯು ತನ್ನ ದೇಹದಲ್ಲಿ ವಾಸಿಸುತ್ತಾಳೆ ಮತ್ತು ನಗರದ ಬೀದಿಗಳಲ್ಲಿ ಅಲೆದಾಡುತ್ತಾಳೆ ಎಂದು ಹೇಳಿದಳು.

ಕಾಳಿ ಗಲಾಟೆಯ ನಡುವೆ, ಲೀನಾ ಮಣಿಮೇಕಲೈ ಅವರ 2013 ರ ಟ್ವೀಟ್ ಕೂಡ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಅವರು ಟ್ವಿಟರ್‌ಗೆ ಈ ಬಗ್ಗೆ ಪತ್ರ ಬರೆದು ಈ ಸಂಭಾವ್ಯ ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ವಿಷಯವನ್ನು ಪರೀಕ್ಷಿಸಲು ಮತ್ತು ಫಿಲ್ಟರ್ ಮಾಡಲು ಕಾರ್ಯವಿಧಾನವನ್ನು ರೂಪಿಸುವಂತೆ ಒತ್ತಾಯಿಸಿದ್ದಾರೆ. ಇದಾದ ನಂತರ ಲೀನಾ ಮಣಿಮೇಕಲೈ ಅವರು ಮೂಲತಃ ಟ್ವೀಟ್ ಮಾಡಿದ್ದ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಟ್ವಿಟರ್ ಈಗಾಗಲೇ ತೆಗೆದು ಹಾಕಿದೆ. ಟ್ವಿಟರ್ ಪ್ರಪಂಚದಾದ್ಯಂತ ಸುದ್ದಿ ಮತ್ತು ಇತರ ವಿಷಯಗಳನ್ನು ಹರಡುವ ಪ್ರಮುಖ ಮತ್ತು ವಿಶ್ವಾಸಾರ್ಹ ಮೂಲಗಳಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಕಾರಣ, ಕೆಲವರು ಈ ವೇದಿಕೆಯನ್ನು ಬಳಸಿಕೊಂಡು ಅಗ್ಗದ ಪ್ರಚಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವಿಟರ್ ಸಿಇಒ ಪರಾಗ್ ಅಗರವಾಲ್ (Parag Agrawal) ಅವರಿಗೆ ಬರೆದ ಪತ್ರದಲ್ಲಿ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ವಿವಾದದ ಬಳಿಕ ಲೀನಾಗಾಗಿ ಮಧ್ಯಪ್ರದೇಶ ಪೊಲೀಸರು ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದಾರೆ.

Kaali Poster Controversy ಬುದ್ಧಿ ಕಲಿಯದ ಲೀನಾ, ಈಗ ಶಿವ ಪಾರ್ವತಿಗೂ ಅವಮಾನ!

ಲೀನಾ ಮಣಿಮೇಕಲೈ (Leena Manimekalai) ಅವರು  ವಿದ್ಯಾರ್ಥಿವೇತನದಲ್ಲಿ ಕೆನಡಾದ (Canada) ಯಾರ್ಕ್ ವಿಶ್ವವಿದ್ಯಾಲಯದಲ್ಲಿ (York University) ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಕೋರ್ಸ್ (Fine Arts course) ಅನ್ನು ಮಾಡುತ್ತಿದ್ದಾರೆ. ವಿವಾದದ ಹಿನ್ನೆಲೆಯಲ್ಲಿ ಅಗಾ ಖಾನ್ ಮ್ಯೂಸಿಯಂ (Aga Khan Museum) ಮತ್ತು ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು (Toronto Metropolitan University) ಅವರ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿದ್ದರೂ, ಲೀನಾ ಅವರ ವಿಶ್ವವಿದ್ಯಾಲಯವು ಅವರ ಕಲಾತ್ಮಕ ಸ್ವಾತಂತ್ರ್ಯಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ಕಾಳಿ ಪೋಸ್ಟರ್ ಲೀನಾ ಎದುರಿಸುತ್ತಿರುವ ಮೊದಲ ವಿವಾದವಲ್ಲ. ಮೀ ಟೂ ಆಂದೋಲನದ ಸಮಯದಲ್ಲಿ, ಅವರು ನಿರ್ದೇಶಕ ಸುಸಿ ಗಣೇಶನ್ (Susi Ganesan)ವಿರುದ್ಧ ಆರೋಪ ಹೊರಿಸಿದ್ದರು ಮತ್ತು ಆ ಪ್ರಕರಣ ಈಗಲೂ ಕೋರ್ಟ್‌ನಲ್ಲಿದೆ.
 

click me!