ಇಂದು ಮತ್ತೆ ದಿಲ್ಲಿಗೆ ಲಕ್ಷಾಂತರ ರೈತರ ಮುತ್ತಿಗೆ: ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ

By Kannadaprabha NewsFirst Published Mar 20, 2023, 7:26 AM IST
Highlights

ಬೆಳೆಗಳ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾನೂನುಬದ್ಧ ಲಿಖಿತ ಖಾತರಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ)ಸೋಮವಾರ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ‘ಕಿಸಾನ್‌ ಮಹಾಪಂಚಾಯತ್‌’ ಸಮಾವೇಶ  ಆಯೋಜಿಸಿದೆ.

ನವದೆಹಲಿ: ಬೆಳೆಗಳ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾನೂನುಬದ್ಧ ಲಿಖಿತ ಖಾತರಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ)ಸೋಮವಾರ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ‘ಕಿಸಾನ್‌ ಮಹಾಪಂಚಾಯತ್‌’ ಸಮಾವೇಶ  ಆಯೋಜಿಸಿದೆ.  ಬೆಂಬಲ ಬೆಲೆಗೆ ಖಾತರಿ, ವಿದ್ಯುತ್‌ ಬಿಲ್‌ ಹಿಂಪಡೆಯುವಿಕೆ, ಹೋರಾಟಗಳಲ್ಲಿ ಮೃತಪಟ್ಟ ರೈತರಿಗೆ ಪರಿಹಾರ, ಹೋರಾಟಗಳಲ್ಲಿ ರೈತರ ಮೇಲೆ ದಾಖಲಾದ ಪ್ರಕರಣ ವಜಾ ಸೇರಿ ಬಾಕಿ ಉಳಿದಿರುವ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳಿಂದ ಸಮಾವೇಶ ನಡೆಯಲಿದೆ.

ಪ್ರಸ್ತುತ ರದ್ದು ಮಾಡಲಾಗಿರುವ ಕೃಷಿ ಕಾಯ್ದೆಯನ್ನು (Agriculture Act) ವಿರೋಧಿಸಿ 2021ರಲ್ಲಿ ನಡೆಸಿದ ಬೃಹತ್‌ ಹೋರಾಟದಲ್ಲಿ, ಕನಿಷ್ಠ ಬೆಂಬಲ ಬೆಲೆಗೆ ಲಿಖಿತ ಖಾತರಿ (minimum support price guarantee) ಸೇರಿದಂತೆ ಅನೇಕ ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದರು. ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಗಿತ್ತು. ಆದರೆ ಈ ವರೆಗೆ ಈ ನಿಗದಿತ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ರೈತರು ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಕೇಂದ್ರವು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ರೈತ ಸಂಘಟನೆಗಳೊಂದಿಗೆ ಚರ್ಚಿಸಿದ ಬಳಿಕವೇ ಸಂಸತ್ತಿನಲ್ಲಿ ‘ವಿದ್ಯುತ್‌ ತಿದ್ದುಪಡಿ ಮಸೂದೆ 2022’ ಅನ್ನು ಮಂಡಿಸಲಾಗುವುದು ಎಂಬ ಭರವಸೆ ಹೊರತಾಗಿಯೂ ರೈತರ ವಿರೋಧದ ನಡುವೆ ಮಂಡಿಸಲಾಗಿರುವ ವಿದ್ಯುತ್‌ ಬಿಲ್‌ ಮಸೂದೆಯನ್ನು (Electricity bill Act) ಹಿಂಪಡೆಯಬೇಕು ಎಂದು ಆಗ್ರಹಿಸಿ, ಸಮಾವೇಶ ಕೈಗೊಳ್ಳಲಾಗುತ್ತಿದ್ದು ದೇಶದ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ ಎಂದು ಎಸ್‌ಕೆಎಂನ ನಾಯಕ ದರ್ಶನ್‌ ಪಾಲ್‌ (darshan pal)ತಿಳಿಸಿದ್ದಾರೆ.

Tungabhadra Dam : ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾಗಕ್ಕೆ ನೀರು ಹರಿ​ಸಲು ಆಗ್ರಹಿಸಿ ರೈತರ ಪ್ರತಿಭಟನೆ

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 20000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಅಲ್ಲದೇ ಯಾವುದೇ ಅಹಿತಕರ ಘಟನೆ ಸಂಬಂಧಿಸದಂತೆ ಹಾಗೂ ಸಮಾವೇಶ ಸುಗಮವಾಗಿ ಸಾಗುವಂತೆ ನೋಡಿಕೊಳ್ಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.  ಈ ಹಿಂದೆ 2020ರ ಆಗಸ್ಟ್‌ನಿಂದ 1 ವರ್ಷ 4 ತಿಂಗಳು ಕಾಲ ರೈತರು ಸತತವಾಗಿ ದೆಹಲಿಯಲ್ಲಿ ರಸ್ತೆಯಲ್ಲಿ ಬೀಡುಬಿಟ್ಟು ಪ್ರತಿಭಟನೆ ನಡೆಸಿದ್ದರು.

Raichur: ತುಂಗಭದ್ರಾ ಕಾಲುವೆ ನೀರಿಗಾಗಿ ರಕ್ತದಲ್ಲಿ ಸಿಎಂಗೆ ಪತ್ರ ಬರೆದು ರೈತರಿಂದ ಹೋರಾಟ

click me!