ಹೈಡ್ರೋಜನ್ ಕಾರಲ್ಲಿ ಸಂಸತ್ತಿಗೆ ಬಂದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ!

By Suvarna News  |  First Published Mar 30, 2022, 1:53 PM IST

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ತಿಗೆ ತೆರಳಿದ್ದು ಇದನ್ನು "ಭಾರತದ ಭವಿಷ್ಯ" ಎಂದು ಶ್ಲಾಘಿಸಿದರು.
 


ನವದೆಹಲಿ (ಮಾ. 30): ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಬುಧವಾರ ಹಸಿರು ಹೈಡ್ರೋಜನ್ ಚಾಲಿತ ಕಾರಿನಲ್ಲಿ (Green Hydrogen Powered Car) ಸಂಸತ್ತಿಗೆ ಆಗಮಿಸಿದರು. ಈ ಕಾರಿನಲ್ಲಿ ಸಚಿವರು ತಮ್ಮ ನಿವಾಸದಿಂದ ಸಂಸತ್ತಿಗೆ ಪ್ರಯಾಣಿಸಿದರು. ಇದು ಭಾರತದಲ್ಲಿ ಮೊದಲನೆಯದು, ಮತ್ತು ಗಡ್ಕರಿ ಇದು ಭಾರತದ ಭವಿಷ್ಯ ಎಂದು ಶ್ಲಾಘಿಸಿದರು. "ಹೈಡ್ರೋಜನ್ ಕಾರ್ ಭಾರತದ ಭವಿಷ್ಯ, ಪ್ರಧಾನಿ ಮೋದಿಯವರು ಇದನ್ನು ಪ್ರಸ್ತಾಪಿಸಿದ್ದಾರೆ ಮತ್ತು ಇದು ಸ್ವಾವಲಂಬಿ ಭಾರತವಾಗಲು  ಒಂದು ದೊಡ್ಡ ಹೆಜ್ಜೆಯಾಗಿದೆ. ಪೆಟ್ರೋಲ್ ಡೀಸೆಲ್ ಮಾಲಿನ್ಯವನ್ನು ಉಂಟುಮಾಡುತ್ತದೆ, ಆದರೆ ಹೈಡ್ರೋಫ್ಯುಯಲ್ ಸೆಲ್ ಕಾರುಗಳು ಮಾಲಿನ್ಯವನ್ನು ಉಂಟುಮಾಡುವುದಿಲ್ಲ" ಎಂದು ಗಡ್ಕರಿ ಹೇಳಿದರು. 

ಇದಲ್ಲದೆ, "ಹೈಡ್ರೋಜನ್ ಮೂರು ವಿಧಗಳಿವೆ. ಇದು ಹಸಿರು ಹೈಡ್ರೋಜನ್ ಮತ್ತು ಅದರ ಬೆಲೆ ಕಿಲೋಮೀಟರ್ಗೆ 1.5 ರೂ. ಆಗಿರುತ್ತದೆ. ಅದರ ಜಪಾನೀಸ್ ಹೆಸರು ಮಿರೈ" ಎಂದು ಗಡ್ಕರಿ ವಿವರಿಸಿದರು.

Tap to resize

Latest Videos

ಇದನ್ನೂ ಓದಿಪ್ರವಾಹ ಬಂದರೂ ಮುಳುಗದ ರೀತಿ ರಸ್ತೆ: ಬೆಂಗಳೂರು- ಪುಣೆ ನಡುವೆ ಹೊಸ ಹೆದ್ದಾರಿ!

ಗ್ರೀನ್ ಹೈಡ್ರೋಜನ್’ ಚಾಲಿತ ಕಾರನ್ನು ಪ್ರದರ್ಶಿಸಿದ ಸಚಿವ ಗಡ್ಕರಿ ಹೈಡ್ರೋಜನ್, ಎಫ್‌ಸಿಇವಿ ತಂತ್ರಜ್ಞಾನ ಮತ್ತು ಭಾರತಕ್ಕೆ ಹೈಡ್ರೋಜನ್ ಆಧಾರಿತ ಸಮಾಜವನ್ನು ಬೆಂಬಲಿಸಲು ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಗ್ರೀನ್ ಹೈಡ್ರೋಜನನ್ನು ಭಾರತದಲ್ಲಿ ಉತ್ಪಾದಿಸಲಾಗುವುದು ಎಂದು ಗಡ್ಕರಿ ಭರವಸೆ ನೀಡಿದರು. ಅಲ್ಲದೇ ದೇಶದಲ್ಲಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗ್ರೀನ್ ಹೈಡ್ರೋಜನ್ ಇಂಧನ ತುಂಬುವ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಭಾರತವು ಶೀಘ್ರದಲ್ಲೇ ಹಸಿರು ಹೈಡ್ರೋಜನ್ ರಫ್ತು ಮಾಡುವ ದೇಶವಾಗಲಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಸ್ವಚ್ಛ ಮತ್ತು ಅತ್ಯಾಧುನಿಕ ಚಲನಶೀಲತೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ದೃಷ್ಟಿಗೆ ಅನುಗುಣವಾಗಿ, ನಮ್ಮ ಸರ್ಕಾರವು ‘ರಾಷ್ಟ್ರೀಯ ಹೈಡ್ರೋಜನ್ ಮಿಷನ್’ (National Hydrogen Mission) ಮೂಲಕ ಹಸಿರು ಮತ್ತು ಶುದ್ಧ ಇಂಧನದ ಮೇಲೆ ಕೇಂದ್ರೀಕರಿಸಲು ಬದ್ಧವಾಗಿದೆ ಎಂದು ಸಚಿವರು ಹೇಳಿದರು.

 

ग्रीन हाइड्रोजन से चलने वाली कार से संसद पहुँचे श्री जी। ग्रीन हाइड्रोजन का उत्पादन होगा, इसके स्टेशन होंगे और देश का आयात भी बचेगा : केंद्रीय मंत्री श्री नितिन गडकरी जी। pic.twitter.com/iqw1Xz2Upx

— Office Of Nitin Gadkari (@OfficeOfNG)

 

ಈ ತಿಂಗಳ ಆರಂಭದಲ್ಲಿ, ಸಚಿವರು ಭಾರತದ ಮೊದಲ ಹೈಡ್ರೋಜನ್ ಆಧಾರಿತ ಸುಧಾರಿತ ಇಂಧನ ಕೋಶ ಎಲೆಕ್ಟ್ರಿಕ್ ವಾಹನ ಟೊಯೋಟಾ ಮಿರಾಯನ್ನು ಪ್ರಾರಂಭಿಸಿದರು. ಈ ವೇಳೆ "ಗ್ರೀನ್ ಹೈಡ್ರೋಜನ್ - ಭಾರತವನ್ನು 'ಇಂಧನ ಸ್ವಾವಲಂಬಿ' ಮಾಡಲು ಸಮರ್ಥ, ಪರಿಸರ ಸ್ನೇಹಿ ಮತ್ತು ಸುಸ್ಥಿರ ಇಂಧನ ಮಾರ್ಗ" ಎಂದು ಗಡ್ಕರಿ ಟ್ವೀಟ್ ಮಾಡಿದ್ದರು. ತಾವೇ ಹೈಡ್ರೋಜನ್ ಚಾಲಿತ ಕಾರನ್ನು ಬಳಸುವುದಾಗಿ ಜನವರಿಯಲ್ಲಿ ಗಡ್ಕರಿ ಘೋಷಿಸಿದ್ದರು
 

click me!