*ಒಮಿಕ್ರೋನ್ ಭೀತಿ : ಹೆಚ್ಚುವರಿ ಡೋಸ್ ಗೊಂದಲ
*3ನೇ ಡೋಸ್ ನೀಡಲು ಸರ್ಕಾರಕ್ಕೆ ಐಎಂಎ ಆಗ್ರಹ
*ಹೆಚ್ಚುವರಿ ಡೋಸ್: ಒಮ್ಮತಕ್ಕೆ ಎನ್‌ಟಿಜಿಎ ವಿಫಲ
ನವದೆಹಲಿ(ಡಿ. 07): ಒಮಿಕ್ರೋನ್ ತೀವ್ರಗೊಳ್ಳುತ್ತಿರುವ (Covid 19 Variant Omicron) ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಆರೋಗ್ಯ ಕಾರ್ಯಕರ್ತರು (Healthe Workers) ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮೂರನೇ ಡೋಸ್ ನೀಡಬೇಕೇ? ಬೇಡವೇ ಎಂಬುದರ ಕುರಿತು ಇನ್ನೂ ಗೊಂದಲ ಮುಂದುವರೆದಿದೆ. ಮೇಲ್ಕಂಡ ವರ್ಗಕ್ಕೆ ಹೆಚ್ಚುವರಿ ಡೋಸ್ ಕೋವಿಡ್ ಲಸಿಕೆ ನೀಡುವ ಸಂಬಂಧ ಘೋಷಣೆ ಮಾಡುವಂತೆ ಭಾರತೀಯ ವೈದ್ಯ ಸಂಘ (Indian Medical Association) ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಇದೇ ವೇಳೆ 12-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾಪಕ್ಕೆ ಚುರುಕು ನೀಡುವಂತೆ ಸೂಚಿಸಿದೆ. ಸದ್ಯ ಕೋವಿಡ್ ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಮೂರನೆ ಅಲೆಯು ವ್ಯಾಪಕವಾಗಿ ಹರಡಬಹುದು ಎಂದು ಎಚ್ಚರಿಸಿದೆ.
Omicron Variant: ಒಮಿಕ್ರೋನ್, ಇಲ್ಲಿಯೂ ಒಂದು ಶುಭ ಸುದ್ದಿ ಇದೆ!
ಆದರೆ ಇದೇ ವಿಷಯದ ಕುರಿತು ಸಮಾಲೋಚನೆ ನಡೆಸಲು ಸೋಮವಾರ ಇಲ್ಲಿ ಸಭೆ ಸೇರಿದ್ದ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಗುಂಪಿನ ಸಭೆ(ಎನ್‌ಟಿಜಿಎ) ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಆದರೆ ಈ ಸಭೆಯಲ್ಲಿ ರೋಗದ ವಿರುದ್ಧ ಪ್ರತಿಕಾಯ ಸಾಮರ್ಥ್ಯವಿಲ್ಲದವರಿಗೆ ಹೆಚ್ಚುವರಿ ಡೋಸ್ ಕುರಿತು ಸದಸ್ಯರ ಮಧ್ಯೆ ಒಮ್ಮತ ಮೂಡಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಬೂಸ್ಟರ್ ಡೋಸ್ ಕುರಿತಾಗಿ ಹೆಚ್ಚಿನ ಅಧ್ಯಯನಗಳ ಅಗತ್ಯದ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಬೂಸ್ಟರ್ ಡೋಸ್ ಕುರಿತಾಗಿ ಚರ್ಚೆ ನಡೆಸಲಾಗಲಿಲ್ಲ ಎನ್ನಲಾಗಿದೆ.
ಮರುಸೋಂಕು: ಒಮಿಕ್ರೋನ್ ಸಾಮರ್ಥ್ಯ 3 ಪಟ್ಟು ಹೆಚ್ಚು
ಜಿನೆವಾ: ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮ್ಮೆ ಸೋಂಕು ತಗುಲಿದವರಿಗೆ 90 ದಿನಗಳ ಬಳಿಕ ಮರು ಸೋಂಕು ತಗುಲಿಸುವ ಸಾಮರ್ಥ್ಯವು ಡೆಲ್ಟಾವೈರಸ್‌ಗೆ ಹೋಲಿಸಿದರೆ ಒಮಿಕ್ರೋನ್ ರೂಪಾಂತರಿಗೆ ಮೂರು ಪಟ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯ ಪಟ್ಟಿದ್ದಾರೆ. ಒಮಿಕ್ರೋನ್ ಪ್ರಕರಣಗಳ ಏರಿಕೆ ಹಾಗೂ ಸೋಂಕಿತರು ಆಸ್ಪತ್ರೆಗೆ ದಾಖಲಾದ ಸಂಖ್ಯೆಗಳಲ್ಲಿ ಏರಿಕೆಯ ನಡುವೆ ಸಾಕಷ್ಟುದಿನಗಳ ಅಂತರ ಕಂಡುಬಂದಿದೆ. ಹೀಗಾಗಿ ಒಮಿಕ್ರೋನ್ ಪ್ರಭಾವ ಎಷ್ಟುತೀವ್ರವಾಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಎರಡರಿಂದ ಮೂರು ವಾರಗಳ ಕಾಲ ಕಾಯಬೇಕಾಗಿದೆ ಎಂದಿದ್ದಾರೆ.
Covid Guidelines:ತಜ್ಞರ ವರದಿಗಾಗಿ ಕಾಯುತ್ತಿದೆ ರಾಜ್ಯ ಸರ್ಕಾರ, ಜಾರಿಯಾಗುತ್ತಾ 50-50 ನಿಯಮ?
ಒಮಿಕ್ರೋನ್ ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಲಸಿಕೆಯನ್ನು ಪಡೆಯದವರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ಆಘಾತಕಾರಿ. ಬಹಳಷ್ಟುದೇಶಗಳಲ್ಲಿ ಮಕ್ಕಳಿಗೆ ಯಾವುದೇ ಲಸಿಕೆಯ ರಕ್ಷಣೆಯನ್ನು ನೀಡಲಾಗಿಲ್ಲ. ಕೆಲವೇ ದೇಶಗಳು ಮಕ್ಕಳಿಗೂ ಲಸಿಕೆ ನೀಡಲು ಮುಂದಾಗಿವೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಒಮಿಕ್ರೋನ್‌ಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
8306 ಕೇಸ್, 211 ಸಾವು: ಸಕ್ರಿಯ ಕೇಸ್ 552 ದಿನದ ಕನಿಷ್ಠಕ್ಕೆ!
ದೇಶದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 8,306 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ಕೇರಳದ ಹಳೆ ಸಾವೂ (161) ಸೇರಿ 211 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.46 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,73,537ಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 98,416ಕ್ಕೆ ಇಳಿಕೆಯಾಗಿದೆ. ಇದು 552 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಇನ್ನು ಚೇತರಿಕೆ ಪ್ರಮಾಣ ಶೇ.98.35ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.94ರಷ್ಟಿದೆ. ಒಟ್ಟು ಸೋಕಿತರ ಪೈಕಿ 3.40 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 127.93 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.