ಜೀವಂತ ಹಾವನ್ನೇ ನುಂಗಿದ ಮತ್ತೊಂದು ಹಾವು: ವಿಡಿಯೋ ವೈರಲ್‌

Published : Mar 30, 2022, 02:57 PM ISTUpdated : Apr 01, 2022, 12:39 PM IST
ಜೀವಂತ ಹಾವನ್ನೇ ನುಂಗಿದ ಮತ್ತೊಂದು ಹಾವು: ವಿಡಿಯೋ ವೈರಲ್‌

ಸಾರಾಂಶ

ಹಾವನ್ನೇ ನುಂಗಿದ ಮತ್ತೊಂದು ಹಾವು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಜೀವಂತ ಹಾವೊಂದನ್ನು ಮತ್ತೊಂದು ಹಾವು ನುಂಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral) ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. ಹಾವುಗಳು ಅವಕಾಶವಾದಿ ಪರಭಕ್ಷಕಗಳಾಗಿವೆ (opportunistic predators) ಮತ್ತು ತಮ್ಮ ಯಾವುದೇ ಬೇಟೆಯನ್ನು ಬೇಟೆಯಾಡುತ್ತವೆ. ಹೆಚ್ಚಿನ ಹಾವುಗಳು ದಂಶಕಗಳು ಅಥವಾ ಪಕ್ಷಿಗಳಂತಹ ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ ಅಥವಾ ಅವುಗಳನ್ನು ತಮ್ಮ ವಿಷಕಾರಿ ವಿಷದಿಂದ ಕೊಲ್ಲುತ್ತವೆ, ದೊಡ್ಡ ಹಾವುಗಳು ಸಾಮಾನ್ಯವಾಗಿ ಜಿಂಕೆಗಳು, ಹಂದಿಗಳು, ಕೋತಿಗಳು ಮತ್ತು ಇತರ ದೊಡ್ಡ ಬೇಟೆಯನ್ನು ತಿನ್ನುತ್ತವೆ. ಆದರೆ  ರಾಜಸರ್ಪ(kingsnake) ಎಂದು ಕರೆಯಲ್ಪಡುವ ಹಾವು ರಾಟಲ್‌ಸ್ನೇಕ್‌ನಂತಹ (rattlesnake) ವಿಷಕಾರಿ ಹಾವುಗಳು ಸೇರಿದಂತೆ ಇತರ ಹಾವುಗಳನ್ನು ತಿನ್ನುತ್ತದೆ. 

ವಿಡಿಯೋದಲ್ಲಿ ಕಾಣಿಸುವಂತೆ ಬೆಳೆ ಕಟಾವು ಮಾಡಿರುವ ಗದ್ದೆಯೊಂದರಲ್ಲಿರು ಸಣ್ಣ ಮಾಟೆಗೆ ತಲೆ ಹಾಕುವ ಹಾವು ಮತ್ತೊಂದು ಹಾವನ್ನು ಹೊರ ತೆಗೆದು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನುಂಗಲ್ಪಟ್ಟ ಹಾವಿನ ಇನರ್ಧ ದೇಹ ಆ ಹೊಂಡದಲ್ಲಿ ತಿರುಚುತ್ತಿರುವುದನ್ನು ನೋಡಬಹುದು, ಏಕೆಂದರೆ ದೊಡ್ಡ ಹಾವು ಅದನ್ನು ಜೀವಂತವಾಗಿ ತಿನ್ನುತ್ತಿದೆ. ದೊಡ್ಡ ಹಾವು ತನ್ನ ಬಾಯಿಯನ್ನು ಅಗಲವಾಗಿ ತೆರೆದು ಹಾವನ್ನು ನುಂಗುವುದನ್ನು ನೋಡಬಹುದು. ಕೊನೆಯಲ್ಲಿ, ಹಾವಿನ ಬಾಲವು ಮತ್ತೊಂದು ಹಾವಿನ ಬಾಯಿಯೊಳಗೆ ಹೋಗುವುದನ್ನು ನೋಡಬಹುದು. ಹಾವು ತನ್ನದೇ ಪ್ರಬೇಧಕ್ಕೆ ಸೇರಿದ ಮತ್ತೊಂದು ಹಾವನ್ನು ಕಬಳಿಸಿದ್ದು ಸೆರೆಯಾಗಿರುವ ಈ ವಿಡಿಯೋಗೆ ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದಾರೆ.

