₹35 ಮರುಪಾವತಿಗಾಗಿ 5 ವರ್ಷ ಹೋರಾಡಿದ ಇಂಜಿನಿಯರ್: ಒಟ್ಟು ₹2.43 ಕೋಟಿ ವಾಪಸ್‌ ನೀಡಿದ IRCTC

Published : May 31, 2022, 04:12 PM ISTUpdated : May 31, 2022, 04:17 PM IST
₹35 ಮರುಪಾವತಿಗಾಗಿ 5 ವರ್ಷ ಹೋರಾಡಿದ ಇಂಜಿನಿಯರ್: ಒಟ್ಟು ₹2.43 ಕೋಟಿ ವಾಪಸ್‌ ನೀಡಿದ IRCTC

ಸಾರಾಂಶ

ಕೋಟಾದ ಇಂಜಿನಿಯರ್ ಒಬ್ಬರು ರೈಲ್ವೆಯಿಂದ (IRCTC) 35 ರೂಪಾಯಿಗಳನ್ನು ಮರುಪಾವತಿಸಲು ಐದು ವರ್ಷಗಳ ಕಾಲ ಹೋರಾಡಿದರು. ಇದಕ್ಕಾಗಿ ಅವರು ಸುಮಾರು 50 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದರು ಮತ್ತು ಅನೇಕ ಇಲಾಖೆಗಳಿಗೆ ಪತ್ರಗಳನ್ನು ಬರೆದರು. ಅವರ ಮರುಪಾವತಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.  ಐಆರ್‌ಸಿಟಿಸಿಯ ಸುಮಾರು ಮೂರು ಲಕ್ಷ ಬಳಕೆದಾರರು ಈ ಅಭಿಯಾನದಿಂದ ಪ್ರಯೋಜನ ಪಡೆದರು.

ನವದೆಹಲಿ (ಮೇ 31): ಕೋಟಾದ ವ್ಯಕ್ತಿಯೊಬ್ಬರು ರೈಲ್ವೇ ಇಖೆಯಿಂದ 35 ರೂ. ಮರುಪಾವತಿ ಪಡೆಯಲು ಐದು ವರ್ಷಗಳ ಕಾಲ ಹರಸಾಹಸ ಪಡಬೇಕಾಯಿತು. ಆದರೆ ಅವರ ಹೋರಾಟವು ಅಂತಿಮವಾಗಿ ಫಲ ನೀಡಿದ್ದು ಮತ್ತು  ಐಆರ್‌ಸಿಟಿಸಿಯ (IRCTC) ಸುಮಾರು ಮೂರು ಲಕ್ಷ ಬಳಕೆದಾರರೂ ಇದರ ಪ್ರಯೋಜನ ಪಡೆದಿದ್ದಾರೆ.  2.98 ಲಕ್ಷ ಬಳಕೆದಾರರಿಗೆ 2.43 ಕೋಟಿ ರೂಪಾಯಿ ಮರುಪಾವತಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ವೃತ್ತಿಯಲ್ಲಿ ಇಂಜಿನಿಯರ್ ಮತ್ತು ಆರ್‌ಟಿಐ (RTI) ಕಾರ್ಯಕರ್ತರಾಗಿರುವ ಸುಜಿತ್ ಸ್ವಾಮಿ ಸುಮಾರು 50 ಆರ್‌ಟಿಐಗಳನ್ನು ಸಲ್ಲಿಸಿದ್ದಾರೆ ಮತ್ತು 35 ರೂಪಾಯಿ ಮರುಪಾವತಿ ಮಾಡುವಂತೆ ಸರ್ಕಾರದ ನಾಲ್ಕು ಇಲಾಖೆಗಳಿಗೆ  ನಿರಂತರವಾಗಿ ಪತ್ರ ಬರೆದಿದ್ದಾರೆ.

ಸುಜಿತ್ ಏಪ್ರಿಲ್ 2017 ರಲ್ಲಿ ಗೋಲ್ಡನ್ ಟೆಂಪಲ್ ಮೇಲ್‌ (Golden Temple Mail) ರೈಲಿನಲ್ಲಿ ಕೋಟಾದಿಂದ ನವದೆಹಲಿಗೆ 765 ರೂ.ಗೆ ಟಿಕೆಟ್ ಬುಕ್ ಮಾಡಿದ್ದರು. ಆ ವರ್ಷದ ಜುಲೈ 2 ರಂದು ಪ್ರಯಾಣಕ್ಕಾಗಿ ಟಿಕೆಟ್ ಆಗಿತ್ತು. ಆದರೆ ವೇಟಿಂಗ್‌ ಲಿಸ್ಟ್‌ ಇದ್ದ ಕಾರಣ ಅವರಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ.

ಟಿಕೆಟ್ ರದ್ದುಪಡಿಸಿದಾಗ, ಅವರು 665 ರೂ. ರಿಫಂಡ್‌ ಸಿಕ್ಕಿತ್ತು. ಸೇವಾ ತೆರಿಗೆಯಾಗಿ (Tax) ರೈಲ್ವೆ 65 ರೂಪಾಯಿ ಕಡಿತಗೊಳಿಸಬೇಕಿತ್ತು ಆದರೆ ಕಂಪನಿ 100 ರೂಪಾಯಿ ಕಡಿತಗೊಳಿಸಿದೆ ಎಂದು ಸುಜಿತ್ ಆರೋಪಿಸಿದ್ದರು. 

