ನಿರಾ​ಯುಧ ರೈತರ ಮೇಲೆ ಹರಿದ ಕಾರು: ಮತ್ತೊಂದು ವಿಡಿಯೋ ವೈರ​ಲ್‌!

By Suvarna NewsFirst Published Oct 7, 2021, 10:04 AM IST
Highlights

* ಉತ್ತರ ಪ್ರದೇಶದ ಲಖೀಂಪುರದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆ

* ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಏಕಾಏಕಿ ಹರಿದು ರೈತರ ಸಾವಿಗೆ ಕಾರಣವಾದ ಕಾರು

ಲಖನೌ(ಆ.07): ಉತ್ತರ ಪ್ರದೇಶದ(Uttar Pradesh) ಲಖೀಂಪುರದ ಹಿಂಸಾಚಾರ(Lakhimpur Kheri Violence) ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಇದರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಏಕಾಏಕಿ ಹರಿದು ರೈತರ ಸಾವಿಗೆ ಕಾರಣವಾಗಿರುವುದು ಕಂಡುಬಂದಿದೆ.

ಪ್ರತಿಭಟನೆ ನಡೆಸುತ್ತಿದ್ದ ರೈತರು ಯಾವುದೇ ಆಯುಧಗಳನ್ನು ಹೊಂದಿರಲಿಲ್ಲ. ಕೇಂದ್ರ ಸಚಿವರದ್ದು ಎಂದು ಹೇಳಲಾಗಿರುವ ಕಾರಿನ ಮೇಲೆ ರೈತರು ಯಾವುದೇ ಕಲ್ಲುಗಳ ತೂರಾಟ ನಡೆಸಿಲ್ಲ. ಆದರೆ ಕಾರಿನ ಚಾಲಕ ಉದ್ದೇಶಪೂರ್ವಕವಾಗಿ ರೈತರ ಮೇಲೆ ಕಾರು ಹತ್ತಿಸಿರುವುದು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ಕಂಡುಬರುತ್ತಿದೆ.

ಪ್ರತಿ​ಭ​ಟನಾ ಮೆರ​ವ​ಣಿ​ಗೆ​ಯಲ್ಲಿ ಸಾಗು​ತ್ತಿದ್ದ ರೈತರ ಮೇಲೆ ಕಾರು ಹರಿದ ನಂತರ ಗುಂಪು ಕಾರಿನ ಮೇಲೆ ದಾಳಿ ಮಾಡಿದೆ. ಹಾಗಾಗಿ ಸಚಿವರ ಬೆಂಗಾವಲಿನ ನಾಲ್ವರು ಮೃತಪಟ್ಟಿದ್ದಾರೆ ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ.

ರೈತ ಸಂತ್ರ​ಸ್ತ​ರಿಗೆ ಪ್ರಿಯಾಂಕಾ, ರಾಹುಲ್‌ ಸಂತೈ​ಕೆ

ಉತ್ತರ ಪ್ರದೇ​ಶದ ಲಖೀಂಪುರ ಖೇರಿ​ಯಲ್ಲಿ ಇತ್ತೀ​ಚೆಗೆ ರೈತರ ಮೇಲೆ ನಡೆದ ಹಿಂಸಾ​ಚಾರ ಪ್ರಕ​ರ​ಣದ ಸಂತ್ರಸ್ತ ಕುಟುಂಬ​ಗ​ಳನ್ನು ಬುಧ​ವಾರ ರಾತ್ರಿ ಕಾಂಗ್ರೆಸ್‌ ನಾಯ​ಕ​ರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ​ಯಾಗಿ ಸಂತೈ​ಸಿ​ದರು.

ಪಾಲಿಯಾ ಗ್ರಾಮದ ಲವ್‌​ಪ್ರೀತ್‌ ಸಿಂಗ್‌ ಎಂಬ ಮೃತ ರೈತನ ಮನೆಗೆ ಆಗ​ಮಿ​ಸಿದ ಉಭಯ ನಾಯ​ಕರು ಸಂತಾಪ ಸೂಚಿ​ಸಿ​ದರು ಹಾಗೂ ಉಭಯ ನಾಯ​ಕರು ಕುಟುಂಬ​ಸ್ಥ​ರನ್ನು ಬಿಗಿ​ದಪ್ಪಿ ಸಾಂತ್ವನ ಹೇಳಿ​ದ​ರು ಹಾಗೂ ಕುಟುಂಬಕ್ಕೆ ನ್ಯಾಯ ದೊರ​ಕಿ​ಸಿ​ಕೊ​ಡುವ ಭರ​ವಸೆ ನೀಡಿ​ದ​ರು.

ಈ ವೇಳೆ ಛತ್ತೀ​ಸ್‌​ಗಢ ಮುಖ್ಯ​ಮಂತ್ರಿ ಭೂಪೇಶ್‌ ಬಾಘೇಲ್‌, ಪಂಜಾಬ್‌ ಮುಖ್ಯ​ಮಂತ್ರಿ ಚರ​ಣ್‌​ಜಿತ್‌ ಸಿಂಗ್‌ ಚನ್ನಿ, ಕಾಂಗ್ರೆಸ್‌ ನೇತಾರ ದೀಪೇಂದರ್‌ ಹೂಡಾ ಹಾಜ​ರಿ​ದ್ದ​ರು.

click me!