ಕೇಂದ್ರದ ಪಿಎಫ್‌ಐ ನಿಷೇಧ ನಿರ್ಧಾರ ಎತ್ತಿಹಿಡಿದ ಯುಎಪಿಎ ಟ್ರಿಬ್ಯುನಲ್‌

By Kannadaprabha NewsFirst Published Mar 22, 2023, 11:28 AM IST
Highlights

ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತದೆ ಎಂಬ ಕಾರಣಕ್ಕೆ ದೇಶದಲ್ಲಿ ಪಿಎಫ್‌ಐ ಸಂಘಟನೆಗೆ ನಿಷೇಧ ಹೇರಿದ ಕೇಂದ್ರ ಸರ್ಕಾರದ ಆದೇಶವನ್ನು ಅಕ್ರಮ ಚಟುವಟಿಕೆಗಳ ನಿಷೇಧ ಕಾಯ್ದೆ ಟ್ರಿಬ್ಯುನಲ್‌ (ಯುಎಪಿಎ-ಟ್ರಿಬ್ಯುನಲ್‌) ಎತ್ತಿಹಿಡಿದಿದೆ.

ನವದೆಹಲಿ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತದೆ ಎಂಬ ಕಾರಣಕ್ಕೆ ದೇಶದಲ್ಲಿ ಪಿಎಫ್‌ಐ ಸಂಘಟನೆಗೆ ನಿಷೇಧ ಹೇರಿದ ಕೇಂದ್ರ ಸರ್ಕಾರದ ಆದೇಶವನ್ನು ಅಕ್ರಮ ಚಟುವಟಿಕೆಗಳ ನಿಷೇಧ ಕಾಯ್ದೆ ಟ್ರಿಬ್ಯುನಲ್‌ (ಯುಎಪಿಎ-ಟ್ರಿಬ್ಯುನಲ್‌) ಎತ್ತಿಹಿಡಿದಿದೆ.

ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದೆ ಎಂಬ ಕಾರಣಕ್ಕೆ ಕಳೆದ ವರ್ಷ ಸೆ.28ರಂದು ಯುಎಪಿಎಯ ಸೆಕ್ಷನ್‌ 3ರ ಪ್ರಕಾರ ಪಿಎಫ್‌ಐ ಮೇಲೆ ಸರ್ಕಾರ 5 ವರ್ಷಗಳ ಕಾಲ ನಿಷೇಧ ವಿಧಿಸಿತ್ತು. ದೇಶದಲ್ಲಿ ಯಾವುದೇ ಸಂಘಟನೆಗಳನ್ನು ಯುಎಪಿಎ ಅಡಿಯಲ್ಲಿ ನಿಷೇಧಿಸಿದರೆ ಅದಕ್ಕೆ ಯುಎಪಿಎ ಟ್ರಿಬ್ಯುನಲ್‌ನ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಟ್ರಿಬ್ಯುನಲ್‌ ಅನುಮತಿ ಕಾಯದೇ ನಿಷೇಧ ವಿಧಿಸಲು ಅವಕಾಶವಿದ್ದು, ಬಳಿಕ ಆ ಆದೇಶವನ್ನು ಟ್ರಿಬ್ಯುನಲ್‌ ಪರಿಶೀಲಿಸಲಿದೆ. ಪ್ರಸ್ತುತ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾದ, ಟ್ರಿಬ್ಯುನಲ್‌ನ ಮುಖ್ಯ ನ್ಯಾಯಾಧೀಶ ದಿನೇಶ್‌ ಕುಮಾರ್‌ ಶರ್ಮಾ ಎತ್ತಿಹಿಡಿದಿದ್ದಾರೆ.

ಕರ್ನಾಟಕದ PFI ಕಾರ್ಯಕರ್ತರಿಗೆ ಕೇರಳದ ನಿವೃತ್ತ ಪೊಲೀಸರನ್ನು ಕರೆಸಿ ಶಸ್ತ್ರಾಸ್ತ್ರ ತರಬೇತಿ!

