ಕೊರೋನಾಕ್ಕೆ ಬಲಿಯಾದವರ ಚಿತಾಭಸ್ಮದಿಂದ ಪಾರ್ಕ್ ನಿರ್ಮಾಣ!

By Suvarna NewsFirst Published Jul 7, 2021, 7:42 AM IST
Highlights

* ಕೊರೋನಾಕ್ಕೆ ಬಲಿಯಾದವರ ಚಿತಾಭಸ್ಮದಿಂದ ನೆನಪಿನ ಪಾರ್ಕ್

* ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿನೂತನ ಪ್ರಯೋಗ

* 22 ಲಾರಿ ಲೋಡ್‌ನಷ್ಟಿರುವ ಚಿತಾಭಸ್ಮ ಬಳಕೆಗೆ ನಿರ್ಧಾರ

ಭೋಪಾಲ್‌(ಜು.07): ಕೊರೋನಾಕ್ಕೆ ಬಲಿಯಾದವರ ಚಿತಾಭಸ್ಮವನ್ನೇ ಬಳಸಿಕೊಂಡು ಮಧ್ಯಪ್ರದೇಶದ ಭೋಪಾಲ್‌ನ ಸ್ಮಶಾನದಲ್ಲೇ ಉದ್ಯಾನ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಕೊರೋನಾಕ್ಕೆ ಬಲಿಯಾದವರ ನೆನಪಿನಲ್ಲೇ ನಿರ್ಮಿಸುವ ಈ ಪಾರ್ಕ್ಗೆ ಚಿತಾಭಸ್ಮ ಬಳಸುವ ಮೂಲಕ ಸುಮಾರು 22 ಲಾರಿಯಷ್ಟುಚಿತಾಭಸ್ಮದ ನಿರ್ವಹಣೆಯನ್ನು ಅತ್ಯಂತ ಅರ್ಥಪೂರ್ಣ, ಪರಿಸರ ಸ್ನೇಹಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಲಾಕ್‌ಡೌನ್‌ ಮತ್ತಿತರೆ ಕಾರಣದಿಂದಾಗಿ ಮೃತರ ಸಂಬಂಧಿಕರು ಪೂರ್ಣ ಚಿತಾಭಸ್ಮ ಕೊಂಡೊಯ್ದಿರಲಿಲ್ಲ. ಅದನ್ನು ನದಿಗೆ ಎಸೆದರೂ ಅದು ಪರಿಸರಕ್ಕೂ ಮಾರಕವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಭದ್‌ಭದ್‌ ವಿಶ್ರಾಮ್‌ ಘಾಟ್‌ನಲ್ಲಿ ಚೀಲಗಳಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಇದೀಗ ಅದೇ ಸ್ಮಶಾನದಲ್ಲಿನ 12000 ಚದರ ಅಡಿ ಜಾಗವನ್ನು ಬಳಸಿಕೊಂಡು ಜಪಾನಿನ ಮಿಯಾವಾಕಿ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಸ್ಮಶಾನದ ಆಡಳಿತ ನಿರ್ಧರಿಸಿದೆ.

ಭದ್‌ಭದ್‌ ಮಾ.15ರಿಂದ ಜೂ.15ರ ಅವಧಿಯಲ್ಲಿ ಕೊರೋನಾದಿಂದ ಮೃತಪಟ್ಟವರ 6,000ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹೆಚ್ಚಿನ ಕುಟುಂಬ ಸದಸ್ಯರು ಮೃತ ಮೂಳೆಗಳನ್ನಷ್ಟೇ ಒಯ್ದಿದ್ದಾರೆ. ಆ

click me!