ನನ್ನನ್ನು ದೇಶದ್ರೋಹಿ ಅಂತ ಕರೀಬೇಡಿ: ರಾಹುಲ್‌ಗಾಂಧಿ

By Kannadaprabha News  |  First Published Mar 20, 2023, 6:38 AM IST

ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಪ್ರಶ್ನಿಸುವ ಮೂಲಕ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿಗರು ಸಮರ ಸಾರಿರುವ ಸಂದರ್ಭದಲ್ಲೇ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದ ಕುರಿತು ಸಂಸದೀಯ ಆಯೋಗವೊಂದರ ಎದುರು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಲಾಗಿದೆ.


ನವದೆಹಲಿ: ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಪ್ರಶ್ನಿಸುವ ಮೂಲಕ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿಗರು ಸಮರ ಸಾರಿರುವ ಸಂದರ್ಭದಲ್ಲೇ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದ ಕುರಿತು ಸಂಸದೀಯ ಆಯೋಗವೊಂದರ ಎದುರು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಲಂಡನ್‌ನಲ್ಲಿ ನಾನು ಭಾರತದ ಪ್ರಜಾಪ್ರಭುತ್ವಕ್ಕೆ (Indian democracy) ಸಂಬಂಧಿಸಿದಂತೆ ಪ್ರಶ್ನೆಗಳನ್ನಷ್ಟೇ ಕೇಳಿದ್ದೇನೆ. ಅದಕ್ಕಾಗಿ ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಬೇಡಿ. ನಾನು ಭಾರತದ ವಿಚಾರದಲ್ಲಿ ಯಾವುದೇ ದೇಶ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ವಿದೇಶಾಂಗ ಸಚಿವಾಲಯದ ಅಧ್ಯಕ್ಷತೆಯ ಸಂಸದೀಯ ಸಲಹಾ ಸಮಿತಿ ಸಭೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ನಾನು ಎತ್ತಿರುವ ವಿಷಯಗಳು ಆಂತರಿಕ ವಿಚಾರಗಳಾಗಿವೆ. ಅದನ್ನು ನಾವೇ ಬಗೆಹರಿಸಿಕೊಳ್ಳಬಹುದು ಎಂದು ಸದಸ್ಯರ ಎದುರು ಹೇಳಿದರು ಎನ್ನಲಾಗಿದೆ.

Tap to resize

Latest Videos

ಮಾತಿನ ಜಟಾಪಟಿ:

ಜಿ20 ಅಧ್ಯಕ್ಷತೆಯ (e G20 chairmanship) ಕುರಿತು ಚರ್ಚೆ ನಡೆಸುವ ಸಲುವಾಗಿ ಈ ಸಭೆಯನ್ನು ಆಯೋಜಿಸಲಾಗಿತ್ತು. ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ (S. Jaishankar)ಉಪಸ್ಥಿತರಿದ್ದರು. ಆರಂಭದಲ್ಲಿ ಜೈಶಂಕರ್‌ ಅವರು ಜಿ20 ಅಧ್ಯಕ್ಷತೆಯ ಕುರಿತು ಸದಸ್ಯರಿಗೆ ಪ್ರಾತ್ಯಕ್ಷಿಕೆ ನೀಡಿದರು. ರಾಜಕೀಯ ನಾಯಕರು ವಿದೇಶಿ ನೆಲದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದರು. ಆಗ ರಾಹುಲ್‌ ಪ್ರತಿಕ್ರಿಯೆ ನೀಡಿದರು. ತಕ್ಷಣವೇ, ಇದು ಆ ವಿಷಯ ಮಾತನಾಡುವ ವೇದಿಕೆಯಲ್ಲ ಎಂದು ಬಿಜೆಪಿ ಸಂಸದರು ಅಡ್ಡಿಪಡಿಸಿದರು. ಇನ್ನೂ ಕೆಲವು ಸಂಸದರು ಬೆಂಬಲ ನೀಡಿದರು.

ಕೈ ನಾಯಕನಿಗೆ ಶಾಕ್: ರಾಹುಲ್‌ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!

ವಿಪಕ್ಷಗಳ ಸದಸ್ಯರು ರಾಹುಲ್‌ ಪರ ನಿಂತರು. ಲಂಡನ್‌ ಭೇಟಿಯ ವಿಚಾರ ಪರೋಕ್ಷವಾಗಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ರಾಹುಲ್‌ ಅವರಿಗೆ ಸ್ಪಷ್ಟನೆ ಅಥವಾ ಸಮರ್ಥನೆ ನೀಡಲು ಹಕ್ಕು ಇದೆ ಎಂದು ವಾದಿಸಿದರು. ವಾಗ್ವಾದ ಜೋರಾದಾಗ ಜೈಶಂಕರ್‌ ಮಧ್ಯಪ್ರವೇಶಿಸಿ, ಈ ಕುರಿತಾದ ಹೇಳಿಕೆಗಳನ್ನು ಸಂಸತ್ತಿನಲ್ಲಿ ನೀಡಿ. ಈಗ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ. ರಾಜಕೀಯ ವಿಚಾರಗಳು ಬೇಡ ಎಂದು ತೆರೆ ಎಳೆದರು ಎಂದು ವರದಿಗಳು ತಿಳಿಸಿವೆ.

ರಾಹುಲ್‌ ಕರ್ನಾಟಕ ಪ್ರವಾಸ ಬಳಿಕ ಕಾಂಗ್ರೆಸ್‌ ಪಟ್ಟಿ ಬಿಡುಗಡೆ: ಡಿಕೆಶಿ

click me!