ವೃದ್ಧಾಪ್ಯದಲ್ಲಿ ಒಲಿದ ಲಕ್ಷ್ಮಿ: 5 ಕೋಟಿಯ ಲಾಟರಿ ಗೆದ್ದ 88ರ ಅಜ್ಜ

By Anusha Kb  |  First Published Jan 20, 2023, 1:22 PM IST

88 ವರ್ಷ ಪ್ರಾಯದ ವೃದ್ಧರೊಬ್ಬರಿಗೆ ತಮ್ಮ ಇಳಿವಯಸ್ಸಿನಲ್ಲಿ ಲಕ್ಷ್ಮಿ ಒಲಿದಿದ್ದಾಳೆ. ಮಹಂತ್ ದ್ವಾರಕಾ ದಾಸ್ ಎಂಬ ವೃದ್ಧರಿಗೆ ಬರೋಬ್ಬರಿ 5 ಕೋಟಿ ಮೊತ್ತದ ಲಾಟರಿ ಹೊಡೆದಿದ್ದು, ಫುಲ್ ಖುಷ್ ಆಗಿದ್ದಾರೆ.


ಪಂಜಾಬ್:  88 ವರ್ಷ ಪ್ರಾಯದ ವೃದ್ಧರೊಬ್ಬರಿಗೆ ತಮ್ಮ ಇಳಿವಯಸ್ಸಿನಲ್ಲಿ ಲಕ್ಷ್ಮಿ ಒಲಿದಿದ್ದಾಳೆ. ಮಹಂತ್ ದ್ವಾರಕಾ ದಾಸ್ ಎಂಬ ವೃದ್ಧರಿಗೆ ಬರೋಬ್ಬರಿ 5 ಕೋಟಿ ಮೊತ್ತದ ಲಾಟರಿ ಹೊಡೆದಿದ್ದು, ಫುಲ್ ಖುಷ್ ಆಗಿದ್ದಾರೆ. ಇವರು ಕಳೆದ 35 ವರ್ಷಗಳಿಂದಲೂ ಲಕ್ಷ್ಮಿ ಒಲಿಯುವ ಆಸೆಯಿಂದ ಲಾಟರಿ ಟಿಕೆಟ್‌ ಅನ್ನು ಖರೀದಿಸುತ್ತಲೇ ಇದ್ದರೂ ಇವರ ಸತತ ಪ್ರಯತ್ನ ನೋಡಿದ ಲಕ್ಷ್ಮಿಗೂ ಒಲಿಯಬೇಕೆನಿಸಿತೇನೋ ಬರೋಬ್ಬರಿ 5 ಕೋಟಿ ಮೊತ್ತದ ಭರ್ಜರಿ ಲಾಟರಿ ಇವರ ಪಾಲಾಗಿದೆ. 

ಲೊಹರಿ ಮಕರ ಸಂಕ್ರಾಂತಿ ಹಬ್ಬದ ಬಂಪರ್ ಲಾಟರಿ ( Lohri Makar Sankranti Bumper lottery)ಇದಾಗಿದ್ದು,  ಅವರ ಬಹು ದಿನದ ಕನಸು ನನಸಾಗಿದೆ.  ಪಂಜಾಬ್‌ನ ಡೆರಾ ಬಸ್ಸಿ ನಿವಾಸಿಯಾಗಿರುವ ಮಹಂತ್ ದ್ವಾರಕಾ ದಾಸ್  ಕಳೆದ 35 ವರ್ಷಗಳಿಂದಲೂ ಲಾಟರಿ ಟಿಕೆಟ್ ಖರೀದಿಸುತ್ತಲೇ ಇದ್ದರು. ಆದರೆ ಇದೇ ಮೊದಲ ಬಾರಿ ಅವರಿಗೆ ಲಾಟರಿ ಹೊಡೆದಿದ್ದು, ಅವರ ಬಹು ವರ್ಷಗಳ ಕನಸು ನನಸಾಗಿದೆ. 

Tap to resize

Latest Videos

ಪೊಲೀಸ್‌ ಅಧಿಕಾರಿ ಖಾತೆಗೆ ಬಂತು 10 ಕೋಟಿ!; ಹಣ ತೆಗೆಯೋದ್ರೊಳಗೆ ಅಕೌಂಟ್‌ ಫ್ರೀಜ್‌ ಮಾಡಿದ ಬ್ಯಾಂಕ್‌

