Breaking: ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ, ಆ. 17ಕ್ಕೆ ದೇಶಾದ್ಯಂತ ಒಪಿಡಿ ಸೇವೆ ಬಂದ್‌!

By Santosh Naik  |  First Published Aug 15, 2024, 10:52 PM IST

ಕೋಲ್ಕತ್ತಾದ ವೈದ್ಯಕೀಯ ಕಾಲೇಜಿಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಕೇಸ್‌ನ ವಿಚಾರವಾಗಿ ಭಾರತೀಯ ಮೆಡಿಕಲ್‌ ಅಸೋಸಿಯೇಷನ್‌ ಬಂದ್‌ಗೆ ಕರೆ ಕೊಟ್ಟಿದೆ. ಶನಿವಾರ ದೇಶಾದ್ಯಂತ ಯಾವುದೇ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರೋದಿಲ್ಲ ಎಂದು ತಿಳಿಸಿದೆ.


ನವದೆಹಲಿ (ಆ.15): ಸ್ವಾತಂತ್ರೋತ್ಸವ ದಿನದಂದು ಭಾರತೀಯ ಮೆಡಿಕಲ್‌ ಅಸೋಸಿಯೇಷನ್‌ ಪ್ರಮುಖ ನಿರ್ಧಾರ ಪ್ರಕಟಿಸಿದೆ. ಕೋಲ್ಕತ್ತಾದ ವೈದ್ಯಕೀಯ ಕಾಲೇಜಿಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಕೇಸ್‌ನ ವಿಚಾರವಾಗಿ ಭಾರತೀಯ ಮೆಡಿಕಲ್‌ ಅಸೋಸಿಯೇಷನ್‌ ಬಂದ್‌ಗೆ ಕರೆ ಕೊಟ್ಟಿದೆ. ಶನಿವಾರ ದೇಶಾದ್ಯಂತ ಯಾವುದೇ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರೋದಿಲ್ಲ ಎಂದು ತಿಳಿಸಿದೆ. ದೇಶಾದ್ಯಂತ ಶನಿವಾರ ಬೆಳಗ್ಗೆ 6 ರಿಂದ ಸಂಜೆ 6 ತನಕ ಒಪಿಡಿ ಬಂದ್ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಭಾರತೀಯ ವೈದ್ಯಕೀಯ ಸಂಘವು 24 ಗಂಟೆಗಳ ಕಾಲ (17 ಆಗಸ್ಟ್ 6:00 AM ರಿಂದ ಆರಂಭಗೊಂಡು) ಮಾಡರ್ನ್ ಮೆಡಿಸಿನ್ ಅನ್ನು ಅಭ್ಯಾಸ ಮಾಡುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳ ಕೇವಲ ನಾನ್-ಅಗತ್ಯ ಸೇವೆಗಳನ್ನು (OPD) ರಾಷ್ಟ್ರವ್ಯಾಪಿ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕ್ರೂರ ಅತ್ಯಾಚಾರ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ ನಂತರ, ಭಾರತೀಯ ವೈದ್ಯಕೀಯ ಸಂಘವು ಶನಿವಾರ ಅಂದರೆ ಆಗಸ್ಟ್‌ 17 ರಂದು ಬೆಳಿಗ್ಗೆ 6 ಗಂಟೆಯಿಂದ ದೇಶಾದ್ಯಂತ ಆಧುನಿಕ ವೈದ್ಯಕೀಯ ವೈದ್ಯರ ಸೇವೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಆಗಸ್ಟ್ 18 ರ ಭಾನುವಾರ ಬೆಳಿಗ್ಗೆ 6ರವರೆಗೆ 24 ಗಂಟೆಗಳ ಕಾಲ ಯಾವ ಒಪಿಡಿ ಸೇವೆ ಕೂಡ ಇರೋದಿಲ್ಲ. ಎಲ್ಲಾ ಅಗತ್ಯ ಸೇವೆಗಳನ್ನು ನಿರ್ವಹಿಸಲಾಗುವುದು. ಗಾಯಾಳುಗಳನ್ನು ನಿರ್ವಹಣೆ ಆಗಲಿದೆ.  ಆದರೆ, ಒಪಿಡಿಗಳು ಕಾರ್ಯನಿರ್ವಹಿಸುವುದಿಲ್ಲ ಮತ್ತು ಶೆಡ್ಯುಲ್‌ ಆಗಿರುವ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ. ವೈದ್ಯರು ಸೇವೆಯನ್ನು ಒದಗಿಸುವ ಎಲ್ಲ ವಲಯಗಳಲ್ಲಿಈ ನಿರ್ಧಾರ ಮಾಡಲಾಲಿದೆ. ಐಎಂಎ ತನ್ನ ವೈದ್ಯರ ನ್ಯಾಯಯುತ ಕಾರಣದೊಂದಿಗೆ ರಾಷ್ಟ್ರದ ಸಹಾನುಭೂತಿಯ ಅಗತ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Tap to resize

