ಕೌಟುಂಬಿಕ ಕಲಹ: ಅತ್ತೆಯ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ ಸೊಸೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕೌಟುಂಬಿಕ ಕಲಹವೊಂದು ವಿಕೋಪಕ್ಕೆ ಹೋಗಿ ಅತ್ತೆಯ ಮೇಲೆ ಸೊಸೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.

Family feud: Daughter-in-law grabs mother-in-law's hair

ಭೋಪಾಲ್: ಕೌಟುಂಬಿಕ ಕಲಹವೊಂದು ವಿಕೋಪಕ್ಕೆ ಹೋಗಿ ಅತ್ತೆಯ ಮೇಲೆ ಸೊಸೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ. ಸೊಸೆಯ ಮನೆಯವರಿಂದ ಮಗನನ್ನು ರಕ್ಷಿಸಲು ಬಂದ ವೃದ್ಧ ಅತ್ತೆಯನ್ನು ಸೊಸೆ ಕೂದಲಿನಲ್ಲಿ ಹಿಡಿದು ಎಳೆದಾಡಿ ಹಲ್ಲೆ ಮಾಡಿರುವುದು ವೀಡಿಯೋದಲ್ಲಿ ವೈರಲ್ ಆಗಿದೆ. 

ಹೆಂಡತಿ ಮನೆಯವರಿಂದ ಹಲ್ಲೆಗೊಳಗಾದ ವಿಶಾಲ್ ಬಾತ್ರಾ ಹಾಗೂ ಅವರ ತಾಯಿ 70 ವರ್ಷದ ಸರಳಾ ಬಾತ್ರಾ, ಅವರು ಸಣ್ಣ ವಿಷಯವೊಂದಕ್ಕೆ ಸೊಸೆಯ ಮನೆಯವರು ಮನೆಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು  ಪೊಲೀಸರಿಗೆ ದೂರು ನೀಡಿದ್ದಾರೆ. ವಿಶಾಲ್‌ ಬಾತ್ರಾ ಕಾರು ಬಿಡಿಭಾಗಗಳ ಅಂಗಡಿ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶಾಲ್ ಬಾತ್ರಾ ತಮ್ಮ ಪತ್ನಿ ತಮ್ಮ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ನಾನು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ. 

Latest Videos

ಏಪ್ರಿಲ್ 1 ರಂದು ಮಧ್ಯಾಹ್ನ ತಮ್ಮ ಸೊಸೆ ತಮ್ಮ ತಂದೆ ಸುರೇಂದ್ರ ಕೊಹ್ಲಿಗೆ ಕರೆ ಮಾಡಿದ್ದಾರೆ. ನಂತರ ಅವರು ತಮ್ಮ ಮಗ ನಾನಕ್ ಕೊಹ್ಲಿ ಮತ್ತು ಇತರ ಕೆಲವು ಪುರುಷರೊಂದಿಗೆ ಆದರ್ಶ ಕಾಲೋನಿಯಲ್ಲಿರುವ ಮನೆಗೆ ಬಂದಿದ್ದಾರೆ. ಈ ವೇಳೆ ವಿಶಾಲ್ ಬಾತ್ರಾ ಅವರು ಮನೆಯೊಳಗೆ ಇರುವುದನ್ನು ನೋಡಿ  ಮನೆಯೊಳಗೆ ನುಗ್ಗಿದ ಕೂಡಲೇ  ಅವರಿಗೆ ಅವರ ಮಾವ ಕಪಾಳಮೋಕ್ಷ ಮಾಡಿದ್ದಾರೆ. ಅವರು ಪ್ರತಿದಾಳಿ ಮಾಡಲು ಪ್ರಯತ್ನಿಸಿದ್ದಾಗ ಮಾವನ ಜೊತೆ ಇದ್ದ ಇತರರು ವಿಶಾಲ್ ಬಾತ್ರಾಗೆ ಹೊಡೆಯಲು ಆರಂಭಿಸಿದ್ದಾರೆ. ಈ ವೇಳೆ ಮಹಡಿ ಮೇಲಿನಿಂದ ಕೆಳಗಿಳಿದು ಬಂದ ಸೊಸೆ ನೀಲಿಕಾ ಅಲ್ಲೇ ಇದ್ದ ಅತ್ತೆಯ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಬೀಳಿಸಿ ಅವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಕೂದಲು ಹಿಡಿದು ಎಳೆದಾಡಿದ್ದಲ್ಲದೇ ಅವರು ಮೇಲೇಳಲು ಪ್ರಯತ್ನಿಸುವಾಗಲೆಲ್ಲಾ ಹಲ್ಲೆ ಮಾಡಿದ್ದಾಳೆ. ಇದೇ ವೇಳೆ ಅಲ್ಲಿ ದಂಪತಿಯ ಅಪ್ರಾಪ್ತ ಮಗನೂ ಅಲ್ಲಿರುವುದನ್ನು ಕಾಣಬಹುದಾಗಿದೆ. 

