ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ: ಬ್ಲ್ಯಾಕ್‌ಮೇಲ್

Published : Jan 02, 2026, 09:34 AM IST
up intern doctor fake marriage promise rape nursing student kaiserbagh case

ಸಾರಾಂಶ

ಮದುವೆಯ ಭರವಸೆ ನೀಡಿ ವೈದ್ಯನೇ ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾ*ಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಿಯಾಸರ್‌ಬಾಗ್ ಸಮೀಪ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವೈದ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲಕ್ನೋ: ಮದುವೆಯ ಭರವಸೆ ನೀಡಿ ವೈದ್ಯನೇ ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾ*ಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಿಯಾಸರ್‌ಬಾಗ್ ಸಮೀಪ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವೈದ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮದುವೆಯ ನೆಪದಲ್ಲಿ ಆರೋಪಿಯು ತನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಿಯಾಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ವೈದ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಯಾದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ. ಆತ ತನ್ನನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾ*ಚಾರ ಎಸಗಿದ್ದಾನೆ ನಂತರ ಮದುವೆಯ ಪ್ರಸ್ತಾಪವಿಟ್ಟಾಗ ನನ್ನ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನರ್ಸಿಂಗ್ ವಿದ್ಯಾರ್ಥಿನಿ ದೂರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಿಯಾಸರ್‌ಬಾಗ್ ಉಪ ಪೊಲೀಸ್ ಆಯುಕ್ತ ವಿಶ್ವಜೀತ್ ಶ್ರೀವಾಸ್ತವ ಅವರು, ಇಂಟರ್ನ್ ವೈದ್ಯರ ಹಿನ್ನೆಲೆ ಮತ್ತು ವಿಳಾಸಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ನರ್ಸಿಂಗ್ ವಿದ್ಯಾರ್ಥಿನಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಹೇಳಿದರು.

ಮದುವೆಯ ನೆಪದಲ್ಲಿ ಆರೋಪಿಯು ತನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಿಯಾಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮದುವೆಯನ್ನು ಅಧಿಕೃತಗೊಳಿಸುವಂತೆ ಆಕೆ ಒತ್ತಾಯಿಸಿದಾಗ, ಆರೋಪಿ ನಿರಾಕರಿಸಿದ್ದಲ್ಲದೆ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಹದಿನೈದು ದಿನಗಳಲ್ಲಿ ಸಂಸ್ಥೆಯಲ್ಲಿ ವರದಿಯಾದ ಇಂತಹ ಎರಡನೇ ಪ್ರಕರಣ ಇದಾಗಿದೆ. ಎಫ್‌ಐಆರ್ ಪ್ರಕಾರ, ಅಲಿಗಂಜ್‌ನಲ್ಲಿರುವ ಪಿಜಿ ವಸತಿ ನಿಲಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿ, ಕೆಲವು ಸಮಯದ ಹಿಂದೆ ಕೈಸರ್‌ಬಾಗ್‌ನಲ್ಲಿರುವ ವೈದ್ಯನ ಫ್ಲಾಟ್‌ನಲ್ಲಿ ವೈದ್ಯನನ್ನು ಭೇಟಿಯಾಗಿದ್ದಳು. ವೈದ್ಯರು ತನ್ನೊಂದಿಗೆ ಸ್ನೇಹ ಬೆಳೆಸಿನಂಬಿಕೆಯನ್ನು ಗಳಿಸಿದರು ಮತ್ತು ಪ್ರಣಯ ಸಂಬಂಧಕ್ಕೆ ಸೆಳೆದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮದುವೆಯ ಭರವಸೆ ನೀಡಿ ತನ್ನ ಫ್ಲಾಟ್‌ಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ದೂರಿದ್ದಾಳೆ.

ಇದನ್ನೂ ಓದಿ:  ಘಾನಾ ಪ್ರವಾದಿಯ ಅಸಲಿ ಮುಖ ಬಯಲು: ಪ್ರವಾಹ ಆಗುತ್ತೆ ಅಂತ ಜನರ ದಾರಿ ತಪ್ಪಿಸಿದ ಪ್ರವಾದಿಯ ಬಂಧನ

ಮದುವೆಯ ವಿಷಯ ಪ್ರಸ್ತಾಪಿಸಿದ ಆರೋಪಿ ವೈದ್ಯ ಮದುವೆಗೆ ನಿರಾಕರಿಸಿದ್ದು, ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು, ತನ್ನ ಅಶ್ಲೀಲ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ. ಘಟನೆಯ ಬಗ್ಗೆ ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಕೆಜಿಎಂಯು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಬಡವನಿರಬಹುದು ಆದರೆ ಭಿಕಾರಿ ಅಲ್ಲ: ಸ್ವಾಭಿಮಾನಿ ವೃದ್ಧನ ವೀಡಿಯೋ ಭಾರಿ ವೈರಲ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ - ಕೇರಳ ಸಿಎಂ ತಿರುಗೇಟು
India Latest News Live: ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ - ಬ್ಲ್ಯಾಕ್‌ಮೇಲ್