*ವಿದ್ಯಾರ್ಥಿಗಳಿಗೆ ಎಸ್‌ಡಿಪಿಐನಿಂದ ಬ್ಯಾಡ್ಜ್ ವಿತರಣೆ
*ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮವಿಲ್ಲ : ಬಿಜೆಪಿ
*ದೂರು ದಾಖಲಿಸಿದ ಪೇರೆಂಟ್ ಟೀಚರ್ ಅಸೋಸಿಯೇಷನ್
ಪಟ್ಟಣಂತಿಟ್ಟ (ಡಿ. 07): 1992ರ ಡಿ.6ರಂದು ಕರಸೇವಕರಿಂದ ಧ್ವಂಸವಾದ ಉತ್ತರ ಪ್ರದೇಶದ ಬಾಬ್ರಿ ಮಸೀದಿ (Demolition of the Babri Masjid) ಘಟನೆ ವಿರೋಧಿಸಿ ಸೋಮವಾರ ಕೇರಳದಲ್ಲಿ (Kerala) ಕೆಲ ಸಂಘಟನೆಗಳು ಬಾಬ್ರಿ ದಿನಾಚರಣೆ ಆಚರಿಸಿವೆ. ಈ ವೇಳೆ ಶಾಲೆಯ ಮುಂದೆ ವಿದ್ಯಾರ್ಥಿಗಳನ್ನು ತಡೆದ ಕೆಲ ಅಪರಿಚಿತ ವ್ಯಕ್ತಿಗಳು, ಅವರ ಎದೆಯ ಭಾಗದಲ್ಲಿ ‘ನಾನು ಬಾಬ್ರಿ’ (I am Babri Badges) ಎಂಬ ಘೋಷಣೆಯ ಬ್ಯಾಡ್ಜ್‌ಗಳನ್ನು ಹಾಕಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಪಟ್ಟಣಂತಿಟ್ಟಜಿಲ್ಲೆಯ ಕೊಟ್ಟಾಂಗಲ್‌ನಲ್ಲಿರುವ ಸೇಂಟ್ ಜಾಜ್‌ರ್ ಪ್ರೌಢಶಾಲೆಯ ‘ಪೇರೆಂಟ್ ಟೀಚರ್ ಅಸೋಸಿಯೇಷನ್’(Parent Teacher Association) ದೂರು ದಾಖಲಿಸಿದೆ.
ಈ ಘಟನೆ ಬಗ್ಗೆ ದೂರು ದಾಖಲಿಸಿರುವ ಜಿಲ್ಲಾ ಬಿಜೆಪಿ ಘಟಕ, ಕೋಮು-ಗಲಭೆ ಸೃಷ್ಟಿಸುವ ಭಾಗವಾಗಿ ಎಸ್‌ಡಿಪಿಐ (SDPI) ಕಾರ್ಯಕರ್ತರು, ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ನಾನು ಬಾಬ್ರಿ ಎಂಬ ಬ್ಯಾಡ್ಜ್‌ಗಳನ್ನು ನೀಡಿದ್ದಾರೆ. ಪಂಚಾಯತ್‌ನಲ್ಲಿ ಎಸ್‌ಡಿಪಿಐ ಬೆಂಬಲದೊಂದಿಗೆ ಎಡಪಂಥೀಯ ಸಿಪಿಎಂ (CPM) ಆಡಳಿತ ನಡೆಸುತ್ತಿದೆ. ಇದೇ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದೆ. ಈ ಬೆನ್ನಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ವಿ.ಎ.ಸೂರಜ್ ( V A Sooraj) ಕೂಡ ಪೊಲೀಸರಿಗೆ ದೂರು ನೀಡಿದ್ದು, ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಎಸ್‌ಡಿಪಿಐ ಕಾರ್ಯಕರ್ತರು ತಡೆದು ಬ್ಯಾಡ್ಜ್ ಧರಿಸುವಂತೆ ಒತ್ತಾಯಿಸಿದ್ದಾರೆ. ಎಸ್‌ಡಿಪಿಐ ಕಾರ್ಯಕರ್ತರು ಕೋಮು ಉದ್ವಿಗ್ನತೆಯನ್ನು (Communal Violence) ಸೃಷ್ಟಿಸಲು ಬ್ಯಾಡ್ಜ್‌ಗಳು ವಿತರಿಸಿದ್ದಾರೆ ಎಂದು ಆರೋಪಿಸಿದ್ದಾರೆ..
ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮವಿಲ್ಲ!