 

ಹಾವು (Snake) ಹೆಸರು ಕೇಳ್ತಿದ್ದಂತೆ ಅನೇಕರು ಬೆಚ್ಚಿ ಬೀಳ್ತಾರೆ. ಕನಸಿ (Dream)ನಲ್ಲಿ ಹಾವು ಕಂಡ್ರು ಭಯ (Fear)ವಾಗುತ್ತದೆ. ಭಾರತದಲ್ಲಿ ನಾನಾ ಬಗೆಯ ಹಾವುಗಳಿವೆ. ಹಾವು ಕಡಿತದಿಂದ ಹೆಚ್ಚು ಜನರು ಸಾಯುವ ವಿಶ್ವದ ಏಕೈಕ ದೇಶ ಭಾರತ ಅಂದ್ರೆ ನೀವು ನಂಬ್ಲೇಬೇಕು. ವಿಶ್ವಾದ್ಯಂತ ಪ್ರತಿ ವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಜನರಲ್ಲಿ ಅರ್ಧದಷ್ಟು ಸಾವು ಭಾರತ (India)ದಲ್ಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2000 ರಿಂದ 2019 ರವರೆಗೆ ಹಾವು ಕಡಿತದಿಂದಾಗಿರುವ ಸಾವಿನ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. 2000 ರಿಂದ 2019 ರವರೆಗೆ ಭಾರತದಲ್ಲಿ ಹಾವು ಕಡಿತದಿಂದ 1.2 ಮಿಲಿಯನ್ (ವರ್ಷಕ್ಕೆ ಸರಾಸರಿ 58,000) ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಾವನ್ನಪ್ಪಿದ ಸುಮಾರು ಅರ್ಧದಷ್ಟು ಜನರು 30-69 ವರ್ಷದವರು. ಕಾಲು ಭಾಗಕ್ಕಿಂತ ಹೆಚ್ಚು ಜನರು 15 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್..!

ಇನ್ನು ವರದಿಯಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸಿದೆ ಎಂಬುದನ್ನೂ ಹೇಳಲಾಗಿದೆ. ವರದಿ ಪ್ರಕಾರ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಹಾವಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ 2030 ರ ವೇಳೆಗೆ ಹಾವು ಕಡಿತದ ಸಾವಿನ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ಹಾವು ಕಡಿದ್ರೂ ಅನೇಕರ ಪ್ರಾಣವನ್ನು ಉಳಿಸಬಹುದು. ಆದ್ರೆ ಅನೇಕರು ಹಾವು ಕಾಣುತ್ತಿದ್ದಂತೆ ಅರೆಜೀವವಾಗಿರ್ತಾರೆ. ಹಾವು ಕಡಿಯುತ್ತಿದ್ದಂತೆ ಹೃದಯಾಘಾತಕ್ಕೊಳಗಾಗ್ತಾರೆ. ಹಾವು ಕಚ್ಚಿದ ತಕ್ಷಣ ಚಿಕಿತ್ಸೆ ಸಿಕ್ಕಿದಲ್ಲಿ ಬದುಕುವ ಛಾನ್ಸ್ ಹೆಚ್ಚಿರುತ್ತದೆ. ಹಾವು ಕಚ್ಚಿದ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕೆಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ಸೂಚನೆ ನೀಡುತ್ತದೆ.

ಚಾರಣ ಹೊರಟವರಿಗೆ ಶಾಕ್‌ ನೀಡಿದ ಸ್ನೇಕ್‌

 ಹಾವಿನಿಂದ ಕಚ್ಚಿಸಿಕೊಂಡವರಿಗೆ ಆಂಟಿವೆನೊಮ್ ಔಷಧಿಯನ್ನು ನೀಡಬೇಕು. ಇದು ಹಾವಿನ ವಿಷ ಹರಡದಂತೆ ನೋಡಿಕೊಳ್ಳುತ್ತದೆ. ರಕ್ತ, ಅಂಗಾಂಶ ಅಥವಾ ನರಮಂಡಲಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಸಾಕಷ್ಟು ದೂರದಿಂದ ಹಾವಿನ ಫೋಟೋವನ್ನು ತೆಗೆಯಬೇಕು. ವೈದ್ಯರಿಗೆ ಯಾವ ಹಾವು ಕಚ್ಚಿದೆ ಎಂಬುದು ಗೊತ್ತಾದ್ರೆ ಔಷಧಿ ನೀಡುವುದು ಸುಲಭವಾಗುತ್ತದೆ. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಿಇಒ ವಜಾಕ್ಕೆ ಕೇಂದ್ರ ಸೂಚನೆ ಸಾಧ್ಯತೆ
ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