ಹೆಂಡತಿ ಜೊತೆ ಕಿತ್ತಾಟ: ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದ ಪಾಪಿ ತಂದೆ

ಮತ್ತೊಂದು ವೀಡಿಯೋದಲ್ಲಿ ವಿಶಾಲ್ ಬಾತ್ರಾ ಮೇಲೆ ಬೀದಿಗೆ ಎಳೆದು ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ. ಇತ್ತ ಸರಳಾ ಬಾತ್ರಾ ಅವರಿಗೆ ಹಲ್ಲೆಯಿಂದ ಕಣ್ಣು ಊದಿಕೊಂಡಿದೆ. ತನ್ನ ಮಗನ ಅತ್ತೆ ಮನೆಯವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ನಂತರ ನೆರೆಮನೆಯವರು ಸ್ಥಳಕ್ಕೆ ಬಂದು ಜಗಳ ಬಿಡಿಸಿದ್ದು, ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನನಗೆ ತುಂಬಾ ಕಿರುಕುಳ ನೀಡಲಾಗುತ್ತಿದೆ. ನನಗೆ ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಅವರು ಗೂಂಡಾಗಳನ್ನು ಕರೆಸಿದರು ಮತ್ತು ಅವಳ ತಂದೆ ಮತ್ತು ಸಹೋದರ ನಮ್ಮನ್ನು ಥಳಿಸಿದರು. ಯಾರಾದರೂ ಮಹಿಳೆಯನ್ನು ಹೇಗೆ ಹೊಡೆಯಲು ಸಾಧ್ಯ? ಈಗ ಅವರು ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಾವು ಭಯಭೀತರಾಗಿದ್ದೇವೆ ಮತ್ತು ಮನೆಯಿಂದ ದೂರ ಉಳಿದಿದ್ದೇವೆ ಎಂದು ಹಲ್ಲೆಗೊಳಗಾದ ಸರಳಾ ಬಾತ್ರಾ ಹೇಳಿದ್ದಾರೆ. 

ತನ್ನ ಭಾವ ತನ್ನನ್ನು ಮತ್ತು ತನ್ನ ತಾಯಿಯನ್ನು ಕೊಲ್ಲುವುದಾಗಿ  ಪೊಲೀಸ್ ಠಾಣೆಯಲ್ಲಿ  ಬೆದರಿಕೆ ಹಾಕಿದ್ದಾನೆ ಅಲ್ಲದೇ ಅತ್ತೆ ಮಾವನವರು ನಮ್ಮ ಮನೆಯಲ್ಲಿ ಈಗ ವಾಸ ಮಾಡಲು ಶುರು ಮಾಡಿದ್ದಾರೆ. ಇದು ಕೋಟ್ಯಂತರ ರೂ ಮೌಲ್ಯದ್ದಾಗಿದೆ. ಮತ್ತು ಆ ಮನೆಗೆ ಈಗ ಬೀಗ ಹಾಕಿದ್ದಾರೆ. ಇದರಿಂದಾಗಿ ನಾವು ಹೊರಗಡೆ ವಾಸ ಮಾಡುವಂತಾಗಿದೆ. ತಮ್ಮ ಪತ್ನಿ, ತಮ್ಮ ಮತ್ತು ತಮ್ಮ ತಾಯಿಯ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿಶಾಲ್ ಬಾತ್ರಾ ಆರೋಪಿಸಿದ್ದಾರೆ.

ಕಾಶ್ಮೀರಿ ಹುಡುಗಿಗಾಗಿ ಪತ್ನಿ ಕಥೆ ಮುಗಿಸಿದ ಗಂಡ!

ಮೀರತ್ ಘಟನೆಯಂತೆ, ನನ್ನ ಹೆಂಡತಿ ನನ್ನನ್ನು ಮತ್ತು ನನ್ನ ವೃದ್ಧ ತಾಯಿಯನ್ನು ಕೊಲ್ಲಬಹುದೆಂದು ಎಂಬ ಭಯ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಮೀರತ್‌ನಲ್ಲಿ ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರೇಮಿ ಇಬ್ಬರೂ ಸೇರಿ ಗಂಡನ ಹತ್ಯೆ ಮಾಡಿ ದೇಹವನ್ನು ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದರು.  ಘಟನೆ ಬಗ್ಗೆ ಪತ್ನಿ ನೀಲಿಕಾ ಮತ್ತು ಆಕೆಯ ತಂದೆ ಇವರೆಗೆ ಪ್ರತಿಕ್ರಿಯೆ ನೀಡಿಲ್ಲ, ಘಟನೆಯ ಬಗ್ಗೆ ಪೊಲೀಸರು ಆರಂಭದಲ್ಲಿ ಸಹಾಯ ಮಾಡಲು ಹಿಂಜರಿದರು ಆದರೆ ನಂತರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಬಾತ್ರಾ ಹೇಳಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಭೇಟಿ ಮಾಡಿದ ನಂತರ ಅವರು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಶಾಲ್ ಹೇಳಿದ್ದಾರೆ. 
 

MP: In Gwalior, the daughter-in-law, angry at not sending her mother-in-law to an old age home, beat her up. She even called members from her parents' house and got her husband beaten up too. pic.twitter.com/T99Kj07JIc

— Megh Updates 🚨™ (@MeghUpdates)

 

 

vuukle one pixel image
click me!