 ಕೋಮುಗಲಭೆ ಸೃಷ್ಟಿಸಲು ಹಾಗೂ ಧರ್ಮಗಳ ನಡುವೆ ದ್ವೇಷ ಬಿತ್ತಲು ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ನಿಷೇಧಿತ ಪಿಎಫ್ಐ (Popular Front of India)ದ 15 ಮಂದಿ ಮುಖಂಡರ ವಿರುದ್ಧ ಎನ್‌ಐಎ(NIA) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಅದರಲ್ಲಿ, ಕರ್ನಾಟಕದ ಪಿಎಫ್‌ಐ ಕಾರ್ಯಕರ್ತರಿಗೆ ಕೇರಳದ ನಿವೃತ್ತ ಪೊಲೀಸರನ್ನು ಕರೆಸಿ ಶಸ್ತ್ರಾಸ್ತ್ರ ತರಬೇತಿ ಕೊಡಿಸಲಾಗುತ್ತಿತ್ತು ಎಂಬ ಆಘಾತಕಾರಿ ಸಂಗತಿಯಿದೆ.

ಬೆಂಗ್ಳೂರು ಸೇರಿ 77 ಕಡೆ ಪಿಎಫ್‌ಐ ಬ್ಯಾಂಕ್‌ ಖಾತೆ ಜಪ್ತಿ

ಕಳೆದ ಸೆಪ್ಟೆಂಬರ್‌ನಲ್ಲಿ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ(KG Halli Police station)ಯಲ್ಲಿ 19 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪೈಕಿ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ 15 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಈ ಪ್ರಕರಣವನ್ನು ಎಸಿಪಿ ದರ್ಜೆ ಅಧಿಕಾರಿ ತನಿಖೆ ನಡೆಸುತ್ತಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 10,196 ಪುಟಗಳ ದೋಷಾರೋಪಪಟ್ಟಿಸಲ್ಲಿಸಲಾಗಿದೆ. ಬಂಧಿತ 15 ಆರೋಪಿಗಳ ಪೈಕಿ 9 ಕಾರ್ಯಕರ್ತರ ವಿರುದ್ಧ ಯುಎಪಿಎ ಕಾಯ್ದೆ ಜಾರಿ ಮಾಡಿದ್ದು, ಉಳಿದ ಆರು ಮಂದಿ ವಿರುದ್ಧ ಐಪಿಸಿ 153ಎ ಅಡಿ ಆರೋಪಪಟ್ಟಿಸಲ್ಲಿಸಲಾಗಿದೆ.


ಮೊದಲು ದಕ್ಷಿಣ ಭಾರತ ವಶ, ನಂತರ ಉತ್ತರದ ಮೇಲೆ ದಾಳಿ: ನಿಷೇಧಿತ ಪಿಎಫ್‌ಐ ಸ್ಫೋಟಕ ಸಂಚು ಬಯಲು!

ಕೇರಳದಲ್ಲಿ ಪಿಎಫ್‌ಐ ಬಲಗೊಳಿಸಿದ ಮಾದರಿಯಲ್ಲಿ ರಾಜ್ಯದಲ್ಲಿ ಸಂಘಟನೆ ಬೆಳೆಸಲು ಆರೋಪಿಗಳು ಜಿಲ್ಲಾ ಮಟ್ಟದಲ್ಲಿ ಟಾಸ್‌್ಕ ಪೋರ್ಸ್‌ ಸಮಿತಿ ರಚಿಸಿ ಮುಸ್ಲಿಂ ಸಮುದಾಯದ ಯುವಕರನ್ನು ಸೆಳೆಯುತ್ತಿದ್ದರು. ಸಭೆಗಳಲ್ಲಿ ಕೋಮು ಗಲಭೆ, ಅನ್ಯಧರ್ಮಗಳ ವಿರುದ್ಧ ಹೋರಾಟಕ್ಕೆ ಪ್ರಚೋದಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡು ಗಡಿ ಭಾಗದ ಅರಣ್ಯಪ್ರದೇಶಗಳಲ್ಲಿ ತರಬೇತಿ ಶಿಬಿರ ಏರ್ಪಡಿಸಿ, ಯುವಕರಿಗೆ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಹಲವು ರೀತಿಯ ತರಬೇತಿ ಕೊಡಿಸುತ್ತಿದ್ದರು. ಈ ಶಿಬಿರಗಳಿಗೆ ಕೇರಳದ ನಿವೃತ್ತ ಪೊಲೀಸ್‌ ಅಧಿಕಾರಿಗಳನ್ನು ಕರೆಸಿ ತರಬೇತಿ ಕೊಡಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

click me!