"ಎಸ್‌ಡಿಪಿಐ ಬೆಂಬಲದೊಂದಿಗೆ ಸಿಪಿಎಂ ಪಂಚಾಯತ್ ಅನ್ನು ಆಳುತ್ತಿದೆ ಮತ್ತು ಪೊಲೀಸರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಫೇಸ್‌ಬುಕ್ ಮತ್ತು ಟ್ವೀಟರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದ ಪೆರುಂಪಟ್ಟಿ ಪೊಲೀಸ್ ಠಾಣೆಯ (Perumpatty police station) ಪೊಲೀಸ್ ಅಧಿಕಾರಿ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. "ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ನೀಡಿದ ವ್ಯಕ್ತಿಗಳು ಮತ್ತು ಅವರ ರಾಜಕೀಯ ಹಿನ್ನೆಲೆ ಬಗ್ಗೆ ನಾವು ಇನ್ನೂ ದೃಢೀಕರಿಸಬೇಕಾಗಿದೆ" ಎಂದು ಅವರು ತಿಳಿಸಿದ್ದಾರೆ.
Is Kerala another Syria in the making? The SDPI is forcefully pasting "I Am Babari" sticker on the students of Chungappara St. George School in Kottangal Panchayat, which is ruled by the - SDPI alliance. Why is CM silent? Condemnable. pic.twitter.com/IT46oVjPN4
— K Surendran (@surendranbjp)
ಬಾಬ್ರಿ ಮಸೀದಿ ಧ್ವಂಸದ ವೇಳೆ ಸಿಎಂ ಆಗಿದ್ದ, ಹಿಂದುತ್ವದ ಪ್ರಖರ ಪ್ರತಿಪಾದಕ ಸಿಂಗ್!
''ಮಕ್ಕಳಿಗೆ ಬ್ಯಾಡ್ಜ್ ಹಾಕಿಸಿದವರು ಯಾರು ಎಂಬುದು ನಮಗೆ ತಿಳಿದಿಲ್ಲ. ಶಾಲಾ ಕಾಂಪೌಂಡ್ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಯ ಮುಂದೆ ಬಂದಾಗ ಬ್ಯಾಡ್ಜ್ ವಿತರಿಸಲಾಯಿತು. ಶಿಕ್ಷಕರೇ ಬ್ಯಾಡ್ಜ್‌ಗಳನ್ನು ವಿತರಿಸಿದರು. ತರಗತಿಯಲ್ಲಿ ಮಕ್ಕಳು ಬ್ಯಾಡ್ಜ್‌ಗಳನ್ನು ಹಾಕಿಕೊಂಡಿರುವುದನ್ನು ಗಮನಿಸಿದ ಶಾಲೆಯವರು ಕೂಡಲೇ ಬ್ಯಾಡ್ಜ್‌ಗಳನ್ನು ತೆಗೆಯುವಂತೆ ಮಕ್ಕಳಿಗೆ ಸೂಚಿಸಿದರು ಎಂದು ಪಿಟಿಎ ಅಧ್ಯಕ್ಷ ಕೊಚುಮನ್ ವಡಕ್ಕೆಲ್ ಹೇಳಿದ್ದಾರೆ.
ಅಯೋಧ್ಯೆ ಹೊಸ ಮಸೀದಿ ಜಾಗವೂ ಈಗ ವಿವಾದದಲ್ಲಿ!
ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿದ್ದ ಬಾಬ್ರಿ ಮಸೀದಿಯ ಬದಲಾಗಿ ನಗರದ ಹೊರಗೆ ನಿರ್ಮಿಸಲು ಉದ್ದೇಶಿಲಾಗಿರುವ ಹೊಸ ಮಸೀದಿ ಜಾಗವೂ ಇದೀಗ ಭೂ ವಿವಾದಕ್ಕೆ ಸಿಲುಕಿದೆ. ಈ ಭೂಮಿಗೆ ತಮಗೆ ಸೇರಿದ್ದು ಎಂದು ವಾದಿಸಿ ದೆಹಲಿ ಮೂಲದ ಇಬ್ಬರು ಸೋದರಿಯರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಫೆ.8ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್ ಮೌರ್ಯ!
ತಮ್ಮ ತಂದೆ ಗ್ಯಾನ್‌ಚಂದ್ 1947ರಲ್ಲಿ ದೇಶ ವಿಭಜನೆ ವೇಳೆ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಅಯೋಧ್ಯೆ ಬಂದಿದ್ದರು. ಈ ವೇಳೆ ಅವರಿಗೆ ಸರ್ಕಾರ 28 ಎಕರೆ ಭೂಮಿಯನ್ನು 5 ವರ್ಷಗಳಿಗೆಂದು ನೀಡಿತ್ತು. ಬಳಿಕವೂ ಅದರ ಉಸ್ತುವಾರಿ ನಮ್ಮ ಬಳಿಯೇ ಇತ್ತು. ಈಗಲೂ ಕಂದಾಯ ದಾಖಲೆಗಳು ಅವರ ಹೆಸರಲ್ಲೇ ಇವೆ. ಹೀಗಾಗಿ ಜಾಗ ನಮಗೆ ಸೇರಿದ್ದು ಎಂದು ರಾಣಿ ಕಪೂರ್ ಮತ್ತು ರಾಮರಾಣಿ ಎಂಬಿಬ್ಬರು ಸೋದರಿಯರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.