ನವದೆಹಲಿ: ಕಳೆದ 4 ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್, ನೂರಾರು ಪೊಲೀಸರ ಕಣ್ಗಾವಲಿನ ಹೊರತಾಗಿಯೂ ತಪ್ಪಿಸಿಕೊಂಡಿದ್ದು ಹೇಗೆ ಎಂಬ ವಿಷಯ ಹಲವು ಕಡೆ ಸಿಸಿಟೀವಿಗಳಲ್ಲಿ ಸೆರೆಯಾಗಿದೆ. ಪೊಲೀಸರು ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಅಮೃತ್‌ಪಾಲ್ ಮರ್ಸಿಡೆಸ್‌ನ ಎಸ್‌ಯುವಿ ಒಂದರಲ್ಲಿ ಮುಂಭಾಗದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವುದು ಕ್ಯಾಮೆರಾವೊಂದರಲ್ಲಿ ರೆಕಾರ್ಡ್ ಆಗಿದೆ. ಬಳಿಕ ತನ್ನ ಧಾರ್ಮಿಕ ವಸ್ತ್ರಗಳನ್ನು ಕಳಚಿಟ್ಟು, ಶರ್ಚ್ ಮತ್ತು ಪ್ಯಾಂಟ್ ಧರಿಸಿ, ತನ್ನ ಟರ್ಬನ್ ಅನ್ನು ಸಹ ಬದಲಾಯಿಸಿ ಮಾರುತಿ ಬ್ರೆಜಾ ಕಾರಿನಲ್ಲಿ ಪರಾರಿಯಾಗಿದ್ದಾನೆ. ಮಾರುತಿ ಕಾರಿನಲ್ಲಿ ಆತ ಪ್ರಯಾಣಿಸುತ್ತಿರುವುದು ಜಲಂಧರ್ ಬಳಿಯ ಟೋಲ್‌ಗೇಟ್ ಬಳಿ ಸಿಸಿ ಕ್ಯಾಮರಾದಲ್ಲಿ (CC Camera) ರೆಕಾರ್ಡ್ ಆಗಿದೆ.
ಇದಾದ ಬಳಿಕ ರಸ್ತೆಯ ಮಧ್ಯೆದಲ್ಲಿಯೇ ಮತ್ತೊಮ್ಮೆ ತನ್ನ ಬಟ್ಟೆಗಳನ್ನು ಬದಲಿಸಿಕೊಂಡು ತನ್ನ ಇಬ್ಬರು ಸಹಚರರೊಂದಿಗೆ ಬೈಕ್‌ನಲ್ಲಿ ಪರಾರಿಯಾಗುತ್ತಿರುವುದು ಮತ್ತೊಂದು ಕ್ಯಾಮರಾದಲ್ಲಿ ದಾಖಲಾಗಿದೆ. ಹೀಗೆ ನಗರದಿಂದ ಕಾರುಗಳನ್ನು ಬದಲಾಯಿಸುತ್ತಾ ಹೊರಭಾಗಕ್ಕೆ ಅಮೃತ್‌ಪಾಲ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಇದೀಗ ಅಮೃತ್‌ಪಾಲ್‌ಗಾಗಿ ಹುಡುಕಾಟವನ್ನು ತೀವ್ರಗೊಳಿಸಿರುವ ಪೊಲೀಸರು ಆತ ಯಾವ್ಯಾವ ವೇಷದಲ್ಲಿರಬಹುದು ಎಂಬ ಪೋಟೋಗಳನ್ನು ಬಿಡುಗಡೆ ಮಾಡಿದ್ದರೆ. ಆತ ಪ್ರಯಾಣಿಸಿದ್ದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದು, ಅಮೃತ್‌ಪಾಲ್‌ಗೆ ಸಹಾಯ ಮಾಡಿದ ನಾಲ್ವರನ್ನು ಸಹ ಬಂಧಿಸಲಾಗಿದೆ.
Operation Amritpal: '80 ಸಾವಿರ ಪೊಲೀಸರಿದ್ದೀರಿ ಒಬ್ಬನನ್ನು ಹಿಡಿಯೋಕೆ ಆಗಲ್ವಾ?' ಹೈಕೋರ್ಟ್ ಛೀಮಾರಿ!
80000 ಪೊಲೀಸರಿದ್ದರೂ ಅಮೃತ್‌ಪಾಲ್ ಹೇಗೆ ತಪ್ಪಿಸಿಕೊಂಡ
ಚಂಡೀಗಢ: ನೀವು 80 ಸಾವಿರ ಮಂದಿ ಇದ್ದರೂ ಸಹ, ಅಮೃತ್‌ಪಾಲ್ ಸಿಂಗ್ ತಪ್ಪಿಸಿಕೊಂಡಿದ್ದು ಹೇಗೆ, ಇದು ನಿಜಕ್ಕೂ ರಾಜ್ಯ ಪೊಲೀಸ್ ಗುಪ್ತಚರ ಇಲಾಖೆಯ (Intelligence Failure) ವಿಫಲತೆ’ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ (Punjab Haryana Highcourt) ಮಂಗಳವಾರ ಪಂಜಾಬ್ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ಅಮೃತ್‌ಪಾಲ್‌ನನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿದೆ ಎಂದು ಆತನ ಪರ ವಕೀಲ ಇಮಾನ್ ಸಿಂಗ್ ಖಾರಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾ . ಎನ್.ಎಸ್.ಶೇಖಾವತ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೃತ್‌ಪಾಲ್‌ನ ಸಂಗಡಿಗರನ್ನು ಬಂಧಿಸಿದ್ದೀರಿ, ನೀವು 80 ಸಾವಿರ ಜನರಿದ್ದರೂ ಸಹ ಅಮೃತ್‌ಪಾಲ್ ಒಬ್ಬ ಮಾತ್ರ ಹೇಗೆ ತಪ್ಪಿಸಿಕೊಂಡ. ಆತ ಪರಾರಿಯಾಗಿರುವುದು ನಿಜವಾಗಿದ್ದರೆ, ಇದು ರಾಜ್ಯ ಪೊಲೀಸ್ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಅವರು ಹೇಳಿದರು.
ಖಲಿಸ್ತಾನಿ ಉಗ್ರ ಅಮೃತ್ ಪಾಕ್‌ಗೆ ಪರಾರಿಗೆ ಸಜ್ಜು: ಗಡಿಯಲ್ಲಿ ಕಟ್ಟೆಚ್ಚರಕ್ಕೆ ಬಿಎಸ್‌ಎಫ್‌ಗೆ ಕೇಂದ್ರ ಸೂಚನೆ
ಇದಕ್ಕೆ ಪ್ರತ್ರಿಯಿಸಿದ ಪಂಜಾಬ್‌ನ ಅಡ್ವೋಕೇಟ್ ಜನರಲ್(Advocate General) ವಿನೋದ್ ಗಾಯ್ (vinod gai), ಅಮೃತ್‌ಪಾಲ್‌ನನ್ನು(Amritpal singh) ಬಂಧಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೊರಡಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