ಕೊರೋನಾ ಲಸಿಕೆ ಜಾದೂ: ಪೂರ್ಣ ದೃಷ್ಟಿ ಕಳೆದುಕೊಂಡಿದ್ದ ಮಹಿಳೆಗೆ ಮತ್ತೆ ದೃಷ್ಟಿ!

By Suvarna News  |  First Published Jul 7, 2021, 7:55 AM IST

* ಲಸಿಕೆ ಬಳಿಕ ವೃದ್ಧೆಗೆ ಕಣ್ಣಿನ ದೃಷ್ಟಿ ಮರಳಿತು

* ಕೊರೋನಾ ಲಸಿಕೆಯಿಂದ ನಡೆಯಿತು ಪವಾಡ

* ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದ ಮಹಿಳೆ


ಮುಂಬೈ(ಜು.07): ಕೋವಿಶೀಲ್ಡ್‌ ಲಸಿಕೆ ಪಡೆದ ನಂತರ 70 ವರ್ಷದ ವಯೋವೃದ್ಧೆ ತಮ್ಮ ಕಣ್ಣಿನ ದೃಷ್ಟಿಯನ್ನು ಮರಳಿ ಪಡೆದಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ವಾಷಿಂ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ 9 ವರ್ಷದ ಹಿಂದೆ ತಮ್ಮ ಎರಡೂ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು.

ಈ ನಡುವೆ ಜೂ.26ರಂದು ಮಥುರಾಬಾಯಿ ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದರು. ಅಚ್ಚರಿ ಎಂಬಂತೆ ಮಾರನೆ ದಿನ ಅವರಿಗೆ ಒಂದು ಕಣ್ಣಿನ ದೃಷ್ಟಿಮರಳಿದೆ. ಒಂದು ಕಣ್ಣು ಶೇ.30-40ರಷ್ಟುದೃಷ್ಟಿಪಡೆದುಕೊಂಡಿದೆ ಎಂದು ಅವರು ಹೇಳುತ್ತಿದ್ದಾರೆ. ಹೀಗಾಗಿ ಇದು ವೈದ್ಯಲೋಕಕ್ಕೇ ಅಚ್ಚರಿಯಾಗಿ ಪರಿಣಮಿಸಿದೆ.

Tap to resize

Latest Videos

ಇತರೆ ಕೆಲವು ಕಡೆ ಕೂಡಾ ಲಸಿಕೆ ಪಡೆದ ಬಳಿಕ ತಮ್ಮ ಇನ್ನಿತರೆ ಹಲವು ಆರೋಗ್ಯ ಸಮಸ್ಯೆ ನಿವಾರಣೆಯಾದ ಬಗ್ಗೆ ಜನರು ಹೇಳಿಕೊಂಡ ಘಟನೆಗಳೂ ಇತ್ತೀಚೆಗೆ ವರದಿಯಾಗಿದ್ದವು.

click me!