ಚಲಿಸುತ್ತಿದ್ದ ರೈಲಿನಡಿಗೆ ಬಿದ್ದ ಇಬ್ಬರು ಪ್ರಯಾಣಿಕರ ರಕ್ಷಿಸಿದ RPF ಮಹಿಳಾ ಪೇದೆ!

Published : Mar 21, 2021, 07:37 PM IST
ಚಲಿಸುತ್ತಿದ್ದ ರೈಲಿನಡಿಗೆ ಬಿದ್ದ ಇಬ್ಬರು ಪ್ರಯಾಣಿಕರ ರಕ್ಷಿಸಿದ RPF ಮಹಿಳಾ ಪೇದೆ!

ಸಾರಾಂಶ

ರೈಲು ಹತ್ತುವಾಗ ಹಾಗೂ ಇಳಿಯುವಾಗ ಎಚ್ಚರವಿರಬೇಕು ಅನ್ನೋ ಸೂಚನೆಯನ್ನು ಎಲ್ಲಾ ನಿಲ್ದಾಣಗಳಲ್ಲಿ ಕೇಳಬಹುದು. ಕಾರಣ ಕೆಲಸ ಸುಲಭವಾದರೂ ಅತ್ಯಂತ ಅಪಾಯ ಕೂಡ ಹೌದು. ಹೀಗೆ ಎಚ್ಚರ ತಪ್ಪಿದ್ದ ಇಬ್ಬರು ಪ್ರಯಾಣಿಕರು, ಚಲಿಸುತ್ತಿರುವ ರೈಲಿನಡಿಗೆ ಬಿದಿದ್ದಾರೆ. ಆದರೆ ಪ್ರಯಾಣಿಕರನ್ನು ಮಹಿಳಾ ಪೊಲೀಸ್ ಪೊಲೀಸ್ ಪೇದೆ ರಕ್ಷಿಸಿದ್ದಾರೆ

ಜಾರ್ಖಂಡ್(ಮಾ.21): ನಿಲ್ದಾಣದಿಂದ ರೈಲು ಚಲಿಸುತ್ತಿದೆ. ಈ ವೇಳೆ ಇಬ್ಬರು ಪ್ರಯಾಣಿಕರು ನಿಲ್ದಾಣ ಹಾಗೂ ರೈಲು ಹತ್ತುವಾಗ ಇರುವ ಅಂತರದೊಳಗೆ ಬಿದ್ದಿದ್ದಾರೆ. ಆದರೆ RPF ಮಹಿಳಾ ಪೇದೆ ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ ಇಬ್ಬರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. 

ಅಬ್ಬಬ್ಬಾ! 35ಕಿ. ಮೀ. ನಷ್ಟು ಹಿಂದಕ್ಕೋಡಿದ ರೈಲು, ವೈರಲ್ ಆಯ್ತು ವಿಡಿಯೋ!

ಈ ಘಟನೆ ನಡೆದಿರುವುದು ಜಾರ್ಖಂಡ್‌ನ ಟಾಟಾನಗರ ರೈಲು ನಿಲ್ದಾಣದಲ್ಲಿ. ರೈಲು ಹಾಗು ನಿಲ್ದಾಣ ನಡುವಿನ ಅಂತರಕ್ಕೆ ಇಬ್ಬರು ಪ್ರಯಾಣಿಕರು ಕುಸಿದಿದ್ದಾರೆ. ಈ ವೇಳೆ ಇಬ್ಬರನ್ನು ಹಿಡಿದೆಳೆದ ಮಹಿಳಾ ಪೇದೆ ಪ್ರಾಣ ಉಳಿಸಿದ್ದಾರೆ. ಘಟನೆ ನೋಡಿದ ಮತ್ತೊರ್ವ ಮಹಿಳಾ ಪೇದೆ ಚಲಿಸುತ್ತಿರುವ ರೈಲಿನಿಂದ ಜಿಗಿದು ರಕ್ಷಣೆಗೆ ಧಾವಿಸಿದ್ದಾರೆ.

ವಿಶ್ವದ ಅತೀ ಎತ್ತರದ ರೈಲು ಸೇತುವೆ ಕಮಾನು ಕಾಮಗಾರಿ ಪೂರ್ಣ; ಹೆಚ್ಚಾಯ್ತು ಕಾಶ್ಮೀರದ ಸೌಂದರ್ಯ!.

ಘಟನೆ ವಿವರ:

ಟಾಟಾ ನಗರ ರೈಲು ನಿಲ್ದಾಣದಲ್ಲಿ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ ಇಳಿಯಲು ಪ್ರಯತ್ನಿದ ಮಹಿಳೆಗೆ ಕುಟಂಬಸ್ಥರು ಸಹಾಯ ಮಾಡಿದ್ದಾರೆ. ಆದರೆ ಇಬ್ಬರು ರೈಲು ಹಾಗೂ ನಿಲ್ದಾಣದ ಅಂತರದೊಳಕ್ಕೆ ಬಿದ್ದಿದ್ದಾರೆ. ಆದರೆ ಮಹಿಳಾ ಪೊಲೀಸ್ ಇಬ್ಬರನ್ನು ಹಿಡಿದೆಳೆದು ರಕ್ಷಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು