ಕೋವಿಡ್‌ನಿಂದ 250 ರೂ ಕೂಲಿ ಕೆಲಸ ಹೋಯಿತು, ಇದೀಗ ಈ ಕಾರ್ಮಿಕನ ತಿಂಗಳ ಆದಾಯ 3 ಲಕ್ಷ ರೂ!

By Suvarna News  |  First Published Feb 15, 2024, 4:05 PM IST

ಹೆಚ್ಚು ಓದಿಲ್ಲ, ಗೊತ್ತಿರುವುದು ಕೂಲಿ ಕೆಲಸ. ಪ್ರತಿ ದಿನ 250 ರೂಪಾಯಿ ಸಂಬಳ. ಪತ್ನಿ, ಮಕ್ಕಳು ಹೇಗೋ ಸಂಸಾರ ಸಾಗುತ್ತಿತ್ತು. ಆದರೆ ಕೋವಿಡ್ ಹೊಡೆತಕ್ಕೆ ಕೂಲಿ ಕೆಲಸವೂ ಹೋಯಿತು. ತುತ್ತು ಅನ್ನಕ್ಕೂ ಪರದಾಟ ಆರಂಭಗೊಂಡಿತು. ಮಕ್ಕಳ ಅಳು, ಕುಟುಂಬದ ಸಂಕಷ್ಟದಿಂದ ಚಿಂತೆಗೊಂಡ ಕೂಲಿ ಕಾರ್ಮಿಕ ಹೊಸ ಪ್ರಯೋಗ ಮಾಡಿದ್ದ. ನಯಾ ಪೈಸೆ ಅನುಭವವಿಲ್ಲದೆ ಕೆಲಸ ಶುರುಮಾಡಿದ್ದ. ಇದೀಗ ಈ ಕಾರ್ಮಿಕ ತಿಂಗಳ ಆದಾಯ 3 ಲಕ್ಷ ರೂಪಾಯಿ.
 


ಒಡಿಶಾ(ಫೆ.15) ಕೋವಿಡ್ ಮಹಾಮಾರಿ ಒಂದಲ್ಲೂ ಒಂದು ರೀತಿ ಪ್ರತಿಯೊಬ್ಬರ ಜೀವನದಲ್ಲಿ ಸಂಕಷ್ಟಗಳನ್ನು ತಂದಿದೆ. ಒಂದಡೆ ಆರೋಗ್ಯ, ಮತ್ತೊಂದೆ ಆರ್ಥಿಕ ಸ್ಥಿತಿಗತಿ, ಕೆಲಸ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಮೇಲೇಳಲಾರದ ಪರಿಸ್ಥಿತಿಯಲ್ಲಿ ಹಲವರಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕಷ್ಟಗಳ ಬಿರುಗಾಳಿಗೆ ಸಿಲುಕಿ ಸಾವರಿಸಿಕೊಂಡು ಬದುಕು ಕಟ್ಟಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಹೀಗೆ 250 ರೂಪಾಯಿಗೂ ಕೂಲಿ ಕೆಲಸ ಮಾಡಿ ಬದಕು ಸಾಗಿಸುತ್ತಿದ್ದ ಒಡಿಶಾದ ಇಸಾಕ್ ಮುಂಡಾ ರೋಚಕ ಪಯಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಈತನ ಬದುಕಿನ ಯಶೋಗಾಥೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ಕಿ ಬಾತ್‌ನಲ್ಲೂ ಉಲ್ಲೇಖಿಸಿದ್ದಾರೆ.

ಒಡಿಶಾದ ಇಸಾಕ್ ಮುಂಡಾ ಕೂಲಿ ಕಾರ್ಮಿಕ. ಕೂಲಿ ಕೆಲಸ ಬಿಟ್ಟರೆ ಬೇರೇನು ಗೊತ್ತಿಲ್ಲ. ಹೆಚ್ಚು ಒದಿಲ್ಲ. ಪತ್ನಿ, ಮಕ್ಕಳು ಸಂಸಾರದ ಬಂಡಿ ಹಲವು ಅಡೆ ತಡೆ, ಸಂಕಷ್ಟಗಳ ಮೂಲಕವೇ ಸಾಗುತ್ತಿತ್ತು. ಇದಕ್ಕಿದ್ದಂತೆ 2020ರಲ್ಲಿ ಕೋವಿಡ್ ಬಿರುಗಾಳಿ ಭಾರತದಲ್ಲಿ ಅವಾಂತರ ಸೃಷ್ಟಿಸಿತ್ತು. ಲಾಕ್‌ಡೌನ್, ಬಳಿಕ 2ನೇ ಅಲೆ ಸೇರಿದಂತೆ ಹಲವು ಕಾರಣಗಳಿಂದ ಎಲ್ಲಾ ಕ್ಷೇತ್ರಗಳು ಸೊರಗಿತ್ತು. ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ಬಿರುಗಾಳಿಯಲ್ಲಿ ಇದ್ದ ಕೂಲಿ ಕೆಲಸವನ್ನೂ ಇಸಾಕ್ ಮುಂಡಾ ಕಳದುಕೊಂಡಿತ್ತು.

