
ವಾರಾಣಸಿ(ಮೇ.16): ಕಾಶೀ ವಿಶ್ವನಾಥ ಮಂದಿರದ ಭಾಗ ಕೆಡವಿ ಗ್ಯಾನವಾಪಿ ಮಸೀದಿ ನಿರ್ಮಾಣ ಮಾಡಲಾಗಿದೆ ಅನ್ನೋ ವಿವಾದಕ್ಕೆ ಅಂತ್ಯಹಾಡಲು ಜಿಲ್ಲಾ ನ್ಯಾಯಾಲಯದ ಸರ್ವೆ ಕಾರ್ಯ ಅಂತ್ಯಗೊಂಡಿದೆ. ಅಂತಿಮ ದಿನದ ಸರ್ವೆಯಲ್ಲಿ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರ ವಕೀಲ ವಿಷ್ಣು ಜೈನ್ ಹೇಳಿದ್ದಾರೆ. ಪರಿಣಾಮ ಸಂಪೂರ್ಣ ಆವರಣ ಕೋರ್ಟ್ ಸೀಲ್ ಮಾಡಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಹಿಂದೂಗಳಿಗೆ ಅತೀ ದೊಡ್ಡ ಗೆಲುವು ಸಿಕ್ಕಿದೆ. ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ. ಲಿಂಗ ಪತ್ತೆಯಾಗಿರುವ ಕಾರಣ ಮಸೀದಿಯನ್ನು ಸಿಆರ್‌ಪಿಎಫ್ ಯೋಧರು ವಶಕ್ಕೆ ಪಡೆಯಲಿದ್ದಾರೆ ಎಂದು ಅರ್ಜಿದಾರ ವಕೀಲ ವಿಷ್ಣು ಜೈನ್ ಹೇಳಿದ್ದಾರೆ.
ಮಂದಿರ ಕೆಡವಿ ಗ್ಯಾನವಾಪಿ ಮಸೀದಿ ನಿರ್ಮಾಣ, ಸಿಕ್ತು ಮತ್ತಷ್ಟು ಸಾಕ್ಷ್ಯ!
ಮೂರು ದಿನಗಳ ಸರ್ವೆ ಕಾರ್ಯ ಮುಕ್ತಾಯವಾದ ಬೆನ್ನಲ್ಲೇ ಶಿವಲಿಂಗ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇದು ಮತ್ತೊಂದು ಧರ್ಮ ಸಂಘರ್ಷಕ್ಕೆ ಎಡೆ ಮಾಡವು ಸಾಧ್ಯತೆ ಇದೆ ಎಂದರಿತ ವಾರಾಣಸಿ ಜಿಲ್ಲಾ ನ್ಯಾಯಾಲಯ, ಶಿವಲಿಂಗ ಪತ್ತೆಯಾದ ಆವರಣವನ್ನು ಸೀಲ್ ಮಾಡಲು ಆದೇಶಿಸಿದೆ. ಆದರೆ ನಮಾಜ್ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ವಾರಣಾಸಿ ಕೋರ್ಟ್ ಆದೇಶದಂತೆ ಮಂಗಳವಾರ(ಮೇ.17) ವಿವರವಾದ ಸಮೀಕ್ಷಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗುತ್ತದೆ.
ಇತ್ತ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಬೇಕು , ವಾರಾಣಸಿ ಕೋರ್ಟ್ ಆದೇಶದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಕೋರಿ ಗ್ಯಾನವಾಪಿ ಮಸೀದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಜಿಲ್ಲಾ ನ್ಯಾಯಾಲಯ ನೀಡಿದ ಸರ್ವೆ ಕಾರ್ಯಕ್ಕೆ ಸ್ಟೇ ತರಲು ನಿರಾಕರಿಸಿ ಸುಪ್ರೀಂ ಕೋರ್ಟ್, ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಇದರಂತೆ ನಾಳೆ ಈ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ.
ವಿವಾದ ಏನು?:
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಕೆಡವಿ ಅಂದಿನ ಮುಘಲ್ ದೊರೆ ಔರಂಗಜೇಬ್, ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ. ಈ ಮಸೀದಿಯಲ್ಲಿ ಶೃಂಗಾರ ಗೌರಿ, ಗಣೇಶ ಸೇರಿ ಅನೇಕ ದೇವರ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂಬ ಅರ್ಜಿ ವಾರಾಣಸಿ ಕೋರ್ಚ್ ಮುಂದಿದೆ. ಆದರೆ ಮಸೀದಿಯನ್ನು ಅನ್ಯಧರ್ಮದ ಚಟುವಟಿಕೆಗೆ ನೀಡುವುದು ಮಸೀದಿ ಕಮಿಟಿಗೆ ಇಷ್ಟವಿಲ್ಲ. ಇದು ವಿವಾದದ ಮೂಲ. ಆದರೆ, ಮಸೀದಿಯಲ್ಲಿ ಹಿಂದೂ ವಿಗ್ರಹಗಳು ಇವೆಯೇ ಎಂಬುದರ ಪತ್ತೆಗಾಗಿ ವಿಡಿಯೋ ಸಮೀಕ್ಷೆಗೆ ಕೋರ್ಚ್ ಆದೇಶಿಸಿದೆ.
Gyanvyapi Masjid Survey ಅಂತ್ಯ, ಬಾವಿಯಲ್ಲಿ ಶಿವಲಿಂಗ ಪತ್ತೆ: ವಕೀಲ
ಕಾಂಗ್ರೆಸ್ ವಿರೋಧ:
ಈ ನಡುವೆ, ವಿವಾದದ ಬಗ್ಗೆ ಉದಯಪುರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ದೇಶದ ಯಾವುದೇ ಪೂಜಾ ಸ್ಥಳಗಳ ವಸ್ತುಸ್ಥಿತಿ ಬದಲಿಸುವ ಯತ್ನ ನಡೆಯಬಾರದು. ಹೀಗೆ ಮಾಡಿದರೆ ಕೋಮು ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.
ಸಮೀಕ್ಷೆ ವೇಳೆ ಕಮಿಷ್ನರ್‌ಗಳ ಜತೆ, ವಿಡಿಯೋಗ್ರಾಫರ್‌ಗಳ ತಂಡ, ಹಿಂದೂ ಹಾಗೂ ಮುಸ್ಲಿಂ ಗುಂಪುಗಳ ತಲಾ ಐವರು ವಕೀಲರು, ಕಾಶಿ ವಿಶ್ವನಾಥ ದೇಗುಲದ ಟ್ರಸ್ಟಿಗಳು ಹಾಗೂ ವಾರಾಣಸಿ ಪೊಲೀಸ್ ಆಯುಕ್ತರೂ ಹಾಜರಿದ್ದರು. ಕೋರ್ಚ್ ಸೂಚನೆಯನ್ವಯ ಮಸೀದಿ ಸಮಿತಿ ಹಾಗೂ ಹಿಂದೂ ಸಂಘಟನೆಗಳು ಸಮೀಕ್ಷೆಗೆ ಅಡ್ಡಿಪಡಿಸದೇ ಸಹಕಾರ ಪ್ರದರ್ಶಿಸಿದವು ಎಂದು ವಾರಾಣಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