ಕರ್ಪೂರಿ ಠಾಕೂರ್ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಕುಟುಂಬ ರಾಜಕೀಯವನ್ನು ಪರೋಕ್ಷವಾಗಿ ಟೀಕಿಸಿದ್ದರು. ಅವರು ರಾಜಕೀಯದಲ್ಲಿ ತಮ್ಮ ಕುಟುಂಬವನ್ನು ಉತ್ತೇಜಿಸಲಿಲ್ಲ ಎಂದು ಹೇಳಿದ್ದರು.
ಹೊಸದಿಲ್ಲಿ (ಜನವರಿ 25, 2024): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗೆ ಕುಟುಂಬ ರಾಜಕೀಯದ ವಿರುದ್ದ ಟೀಕೆ ಮಾಡಿದ್ದರು. ಈ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ಪೂರಿ ಠಾಕೂರ್ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಕುಟುಂಬ ರಾಜಕೀಯವನ್ನು ಪರೋಕ್ಷವಾಗಿ ಟೀಕಿಸಿದ್ದರು. ಅವರು ರಾಜಕೀಯದಲ್ಲಿ ತಮ್ಮ ಕುಟುಂಬವನ್ನು ಉತ್ತೇಜಿಸಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಮಾತಿನ ಚಕಮಕಿ ಪ್ರಾರಂಭವಾಗಿದೆ. ಬಿಜೆಪಿ ತಕ್ಷಣ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಆದರೆ, ಇಂಡಿಯಾ ಮೈತ್ರಿಕೂಟದ ಪಾಲುದಾರ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾವ್ ಪುತ್ರಿ ಟೀಕೆ ಮಾಡಿದ್ದಾರೆ.
ಇಂಡಿಯಾ ಒಕ್ಕೂಟಕ್ಕೆ ಸಿಎಂ ನಿತೀಶ್ ಶಾಕ್, ಮೈತ್ರಿ ಮುರಿದು ಬಿಜೆಪಿ ಜೊತೆ ಸೇರುವ ಸಾಧ್ಯತೆ!
ಸಾಮಾನ್ಯವಾಗಿ, ಜನರು ತಮ್ಮ ನ್ಯೂನತೆಗಳನ್ನು ನೋಡುವುದಿಲ್ಲ. ಆದರೆ ನಿರ್ಲಕ್ಷ್ಯದಿಂದ ಇತರರ ಮೇಲೆ ಕೆಸರೆರಚುತ್ತಾರೆ ಎಮದು ಎಕ್ಸ್ (ಈ ಹಿಂದಿನ ಟ್ವಿಟ್ಟರ್) ನಲ್ಲಿ ಬರೆದಿದ್ದಾರೆ.
ನಿತೀಶ್ ಕುಮಾರ್ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಟ್ವೀಟ್‌ನ ಸಂದರ್ಭವು ಬಿಹಾರ ಸಿಎಂ ಅನ್ನು ಗುರಿಯಾಗಿಸಿಕೊಂಡಿದೆ ಎಂಬುಉ ಬಹುತೇಕ ಸ್ಪಷ್ಟವಾಗಿದೆ. ನಂತರದ ಟ್ವೀಟ್‌ನಲ್ಲಿ, ಅನರ್ಹರಿಗೆ ಪ್ರಾಮುಖ್ಯತೆ ನೀಡಿದಾಗ ಯಾವ ಆಕ್ರೋಶ ಉಂಟಾಗುತ್ತದೆ? ಒಬ್ಬರ ಸ್ವಂತ ಉದ್ದೇಶದಲ್ಲಿ ಮೋಸವಿರುವಾಗ ವಿಧಾನವನ್ನು ಯಾರು ಪ್ರಶ್ನಿಸಬಹುದು? ಎಂದೂ ರೋಹಿಣಿ ಆಚಾರ್ಯ ಪೋಸ್ಟ್ ಮಾಡಿದ್ದರು.
ನಡುಗೋ ಚಳಿಯಲ್ಲೂ ಬಿಸಿ ಏರಿದ ಬಿಹಾರ ರಾಜಕೀಯ ತಾಪಮಾನ: ದಿಢೀರ್ ರಾಜ್ಯಪಾಲರ ಭೇಟಿಯಾದ ನಿತೀಶ್ ಕುಮಾರ್!
ಆದರೆ, ಕೆಲ ಸಮಯದ ಬಳಿಕ ರೋಹಿಣಿ ಆಚಾರ್ಯ ತಮ್ಮ ಟ್ವೀಟ್ ಡಿಲೀಟ್ ಆಡಿದ್ದಾರೆ. ಆದರೂ, ಇದು ವೈರಲ್ ಆಗಿದೆ. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ ನಂತರ ಬಿಹಾರದ ರಾಜಕೀಯ ಭೂದೃಶ್ಯವು ಬದಲಾವಣೆಗೆ ಸಾಕ್ಷಿಯಾಗಿದೆ.
ಕರ್ಪೂರಿ ಠಾಕೂರ್ ಜನನಾಯಕ ಎಮದು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ನೆನಪಿಸಿಕೊಂಡಿದ್ದು, ಅವರು ಬಹಳ ಹಿಂದೆಯೇ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು ಎಂದು ಹೇಳಿದ್ದಾರೆ. ಈ ಹಿಂದೆ ಲಾಲು ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಠಾಕೂರ್ ಅವರ ಪುತ್ರ ಕೂಡ ಬಿಹಾರ ಸಂಪುಟದ ಭಾಗವಾಗಿದ್ದರು. ಹಾಗೂ, ನಿತೀಶ್ ಕುಮಾರ್ ಕೂಡ ಕರ್ಪೂರಿ ಠಾಕೂರ್‌ರನ್ನು ಹಾಡಿ ಹೊಗಳಿದ್ದಾರೆ.
ಇಂಡಿಯಾ ಮೈತ್ರಿ ಒಕ್ಕೂಟದ ಮುಖ್ಯಸ್ಥರಾಗಿ ಖರ್ಗೆ ಆಯ್ಕೆ, ಸಂಚಾಲಕ ಹುದ್ದೆ ತಿರಸ್ಕರಿಸಿದ್ರಾ ನಿತೀಶ್?