
ನವದೆಹಲಿ(ಅ.25): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Kempegowda International Airport Bengaluru) ಪುಟ್ಟಬಾಲಕನೊಬ್ಬ ಸೇನಾ ವಾಹನದಲ್ಲಿ(Army Vehicle) ಆಗಮಿಸಿದ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.
"
ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ(MP Rajeev Chandrasekhar) ಅವರು ಕೂಡ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ದೇಶಭಕ್ತಿಯನ್ನು ಈ ಬಾಲಕನಿಂದ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸೇನಾ ವಾಹನದ ಬಳಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟುಕೊಂಡು ತೆರಳಿದ ಬಾಲಕ ವಾಹನದ ಮುಂದೆ ನಿಂತು ಅದರಲ್ಲಿದ್ದ ಸಿಬ್ಬಂದಿಗೆ ಸೆಲ್ಯೂಟ್(Salute) ಮಾಡಿದ್ದಾನೆ. ಸೇನಾ ಸಿಬ್ಬಂದಿ ಕೂಡ ಬಾಲಕನಿಗೆ ಪ್ರತಿವಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಪ್ರತಿಯೊಬ್ಬ ದೇಶವಾಸಿಗಳ ದೇಶಭಕ್ತಿಯನ್ನು ಜಾಗೃತಗೊಳಿಸುತ್ತದೆ. ಅಭಿಷೇಕ್ ಕುಮಾರ್ ಝಾ ಎಂಬುವವರ ಮೊದಲು ಈ ವಿಡಿಯೋ ಟ್ವೀಟ್ ಮಾಡಿದ್ದು, ಈ ಹೆಮ್ಮೆಯ ಕ್ಷಣವನ್ನು ತಮ್ಮ ಸ್ನೇಹಿತ ಸೆರೆಹಿಡಿದಿದ್ದಾಗಿ ಬರೆದುಕೊಂಡಿದ್ದಾರೆ. ಮುಗ್ದ ಮಗುವಿನ ದೇಶಪ್ರೇಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಲಕ್ಷಾಂತರ ಜನ ಈ ವಿಡಿಯೋ ವೀಕ್ಷಿಸಿದ್ದಲ್ಲದೇ ರೀಟ್ವೀಟ್ ಕೂಡ ಮಾಡಿದ್ದಾರೆ.
ಬಾಲಕ ಸೈನಿಕರಿಗೆ ನೀಡುವ ಗೌರವ, ಪ್ರತಿಯಾಗಿ ಸೈನಿಕರು ಬಾಲಕನಿಗೆ ಸಲ್ಲಿಸುವ ಪ್ರತಿವಂದನೆಯ ವಿಡಿಯೋ ಕೆಲವೇ ಕ್ಷಣಗಳದ್ದಾದರೂ, ಅಭೂತಪೂರ್ವ ಸಂದೇಶ ರವಾನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