ಕೇರಳದ 8 ಸಂಸದರಿಗೆ ಲಕ್ಷದ್ವೀಪ ಪ್ರವೇಶಕ್ಕೆ ಅನುಮತಿ ನಿರಾಕರಣೆ

By Suvarna NewsFirst Published Jul 7, 2021, 10:10 AM IST
Highlights

* ಕೊರೋನಾ ಸಾಂಕ್ರಾಮಿಕ, ಭದ್ರತೆ ಕಾರಣಕ್ಕೆ ಅನುಮತಿ ನಕಾರ

* ಕೇರಳದ 8 ಸಂಸದರಿಗೆ ಲಕ್ಷದ್ವೀಪ ಪ್ರವೇಶಕ್ಕೆ ಅನುಮತಿ ನಿರಾಕರಣೆ

* ಇತ್ತೀಚೆಗಷ್ಟೇ ಕಾಂಗ್ರೆಸ್‌ ಸಂಸದರಿಗೆ ಪ್ರವೇಶ ಅನುಮತಿ ನಿರಾಕರಿಸಿದ್ದ ಲಕ್ಷದ್ವೀಪ 

ಕೊಚ್ಚಿ(ಜು.07): ಇತ್ತೀಚೆಗಷ್ಟೇ ಕೊರೋನಾ ಸಾಂಕ್ರಾಮಿಕ ಮತ್ತು ಭದ್ರತಾ ಕಾರಣಕ್ಕಾಗಿ ಕಾಂಗ್ರೆಸ್‌ ಸಂಸದರಿಗೆ ಪ್ರವೇಶ ಅನುಮತಿ ನಿರಾಕರಿಸಿದ್ದ ಲಕ್ಷದ್ವೀಪ ಆಡಳಿತ ಇದೀಗ ಅದೇ ಕಾರಣವನ್ನು ನೀಡಿ ಕೇರಳದ ಎಡ ಪಕ್ಷಗಳ 8 ಮಂದಿ ಸಂಸದರಿಗೆ ಲಕ್ಷದ್ವೀಪ ಪ್ರವೇಶಿಸಲು ಅನುಮತಿ ನಿರಾಕರಿಸಿದೆ.

'ಲಕ್ಷದ್ವೀಪದ ಹೈಕೋರ್ಟ್‌ ವ್ಯಾಪ್ತಿ ಕರ್ನಾಟಕಕ್ಕೆ ಸ್ಥಳಾಂತರ ಪ್ರಸ್ತಾವ ಸುಳ್ಳು ಸುದ್ದಿ!'

ಲೋಕಸಭಾ ಸದಸ್ಯ ಥಾಮಸ್‌ ಚಾಜಿಕದನ್‌, ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟಾಸ್‌ ಸೇರಿದಂತೆ 8 ಮಂದಿ ಸಂಸದರು ಲಕ್ಷ ದ್ವೀಪಕ್ಕೆ ತೆರಳಲು ಮುಂದಾಗಿದ್ದರು. ಆದರೆ, ಸಂಸದರ ಪ್ರವೇಶಕ್ಕೆ ತಡೆಯೊಡ್ಡಿರುವ ಲಕ್ಷದ್ವೀಪ ಜಿಲ್ಲಾಧಿಕಾರಿ ಅಸ್ಕರ್‌ ಅಲಿ, ಸೋಮವಾರ ಆದೇಶವೊಂದನ್ನು ಹೊರಡಿಸಿ ಸಂಸದರು ರಾಜಕೀಯ ಚಟುವಟಿಕೆಗಳಿಗಾಗಿ ಲಕ್ಷದ್ವೀಪಕ್ಕೆ ಆಗಮಿಸುವುದು ಇಲ್ಲಿನ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಆಗಲಿದೆ. ಕೇಂದ್ರಾಡಳಿತ ಪ್ರದೇಶದ ಹಿತಾಸಕ್ತಿ ಮತ್ತು ಭದ್ರತೆಯ ದೃಷ್ಟಿಯಿಂದ ಸಂಸದರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಕ್ಷದ್ವೀಪ ಜಟಾಪಟಿ: ಬಂಧನ ಭೀತಿಯಿಂದ ಪಾರಾದ ನಟಿ ಆಯಿಷಾ ಸುಲ್ತಾನ್!

ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಪ್ರಫುಲ್‌ ಖೋಡಾ ಪಟೇಲ್‌ ಅವರು ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳನ್ನು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ನಿರಂತರ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ ಸಂಸದರಿಗೆ ಭದ್ರತೆಯ ಕಾರಣ ನೀಡಿ ಅನುಮತಿ ನಿರಾಕರಿಸಿವುದು ಮತ್ತೊಂದು ವಿವಾದ ಸೃಷ್ಟಿಸಿದೆ.

click me!