35ರ ಬದಲಾಗಿ 33 ರೂ.ಗಳನ್ನು ಪಡೆದ ಸುಜಿತ್:‌ ಸುಜಿತ್ ಜುಲೈ 2017 ರಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಅರ್ಜಿ ಸಲ್ಲಿಸುವ ಮೂಲಕ ಮಾಹಿತಿ ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು. ಸುಮಾರು 2 ಲಕ್ಷದ 98 ಸಾವಿರ ಬಳಕೆದಾರರಿಂದ ಸೇವಾ ತೆರಿಗೆ ಎಂದು ಪ್ರತಿ ಪ್ರಯಾಣಿಕರಿಂದ 35 ರೂ. ಪಡೆಯಲಾಗಿತ್ತು.  

ಸುಜಿತ್ ರೈಲ್ವೇ (Railway) ಸಚಿವ ಹಾಗೂ ಪ್ರಧಾನಿಗೆ ಪತ್ರ ಬರೆದು ಎಲ್ಲ ಪ್ರಯಾಣಿಕರ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಅಂತಿಮವಾಗಿ, ಮೇ 2019 ರಲ್ಲಿ, ಐಆರ್‌ಸಿಟಿಸಿಯು ಸುಜಿತ್ ಅವರ ಬ್ಯಾಂಕ್ ಖಾತೆಗೆ 33 ರೂ. ಜಮೆ ಮಾಡಿತ್ತು. 

ಇದನ್ನೂ ಓದಿ: ಬೇಗ ಬಂದ ರೈಲು: ಪ್ಲಾಟ್‌ಫಾರ್ಮ್‌ನಲ್ಲೇ ಪ್ರಯಾಣಿಕರ ಡಾನ್ಸ್‌ ವಿಡಿಯೋ ವೈರಲ್

ಆದರೆ ಇದರಿಂದ ಸುಜಿತ್‌ಗೆ ತೃಪ್ತಿಯಾಗಿರಲಿಲ್ಲ. ಐಆರ್‌ಸಿಟಿಸಿ ಸೇವಾ ತೆರಿಗೆಯಾಗಿ 35 ರೂಪಾಯಿ ಕಡಿತಗೊಳಿಸಿದೆ ಎಂದು ಅವರು ಆರೋಪಿಸಿದ್ದರು. ಆದರೆ ಕಂಪನಿಯು 35 ರೂ. ಬದಲಿಗೆ 33 ರೂ. ನೀಡಿತ್ತು. ಸುಜಿತ್ 2 ರುಪಾಯಿ ವಾಪಸ್ ಕೊಡಿಸುವಂತೆ ಮತ್ತೆ ಹೋರಾಟ ಆರಂಭಿಸಿದರು.

ಜುಲೈ 2019 ರಲ್ಲಿ, ಅವರು ಮತ್ತೊಮ್ಮೆ ಆರ್‌ಟಿಐ ಸಲ್ಲಿಸಿದರು ಮತ್ತು ಸುಜಿತ್ ಪ್ರತಿ ಎರಡು ತಿಂಗಳಿಗೊಮ್ಮೆ ಆರ್‌ಟಿಐ ಮೂಲಕ ಮರುಪಾವತಿಯ ಸ್ಥಿತಿಯನ್ನು ಕೇಳುತ್ತಿದ್ದರು.

ಪಿಎಂ ಕೇರ್ ಫಂಡ್‌ಗೆ ಹಣ ವರ್ಗಾವಣೆ: ಅಂತಿಮವಾಗಿ ಮೇ 27 ರಂದು ಸುಜಿತ್‌ಗೆ ಐಆರ್‌ಸಿಟಿಸಿಯ ಅಧಿಕಾರಿಯಿಂದ ಕರೆ ಬಂದಿತು. ಎಲ್ಲಾ ಬಳಕೆದಾರರ ಮರುಪಾವತಿಯನ್ನು ರೈಲ್ವೆ ಮಂಡಳಿ ಅನುಮೋದಿಸಿದೆ ಎಂದು ಅವರು ಹೇಳಿದರು. ಮೇ 30 ರಂದು ಸುಜಿತ್ ಖಾತೆಗೆ 2 ರೂಪಾಯಿ ಮರುಪಾವತಿ ಬಂದಿದೆ. ಇದರ ನಂತರ, ಐದು ವರ್ಷಗಳ ಹೋರಾಟ ಪೂರ್ಣಗೊಂಡ ನಂತರ, ಸುಜಿತ್ ಧನ್ಯವಾದ ತಿಳಿಸಿಲು 535 ರೂಗಳನ್ನು ಪಿಎಂ ಕೇರ್ ಫಂಡ್‌ಗೆ (PM Cares Fund) ವರ್ಗಾಯಿಸಿದ್ದಾರೆ. 

ಇದನ್ನೂ ಓದಿ: 40 ಗಂಟೆಗಳ ಕಾಲ ನೂರಾರು ರೈಲುಗಳು ರದ್ದು: ಇದಕ್ಕೆಲ್ಲಾ ಕಾರಣ ರಸಗುಲ್ಲಾ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