'ಸರ್ಕಾರಿ ಗೌರವದೊಂದಿಗೆ ಅಂಗಾಂಗ ದಾನ ಮಾಡಿದವರ ಅಂತ್ಯಸಂಸ್ಕಾರ..' ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಘೋಷಣೆ!

By Santosh NaikFirst Published Feb 15, 2024, 9:57 PM IST
Highlights

State Honour Last Rites ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಅತ್ಯಂತ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಇನ್ನು ಒಡಿಶಾದಲ್ಲಿ ಯಾವುದೇ ವ್ಯಕ್ತಿ ಅಂಗಾಂಗ ದಾನ ಮಾಡಿ ಸಾವು ಕಂಡಲ್ಲಿ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವವೊಂದಿಗೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಭುವನೇಶ್ವರ (ಫೆ.15): ಅಂಗಾಂಗ ದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಹತ್ವದ ಆದೇಶ ನೀಡಿದ್ದಾರೆ. ಈ ಕುರಿತಾಗಿ ಗುರುವಾರ ಪ್ರಕಟಣೆ ನೀಡಿದ ಸಿಎಂ ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಇತರರ ಪ್ರಾಣ ಉಳಿಸುವಂಥ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಕಳೆದ ವರ್ಷ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ರಾಜ್ಯದ ಅಂಗಾಂಗ ದಾನಿಗಳ ಅಂತ್ಯಕ್ರಿಯೆಗೆ ತಮ್ಮ ಸರ್ಕಾರ ಸಂಪೂರ್ಣ ಸರ್ಕಾರಿ ಗೌರವವನ್ನು ನೀಡುವುದಾಗಿ ಘೋಷಿಸಿದ್ದರು. ಒಡಿಶಾ ಸರ್ಕಾರವು ಅಂಗಾಂಗಗಳನ್ನು ದಾನ ಮಾಡಲು ರಾಜ್ಯದ ಜನರನ್ನು ಪ್ರೋತ್ಸಾಹಿಸುತ್ತಿದೆ. 2019ರಲ್ಲಿ ಸಿಎಂ ಪಟ್ನಾಯಕ್‌ ಅವರು ಗಂಜಾಂ ಜಿಲ್ಲೆಯ ಸೂರಜ್‌ ಎನ್ನುವ ವ್ಯಕ್ತಿಯ ಹೆಸರನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಸೂರಜ್‌ ಮೃತಪಟ್ಟ ಬಿಕ ಆತನ ತಂದೆ-ತಾಯಿ ಮಗನ ಆರು ಅಂಗಗಳನ್ನು ಇತರರಿಗೆ ದಾನ ಮಾಡುವ ಮೂಲಕ ಜೀವನಗಳನ್ನು ಉಳಿಸಿದ್ದರು.  ವೇಳೆ ಸೂರಜ್‌ ಅವರ ಪಾಲಕರನ್ನು ಭೇಟಿಯಾಗಿದ್ದ ನವೀನ್‌ ಪಟ್ನಾಯಕ್‌, ಅವರ ಸ್ಪೂರ್ತಿದಾಯಕ ಕಾರ್ಯಕ್ಕಾಗಿ 5 ಲಕ್ಷ ರೂಪಾಯಿಯ ನಗದು ಸಹಾಯವನ್ನೂ ಘೋಷಣೆ ಮಾಡಿದ್ದರು.

ಸೂರಜ್ ಒಡಿಶಾದ ಗಂಜಾಂ ಜಿಲ್ಲೆಯ ಭಂಜನಗರ್ ನಿವಾಸಿಯಾಗಿದ್ದರು. 2019ರ ಅಕ್ಟೋಬರ್ 29ರಂದು, ಅವರು ಸೂರತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಸುಧಾರಿಸದ ಕಾರಣ ನವೆಂಬರ್ 2 ರಂದು ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು. 

ಐದು ವಾಷ್‌ನಲ್ಲೇ ಮಬ್ಬಾದ ದುಬಾರಿ ಜೀನ್ಸ್‌, ಆದಿತ್ಯ ಬಿರ್ಲಾ ಫ್ಯಾಷನ್‌ ಮೇಲೆ ಕೇಸು ಹಾಕಿ 5 ಸಾವಿರ ರೀಫಂಡ್‌ ಪಡೆದ!

ಈ ಹಂತದಲ್ಲಿ ಸೂರಜ್‌ನ ತಂದೆ ಬಾಬುಲಿ ಸೇಥಿ ಮತ್ತು ತಾಯಿ ಗೀತಾಂಜಲಿ ಸೇಥಿ ಇತರರ ಜೀವವನ್ನು ಉಳಿಸುವ ಪ್ರಯತ್ನದಲ್ಲಿ ಅವನ ಅಂಗಗಳಾದ ಹೃದಯ, ಯಕೃತ್ತು, ಮೂತ್ರಪಿಂಡಗಳು ಮತ್ತು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದರು. ಅವರ ಹೃದಯವನ್ನು ಮುಂಬೈನ ಫೋರ್ಟಿಸ್ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲಾಯಿತು ಮತ್ತು ಮಹಿಳೆಯ ದೇಹಕ್ಕೆ ಕಸಿ ಮಾಡಲಾಯಿತು, ಅವರ ಎರಡೂ ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಅಹಮದಾಬಾದ್‌ನಲ್ಲಿ ಮೂವರ ದೇಹಕ್ಕೆ ಕಸಿ ಮಾಡಲಾಯಿತು ಮತ್ತು ಅವರ ಕಣ್ಣುಗಳನ್ನು ಸೂರತ್‌ನಲ್ಲಿ ಇಬ್ಬರಿಗೆ ದಾನ ಮಾಡಲಾಗಿತ್ತು.

Chamarajanagar: ಪತ್ನಿಯ 'ಕರಿಮಣಿ ಮಾಲೀಕ ನೀನಲ್ಲ..' ರೀಲ್ಸ್‌, ಪತಿಯ ಆತ್ಮಹತ್ಯೆ!

click me!