Latest Videos

ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಕೇಸ್‌ ಬೆನ್ನಲ್ಲಿಯೇ ದನಿ ಎತ್ತಿದ ನಮ್ರತಾ ಗೌಡ!

ಕೋಲ್ಕತ್ತಾದ ಆರ್‌ಜಿ ಖರ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿಯೇ ಆಸ್ಪತ್ರೆಯ ಗುತ್ತಿಗೆ ನೌಕರನೊಬ್ಬ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಎಸೆಗಿದ್ದಾನೆ. ಇದನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಸ್ವತಃ ಸರ್ಕಾರವೇ ನಿಂತಿದ್ದು, ಬೆಚ್ಚಿಬೀಳಿಸುವ ಪೋಸ್ಟ್‌ ಮಾರ್ಟಮ್‌ ವರದಿ ಬಂದಿದೆ. ಟ್ರೈನಿ ವೈದ್ಯೆಯ ಮೇಲೆ ಒಬ್ಬನೇ ಅತ್ಯಾಚಾರ ಎಸಗಿರುವ ಸಾಧ್ಯತೆ ಕಡಿಮೆ. ಆಕೆಯ ಮೇಲೆ ಗ್ಯಾಂಗ್‌ರೇಪ್‌ ಆಗಿರಬಹುದು ಎನ್ನಲಾಗಿದೆ. ಅದಕ್ಕೆ ಕಾರಣ ಪರೀಕ್ಷೆಯ ವೇಳೆ ಆಕೆಯ ದೇಹದಲ್ಲಿ 150 ಮಿಲಿಗ್ರಾಂ ವೀರ್ಯ ಸಿಕ್ಕಿದೆ. ಒಬ್ಬ ಪುರುಷನಿಂದ ಒಂದು ದಿನಕ್ಕೆ ಅಷ್ಟು ಪ್ರಮಾಣದ ವೀರ್ಯ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದು ವೈದ್ಯರ ಮಾತು. ಇದರ ಬೆನ್ನಲ್ಲಿಯೇ ಕೋಲ್ಕತ್ತಾ ಹೈಕೋರ್ಟ್‌, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿ ಇಡೀ ಕೇಸ್‌ಅನ್ನು ಸಿಬಿಐ ತನಿಖೆಗೆ ವಹಿಸಿದೆ.

ವೈದ್ಯೆಯ ಹತ್ಯೆ ಖಂಡಿಸಿ ಪ್ರತಿಭಟಿಸ್ತಿದ್ದ ಮಹಿಳೆಯರ ಬಗ್ಗೆ ಟಿಎಂಸಿ ಸಚಿವನ ಅವಹೇಳನಕಾರಿ ಮಾತು

Press Release - 2, Dated 15.08.2024 pic.twitter.com/LcWQtRmK9x

— Indian Medical Association (@IMAIndiaOrg)
click me!