ದೀದಿ ನನ್ನ ತಲೆಗೆ ಕಾಲಿಟ್ಟರೂ ಬಂಗಾಳಿಗರ ಕನಸಿಗೆ ಒದಿಯಲು ಅವಕಾಶ ನೀಡುವುದಿಲ್ಲ; ಮೋದಿ!

By Suvarna NewsFirst Published Mar 21, 2021, 5:56 PM IST
Highlights

ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಭರಾಟೆ ಜೋರಾಗಿದೆ. ಪ್ರಧಾನಿ ಮೋದಿ ರ್ಯಾಲಿ ವಿರುದ್ಧದ ಕಾರ್ಟೂನ್ ಹಾಗೂ ಹಲವು ಚಿತ್ರಗಳನ್ನು ಹರಿಬಿಟ್ಟಿರುವ ಟಿಎಂಸಿಗೆ ಮೋದಿ ಟಾಂಗ್ ನೀಡಿದ್ದಾರೆ. ಬಂಗಾಳದ ಬಂಕುರದಲ್ಲಿ ಮೋದಿ ಮಾಡಿದ ಭಾಷಣ ಪ್ರಮುಖಾಂಶ ಇಲ್ಲಿದೆ

ಕೋಲ್ಕತಾ(ಮಾ.21): ಮಮತಾ ಬ್ಯಾನರ್ಜಿ ಬಯಸಿದರೆ, ನನ್ನ ತಲೆ ಮೇಲೆ ಕಾಲಿಟ್ಟು ಒದೆಯಬಹುದು. ಆದರೆ ಪಶ್ಚಿಂ ಬಂಗಾಳದ ಅಭಿವೃದ್ಧಿ, ಬಂಗಾಳ ಜನತೆಯ ಕನಸುಗಳನ್ನು ಒದಿಯಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಷ್ಟೇ ಅಲ್ಲ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಡೆಸಿದ ಭ್ರಷ್ಟಾಚಾರಾ, ಕಳಪೆ ಆಡಳಿತದ ವಿರುದ್ಧವೂ ಮೋದಿ ಹರಿಹಾಯ್ದಿದ್ದಾರೆ. 

 

Thank you Bankura for the affection. Watch my speech at the rally. https://t.co/ltblZ18srN

— Narendra Modi (@narendramodi)

ಮಮತಾ ಆಟಕ್ಕೆ ಅಂತಿಮ ದಿನಾಂಕ ಫಿಕ್ಸ್ ಮಾಡಿದ ಮೋದಿ

ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಬಂಕುರದಲ್ಲಿ ಆಯೋಜಿಸಿದ ರ್ಯಾಲಿಗೂ ಮುನ್ನ ಟಿಎಂಸಿ, ಮೋದಿಯ ತಲೆ ಮೇಲೆ ಮಮತಾ ಬ್ಯಾನರ್ಜಿ ಕಾಲಿಟ್ಟು ಒದೆಯುವ ಚಿತ್ರ ಹರಿಬಿಟ್ಟಿತ್ತು. ಇದೀಗ ಇದೇ ಟಿಎಂಸಿಯ ಕಳಪೆ ಆಡಳಿತ ವಿಚಾರ ಮುಂದಿಟ್ಟು ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

5 ಲಕ್ಷ ಉದ್ಯೋಗ, ಉಚಿತ ರೇಶನ್; ಬಂಗಾಳ ಚುನಾವಣೆಗೆ ಮಮತಾ ಪ್ರಣಾಳಿಕೆ

Moments before the Bankura rally. Humbled by the enthusiasm. pic.twitter.com/6A7pF0jaeG

— Narendra Modi (@narendramodi)

ಬಂಕುರದಲ್ಲಿ ಜನರ ಪ್ರೀತಿ ವಿಶ್ವಾಸವೇ ಇದಕ್ಷೆ ಸಾಕ್ಷಿ. ರ್ಯಾಲಿಗೆ ಜನಸಾಗರವೇ ಹರಿದು ಬಂದಿದೆ. ಬಂಗಾಳದ ಜನಗೆ ಟಿಎಂಸಿ ಆಡಳಿತಕ್ಕೆ ರೋಸಿ ಹೋಗಿದ್ದಾರೆ. ಹೀಗಾಗಿ ಬದಲಾವಣೆ ಬಯಸುತ್ತಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಮೋದಿ ಹೇಳಿದ್ದಾರೆ. ಕಳೆದ 10 ವರ್ಷದಲ್ಲಿ ಮಮತಾ ಹಲವು ಭರವಸೆ ನೀಡಿದ್ದಾರೆ. ಆದರೆ ಸಮರ್ಪಕ ಆಡಳಿತ ನೀಡಿಲ್ಲ ಎಂದು ಮೋದಿ ಹೇಳಿದ್ದಾರೆ.

ಪ್ರತಿ ಭಾರಿ ಚುನಾವಣೆಯಲ್ಲಿ EVM ಹ್ಯಾಕ್ ಮಾಡಲಾಗಿದೆ ಎಂದು ದೀದಿ ಆರೋಪಿಸಿದ್ದಾರೆ. ಇದೇ EVM ಮಮತಾ ಬ್ಯಾನರ್ಜಿಗೆ 10 ವರ್ಷ ಆಡಳಿತ ನೀಡಿದೆ. ಇದೀಗ ಮುಂಬರುವ ಚುನಾವಣೆಯಲ್ಲಿ ದೀದಿಗೆ ತಮ್ಮ ಸೋಲು ಅರಿವಾಗುತ್ತಿದೆ. ಇದೀಗ ಮತ್ತೆ ಇವಿಎಂ ಕತೆ ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

click me!