ಹೀಗೆ ಭರ್ಜರಿ ಲಾಟರಿ ಹೊಡೆದಿರುವುದರಿಂದ ಮಹಂತ್ ದ್ವಾರಕಾ ದಾಸ್ ಫುಲ್ ಖುಷಿಯಾಗಿದ್ದಾರೆ. ನನಗೆ ಲಾಟರಿ ಮಗುಚಿರುವುದರಿಂದ ತುಂಬಾ ಖುಷಿ ಆಗಿದೆ. ಕಳೆದ 35 ರಿಂದ 40 ವರ್ಷಗಳಿಂದ ನಾನು ಲಾಟರಿ ಖರೀದಿಸುತ್ತಿದ್ದೇನೆ.  ನಾನು ಈ ಹಣವನ್ನು ನನ್ನ ಇಬ್ಬರು ಪುತ್ರರಿಗೆ ಹಾಗೂ ತಾನು ವಾಸವಿರುವ ಡೆರಾಗೆ ಹಂಚುವುದಾಗಿ  ಮಹಂತ್ ದ್ವಾರಕಾ ದಾಸ್ ಸುದ್ದಿಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಮಹಂತ್ ದ್ವಾರಕಾ ದಾಸ್ ಅವರ ಪುತ್ರ ನರೇಂದ್ರ (Narendra), ನನ್ನ ತಂದೆ ಯಾವಾಗಲೂ ಅವರ ಮೊಮ್ಮಗನ ಬಳಿ ಲಾಟರಿ ಟಿಕೆಟ್ ಖರೀದಿಸಿ ತರುವಂತೆ ಕೇಳುತ್ತಿದ್ದರು.  ಐದು ಕೋಟಿಯ ಲಾಟರಿ ಗೆದ್ದಿರುವುದರಿಂದ ಅವರ ಆಸೆ ಈಡೇರಿದೆ ಎಂದು ಹೇಳಿದರು.   ಗೆದ್ದ ಮೊತ್ತ 10 ಸಾವಿರಕ್ಕಿಂತ ಅಧಿಕ ಇರುವುದರಿಂದ ಲಾಟರಿ ಆದಾಯ ಟಿಡಿಎಸ್‌ಗೆ ಒಳಪಡುತ್ತದೆ.  5 ಕೋಟಿಯಲ್ಲಿ 30 ಶೇಕಡಾ ತೆರಿಗೆ ಕಡಿತವಾಗಿ ಅವರಿಗೆ 3.5 ಕೋಟಿ ಹಣ ಕೈಗೆ ಸಿಗುವುದು ಎಂದು ಲಾಟರಿ ಸಹಾಯಕ ನಿರ್ದೇಶಕ ಕರಮ್ ಸಿಂಗ್ (Karam Singh) ಹೇಳಿದರು. ಅವರು 5 ಕೋಟಿ ಬಹುಮಾನ ಮೊತ್ತವನ್ನು ಗೆದ್ದಿದ್ದಾರೆ. ಇದರಲ್ಲಿ 30 ಶೇಕಡಾ ತೆರಿಗೆ ಕಡಿತವಾಗಿ  ಉಳಿದ ಹಣವನ್ನು ಅವರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 

55 ಕೋಟಿ ರೂ ಲಾಟರಿ ಗೆದ್ದ ದುಬೈನಲ್ಲಿರುವ ಭಾರತೀಯ ಹೋಟೆಲ್ ಉದ್ಯೋಗಿ!

ಇದಕ್ಕೂ ಮೊದಲು ಕಳೆದ ವರ್ಷ ಎಪ್ರಿಲ್‌ನಲ್ಲಿ ಇನ್ನೊಬ್ಬ ಪಂಜಾಬ್ ವ್ಯಕ್ತಿಗೆ ಲಾಟರಿ ಮಗುಚಿತ್ತು. ಸುಮಾರು 34 ವರ್ಷಗಳ ಅದೃಷ್ಟ ಪರೀಕ್ಷೆಯ ನಂತರ ಈ ಯೋಗ ಅವರಿಗೆ ಕೂಡಿ ಬಂದಿತ್ತು.  ರೋಷನ್ (Roshan) ಎಂಬುವವರು ಈ ಲಾಟರಿ ಗೆದ್ದಿದ್ದರು.  ಲಾಟರಿ ಏಜೆಂಟ್ ಒಬ್ಬರು ಕರೆ ಮಾಡಿ ತಾವು 2.5 ಕೋಟಿ ಮೊತ್ತದ ಲಾಟರಿ ಗೆದ್ದಿರುವುದಾಗಿ ಅವರಿಗೆ ಹೇಳಿದ್ದರು. ಅದು ಪಂಜಾಬ್‌ನ ಬೈಸಾಕಿ ಬಂಪರ್ (Baisakhi Bumper Lottery) ಲಾಟರಿಯಾಗಿತ್ತು. 

An 88-year-old man wins Rs 5 crore lottery in Punjab's Derabassi

I'm feeling happy. I've been buying lotteries for the last 35-40 years. I will distribute the winning amount among my two sons and to my 'Dera': Mahant Dwarka Dass, lottery winner (19.01) pic.twitter.com/D36zgCbWrR

— ANI (@ANI)

 

click me!