Tap to resize

Latest Videos

undefined

 

ಬೀದಿಯಲ್ಲಿ ಪೆನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು 2300 ಕೋಟಿ ಮೌಲ್ಯದ ಕಂಪನಿ ಒಡೆಯ!

ದಿನಕ್ಕೆ 250 ರೂಪಾಯಿ ಕೂಲಿ ಕೆಲಸದಲ್ಲಿ ಕುಟುಂಬ ಸಾಗಿಸುತ್ತಿದ್ದ ಇಸಾಕ್ ಮುಂಡಾ ಅನಿವಾರ್ಯವಾಗಿ ಮನೆಯಲ್ಲೇ ಇರುವಂತಾಯಿತು. ಉಚಿತವಾಗಿ ಸಿಗುತ್ತಿದ್ದ ಪಡಿತರ ಬಿಟ್ಟರೆ ಬೇರೇನೂ ಇಲ್ಲ. ಕೈಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ. ಒಡಿಶಾದಿಂದ, ಆಂಧ್ರಪ್ರದಶ, ಮುಂಬೈ ಸೇರಿದಂತೆ ದೂರ ಪಟ್ಟಣಗಳಲ್ಲಿ ಕೂಲಿ ಕೆಲಸಕ್ಕಾಗಿ ತಡಕಾಡಿದ್ದ. ಆದರೆ ಕೋವಿಡ್ ಕಾರಣ ಎಲ್ಲವೂ ಸ್ಥಗಿತೊಂಡಿತ್ತು. ಕುಟುಂಬ ನೋಡಿಕೊಳ್ಳುವುದು ಅತ್ಯಂತ ಸವಾಲಾಗಿತ್ತು.

ಕೆಲಸವಿಲ್ಲದೆ ಮನೆಯಲ್ಲಿರುವಾಗ ಯೂಟ್ಯೂಬ್ ಮೂಲಕ ಸಂಪಾದನೆ ಸಾಧ್ಯವಿದೆ ಅನ್ನೋ ಮಾಹಿತಿ ಕಿವಿಗೆ ಬಿದ್ದಿತ್ತು. ಆದರೆ ಯೂಟ್ಯೂಬ್‌ನಲ್ಲಿ ಹೇಗೆ ಆದಾಯಗಳಿಸುವ ಮಾಹಿತಿ ಇರಲಿಲ್ಲ. ಗ್ರಾಮದ ಕೆಲ ಯುವಕರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ತಿಳಿದುಕೊಂಡ. ಬಳಿಕ 2020ರಲ್ಲಿ ಇಸಾಕ್ ಮುಂಡಾ ಯೂಟ್ಯೂಬ್ ಚಾನೆಲ್ ಆರಂಭಿಸಿದೆ. ಈ ಯ್ಯೂಟೂಬ್ ಚಾನೆಲ್‌ನಲ್ಲಿ ಯಾವ ವಿಡಿಯೋ ಹಾಕಲಿ ಅನ್ನೋ ಪ್ರಶ್ನೆ ಎದುರಾಯಿತು. 

ತನಗೆ ಗೊತ್ತಿರುವ ಒಡಿಶಾ ಸಾಂಪ್ರಾದಾಯಿಕ ಅಡುಗೆ ಕುರಿತು ವಿಡಿಯೋ ಮಾಡಿ ಹಾಕಲು ಇಸಾಕ್ ಮುಂಡಾ ಮುಂದಾದ. ಕ್ಯಾಮೆರಾ ಎದುರಿಸು ಚಾಕಚಕ್ಯತೆ, ಮಾತುಗಾರಿಕೆ ಯಾವುದೂ ಇಸಾಕ್ ಮುಂಡಾ ಬಳಿ ಇರಲಿಲ್ಲ. ಆದರೂ ಪ್ರಯತ್ನ ಮಾಡಿಯೇ ಬಿಟ್ಟ. ಸಾವಿರ ವಿಡಿಯೋಗಳಲ್ಲಿ ಇದು ಒಂದು ವಿಡಿಯೋ ಆಗಿತ್ತು ಅಷ್ಟೆ ಕಾರಣ, ಯಾರೂ ಕೂಡ ಇಸಾಕ್ ಮುಂಡಾ ವಿಡಿಯೋ ನೋಡಲಿಲ್ಲ. ಲೈಕ್ಸ್ ಬರಲಿಲ್ಲ, ವೀವ್ಸ್ ಹೆಚ್ಚಾಗಲಿಲ್ಲ.

ಇಸಾಕ್ ಮುಂಡಾ ಪ್ರಯತ್ನ ಬಿಡಲಿಲ್ಲ. ತನ್ನ ಮೊಬೈಲ್ ಮೂಲಕ ಒಡಿಶಾ ಸಾಂಪ್ರದಾಯಿಕ ಅಡುಗೆ ಮಾಡುತ್ತಾ ವಿಡಿಯೋ ಹಾಕಿದ್ದ. ಆದರೆ ಇಸಾಕ್ ಮುಂಡಾ ಹಾಕುತ್ತಿದ್ದ ಒಡಿಶಾದ ಅಪರೂಪದ , ವಿಶೇಷ ಖಾದ್ಯಗಳ ಕಾರಣದಿಂದ ನಿಧಾನವಾಗಿ ವಿಡಿಯೋಗಳಿಗೆ ಲೈಕ್ಸ್,ವೀಕ್ಷಣೆ ಬರಲು ಆರಂಭಿಸಿತು. ಆರಂಭಿಕ ದಿನಗಳಲ್ಲಿ ಡೇಟಾಗೆ ಹಾಕಿದ ದುಡ್ಡು ಬರುತ್ತಿಲ್ಲ. ಇವೆಲ್ಲಾ ನಮ್ಮಂತವರಿಗೆ ಅಲ್ಲ ಎಂದುಕೊಂಡೆ ಕೆಲಸ ಮುಂದುವರಿಸಿದ್ದ. 

 

ಉನ್ನತ ಹುದ್ದೆ ತೊರೆದು ಚಹಾ ಮಾರಲು ಪ್ರಾರಂಭಿಸಿದ ಐಐಟಿ ಪದವೀಧರ, ಈಗ ಈತನ ಸಂಸ್ಥೆ ಮೌಲ್ಯ 2,050 ಕೋಟಿ!

ಬಸಿ ಪಖಲಾ ಅನ್ನೋ ಒಡಿಶಾದ ತಿನಿಸು ಇಸಾಕ್ ಮುಂಡಾ ಚಿತ್ರಣವನ್ನೇ ಬದಲಿಸಿತು. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಬ್ರೆಜಿಲ್, ಅಮೆರಿಕ, ಮಂಗೋಲಿಯಾ ಸೇರಿದಂತೆ ಹಲವು ದೇಶಗಲ್ಲೂ ಈ ವಿಡಿಯೋ ಭಾರಿ ವೀಕ್ಷಣೆ ಕಂಡಿತ್ತು. ಈ ವಿಡಿಯೋ ಬಳಿಕ ಇಸಾಕ್ ಮುಂಡಾ ಸಾಂಪ್ರದಾಯಿಕ, ವಿಶೇಷ ಒಡಿಶಾ ಆಹಾರ ಭಾರಿ ಜನಪ್ರಿಯಗೊಂಡಿತು. ಯೂಟ್ಯೂಬ್ ವಿಡಿಯೋಗಳು ಮಿಲಿನಯ್ ವೀವ್ಸ್ ಪಡೆಯಿತು. ಆದಾಯ ಆರಂಭಗೊಂಡಿತು.

ಇಸಾಕ್ ಮುಂಡಾ ಇದೀಗ ಪ್ರತಿ ತಿಂಗಳು ಕನಿಷ್ಠ 3 ಲಕ್ಷ ರೂಪಾಯಿ ಆದಾಯವನ್ನು ಯೂಟ್ಯೂಬ್‌ನಿಂದ ಪಡೆಯುತ್ತಿದ್ದಾನೆ. ತನ್ನ ವಿಡಿಯೋ ಶೂಟ್ ಮಾಡಲು ಕ್ಯಾಮರಾ, ಎಡಿಟ್ ಮಾಡಲು ಲ್ಯಾಪ್‌ಟಾಪ್ ಖರೀದಿಸಿದ್ದಾನೆ. ಇಷ್ಟೇ ಅಲ್ಲ ಸೆಕೆಂಡ್ ಹ್ಯಾಂಡ್ ಕಾರೊಂದನ್ನು ಖರೀದಿಸಿದ್ದಾನೆ. ತಾನು ಹಾಗೂ ತನ್ನ ಕುಟುಂಬ ಈ ರೀತಿಯ ಒಂದು ಜೀವನವನ್ನು ಕನಸು ಕೂಡ ಕಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಸಾಕ್ ಮುಂಡಾ ಯಶೋಗಾಥೆಯನ್ನು ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
 

click me!